Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗಗಿರಿಯ ಜೀವನ್ಮುಕ್ತ ಜಗದ್ಗುರುಗಳು -4. Jeevanmukta Jagadguru of Sringeri 4

Published

on

ಗುರುಮಹಿಮೆ 7

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಶುಕ್ರವಾರ ಜಗನ್ಮಾತೆ ಶ್ರೀಶಾರದೆಯ ದರ್ಶನ ಮಾಡಿಕೊಂಡು ಬರುವಾಗ, ಶ್ರೀ ಮಠದ ಆವರಣದಲ್ಲಿದ್ದ ಬಾಲವಟುಗಳು ನಮಸ್ಕಾರ ಮಾಡತ್ತಿದ್ದರು.ಗುರುಗಳು ಮಂದಹಾಸದಿಂದ ಮಕ್ಕಳಿಗೆ ದ್ರಾಕ್ಷಿ, ಕಲ್ಲುಸಕ್ಕರೆ ಪ್ರಸಾದ ನೀಡಿ ಅವರ ಹೆಸರುಗಳನ್ನು ಕೇಳಿತ್ತಿದ್ದರು,ಪ್ರತಿಯೊಬ್ಬರು ಅವರವರ ಹೆಸರನ್ನು ಹೇಳುತ್ತಿದ್ದರು.ಆಗ ಗುರುಗಳು ನಿಮ್ಮ ಮಾತಾ-ಪಿತೃಗಳು ಏಕೆ ಈ ಹೆಸರನ್ನಿಟ್ಟರು ಎಂದು ಕೇಳುತ್ತಿದ್ದರು.ಆದರೆ ಎಲ್ಲರ ಉತ್ತರ “ತಿಳಿಯದು” ಎಂದಾಗಿತ್ತು.
ಆದರೆ ಬಾಲಕ “ಶ್ರೀನಿವಾಸ”ನ ಸರದಿ ಬಂದಾಗ,ಗುರುಗಳ ಪ್ರಶ್ನೆಗೆ,ಹೆಸರನ್ನು ಕರೆಯುವುದರಿಂದಲಾದರೂ “ದೇವರ ಸ್ಮರಣೆ” ಯಾಗಲಿ ಎಂಬ ದೃಷ್ಟಿಯಿಂದ,ಈ ಹೆಸರನ್ನು ಇಟ್ಟರು ಎಂದು ಹೇಳಿದನು.ಈ ಉತ್ತರ ಗುರುದೇವರಿಗೆ ಆಶ್ಚರ್ಯವನ್ನೂ ಅತ್ಯಂತ ಸಂತೋಷವನ್ನೂ ಉಂಟುಮಾಡಿತು.ಆಗಲೇ ಬಾಲಕನತ್ತ ತಮ್ಮ ಪೂರ್ಣ “ಗುರುಕಟಾಕ್ಷ ” ಬೀರಿದ್ದರು.

ಹೀಗೆ ಗುರುದೇವರ ಕೃಪಾದೃಷ್ಟಿಗೆ ಪಾತ್ರನಾದ ಬಾಲಕ,ಬೆಂಗಳೂರಿನಿಂದ ಶೃಂಗೇರಿಗೆ ಬಂದಿದ್ದ ಶ್ರೀ ಕೈಪು ರಾಮಶಾಸ್ತ್ರಿ ಮತ್ತು ವೆಂಕಟಲಕ್ಷಮ್ಮನವರ ಸುಪುತ್ರ.ಶೃಂಗೇರಿಯಲ್ಲಿ ಉಪನಯನವಾದ ನಂತರ ತಮ್ಮೊಡನೆ ಬೆಂಗಳೂರಿಗೆ ಹಿಂದಿರುಗಲು ಒಪ್ಪದ ಪುತ್ರನನ್ನು ಆತನ ಇಚ್ಛಾನುಸಾರವಾಗಿ ಶೃಂಗೇರಿಯ ಸಂಸ್ಕೃತ ಪಾಠಶಾಲೆಗೆ ಸೇರಿಸಿದರು.ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ದರ್ಶನವು “ಇವರೇ ನನ್ನ ದಾರಿ,ಗುರಿ,ದಿಕ್ಕು” ಎಂಬ ಅರಿವು ಬಾಲ ಶ್ರೀನಿವಾಸರ ಮನದಲ್ಲಿ ಮೂಡಿಸಿತ್ತು.

ಶ್ರೀ ಗುರುವರ್ಯರು ಬಾಲ ಬ್ರಹ್ಮಚಾರಿಯನ್ನು ಒಂದು ವರ್ಷಕಾಲ ಪರೀಕ್ಷಿಸಿ ಸನ್ಯಾಸಾಶ್ರಮವನ್ನುನ್ನಿತ್ತು, “ವ್ಯಾಖ್ಯಾನ ಸಿಂಹಾಸನ”ದಲ್ಲಿ ಕೂರಿಸಿ “ಅಭಿನವ ವಿದ್ಯಾತೀರ್ಥ” ಎಂಬ ಆಶ್ರಮನಾಮವನ್ನು ಅನುಗ್ರಹಿಸಿದರು.ದಕ್ಷಿಣಾಮ್ನಾಯ ಶ್ರೀಶಾರದಾ ಪೀಠದ 10 ನೇಯ ಜಗದ್ಗುರುಗಳು “ವಿದ್ಯಾತೀರ್ಥ”ರು ಅವರಂತೆ “ಯೋಗಿ”ಮತ್ತು”ತಪಸ್ವಿ” ಆಗಲೆಂದು,ಈ ಅಭಿದಾನವನ್ನು ನೀಡಿದರು ಎಂದು ಪಂಡಿತರುಗಳು ಅಭಿಪ್ರಾಯಪಟ್ಟರು ..

English version

Guru Mahime 7

Once, Jagadguru Sri Chandrasekhara Bharathi mahaswamiji was coming out of Sri Sharadamba temple, on a Friday.
Many (Baalavatus) baala brahmacharis were offering their prostrations.
Jagadguru gave them prasadas & asked their names, Mahaswamiji also asked, why their parents have named them so….But everyone said they don’t know, except one boy, Srinivasa.
He replied, “by calling the names, one could easily remember the Lord without any effort”. Jagadguru was very impressed by his reply & blessed him heartfully.

The boy was the son of Kaipu Rama shastry & venkatalakshmamma from Bengaluru, who was initiated into Brahmopadesha at Sringeri. The Jagadguru’s darshana, blessings had strong impact on him.
He was joined to pathashala at Sringeri as he refused to go back to Bengaluru.

The Jagadguru examined Srinivasa for one year, initiated him into Sannyasa ashrama & gave him yogapatta as “Abhinava Vidya Teertha”. It was the 10th Jagadguru’s name, as the Jagadguru wanted his shishya to become a yogi & tapasvi like him.

श्री भवानी समेतं भजे मलहानिकरेश्वरम्।

3 ಅಭಿಪ್ರಾಯಗಳು

3. ಅಭಿಪ್ರಾಯಗಳು

 1. venkatesan

  June 2, 2017 at 6:53 am

  True to the name Abinava, hHe was the Architect of many new things and an inventor of sorts.iShahtaanga pranaams.

 2. Anushree

  June 2, 2017 at 6:58 am

  Sri gurubhyo namah

 3. Stanley pinto

  June 2, 2017 at 12:34 pm

  DIVINE are the ways of mystic gurus…just a kind glimpse is enough even a dumb n deaf will talk…jai gurudevha paramparah PAHIMAAM🌷🌱

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!