Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಗುರುಮಹಿಮೆ-1 (Guru Mahime-1)

Published

on

ಕನ್ನಡ1 of 2
To Change Language, Click ← → (arrow) Button

ಜಗದ್ಗುರು ಶ್ರೀವೃದ್ಧನೃಸಿಂಹಭಾರತೀ (ಶ್ರೀಉಗ್ರನೃಸಿಂಹಭಾರತೀ)ಮಹಾಸ್ವಾಮಿಗಳು. 

ಇವರ ಅವತಾರ(ಜನನ) ಶೃಂಗೇರಿಯಲ್ಲಾಯಿತು. ಸೌ!ಲಕ್ಷಮ್ಮ ಮತ್ತು ವೇ.ರಾಮಶೇಷ ಶಾಸ್ತ್ರಿ ದಂಪತಿಗಳ ಸಸುಪುತ್ರರಾಗಿ.ಕ್ರಿಶ.1798 ರ ಕಾರ್ತಿಕ ಶುದ್ಧ ಚತುರ್ದಶಿಯ ದಿನ ಅವತರಿಸಿದರು.ಇವರ ಪೂರ್ವಾಶ್ರಮದ ಹೆಸರು ನರಸಿಂಹ ಶಾಸ್ತ್ರಿ. ಚಿಕ್ಕವಯಸ್ಸಿನಲ್ಲಿಯೇ ಕಾಶಿಗೆ ಹೋಗಿ ಆ ಕಾಲದ ಪ್ರಸಿದ್ಧ ವಿದ್ವಾಂಸರಾಗಿದ್ದ ವಾಂಛೇಶ್ವರಶಾಸ್ತ್ರಿಗಳ ಬಳಿ ಹಲವಾರು ವರ್ಷ ವಿದ್ಯಾಭ್ಯಾಸ ಮಾಡಿ ಕ್ರಿಶ 1817 ರಲ್ಲಿ ಶೃಂಗೇರಿಗೆ ಹಿಂದಿರುಗಿದ ಸ್ವಲ್ಪ ದಿವಸಗಳಲ್ಲಿಯೇ ಜಗದ್ಗುರು ಶ್ರೀಮದಭಿನವ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳಿಂದ ಸಂನ್ಯಾಸಾಶ್ರಮ ಸ್ವೀಕರಿಸಿ “ಶ್ರೀನೃಸಿಂಹಭಾರತೀ” ಎಂಬ ಯೋಗಪಟ್ಟವನ್ನು ಪಡೆದರು.ದಕ್ಷಿಣಾಮ್ನಾಯ ಶ್ರೀಶಾರದಾಪೀಠದಲ್ಲಿ ಶ್ರೀನೃಸಿಂಹಭಾರತೀ ಎಂಬ ಅಭಿದಾನ ಪಡೆದ ಎಂಟನೆಯ ಯತಿವರ್ಯರಿವರು ಹಾಗಾಗಿ ಇವರಿಗೆ ಅಷ್ಟಮ ನೃಸಿಂಹಭಾರತೀ ಮಹಾಸ್ವಾಮಿಗಳು ಎಂದು ಕರೆಯುತ್ತಾರೆ.

ಇವರಿಗೆ ಸನ್ಯಾಸಾಶ್ರಮ ನೀಡಿದ ಕೇವಲ ಆರುದಿನಗಳ ನಂತರ 31 ನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀಮದಭಿನವ ಸಚ್ಚಿದಾನಂದಭಾರತೀ ಮಹಾಸ್ವಾಮಿಗಳು ವಿದೇಹ ಕೈವಲ್ಯವನ್ನು ಪಡೆದರು.ವ್ಯಾಖ್ಯಾನಪೀಠಕ್ಕೆ ಜಗದ್ಗುರು ಶ್ರೀನೃಸಿಂಹಭಾರತೀ ಮಹಾಸ್ವಾಮಿಗಳು ಬಂದ ಮೇಲೆ ಮಠದ ಲೌಕಿಕ ವ್ಯವಹಾರಗಳು ಸುಸೂತ್ರವಾಗಿ ನೆಡೆಯುವಂತೆ ಏರ್ಪಾಡು ಮಾಡಿ,ಐದು ವರ್ಷಗಳ ಕಾಲ “ಕಿಗ್ಗ” ಸಮೀಪವಿರುವ ನರಸಿಂಹ ಪರ್ವತದಲ್ಲಿ ತಪೋನಿಷ್ಠೆರಾದರು.

ಎಡೆಬಿಡದೆ ನರಸಿಂಹನನ್ನೆ ಉಪಾಸನೆ ಮಾಡಿದ್ದರಿಂದ ಅವರ ಮುಖದ ಮೇಲೆ ನರಸಿಂಹನ ಕಲೆಯೇ ಬಂದಿತ್ತಂತೆ. ನಿದ್ದೆಯನ್ನು ಹಸಿವನ್ನೂ ಗೆದ್ದು,ದಿನವೂ ಬೇಯಿಸಿದ ಹಾಗಲಕಾಯಿಯನ್ನು ಮಾತ್ರ ಸೇವಿಸುತ್ತಿದ್ದರು.ಸೌಮ್ಯ ಸ್ವಭಾವದವಾದರಾದ ಮಹಾಸ್ವಾಮಿಗಳು ತಮ್ಮ ಕಠಿಣ ತಪಶ್ಚರ್ಯದಿಂದ “ಉಗ್ರನರಸಿಂಹ ಭಾರತೀ” ಎಂಬ ಹೆಸರನಿಂದ ಪ್ರಸಿದ್ಧರಾಗಿದ್ದರು.

ಇವರು ಉತ್ತರಾಧಿಕಾರಿ ಶಿಷ್ಯ ಸ್ವೀಕಾರ ಮಾಡುವಾಗ ಇವರಿಗೆ 69 ವರ್ಷಗಳು ಇವರ ಶಿಷ್ಯಸ್ವಾಮಿಗಳಿಗೆ 9 ವರ್ಷಗಳು ಅವರ ಹೆಸರಿನಲ್ಲಿಯೂ ನೃಸಿಂಹ ಭಾರತೀ ಎಂಬ ಯೋಗನಾಮವಿದ್ದರಿಂದ ಇವರಿಗೆ ವೃದ್ಧನೃಸಿಂಹ ಭಾರತೀಗಳು
ಎಂಬ ನಾಮ ವಾಡಿಕೆಗೆ ಬಂತೆಂಬುದು ಹಲವರ ಅಭಿಪ್ರಾಯ.1879 ರ ಜೇಷ್ಠ ಶುದ್ಧ ದ್ವಿತೀಯದಂದು ವಿದೇಹ ಮುಕ್ತರಾದರು.

ಶ್ರೀ ವಿದ್ಯಾಶಂಕರ ದೇವಸ್ಥಾನದ ವಾಯುವ್ಯಕ್ಕೆ ಇವರ ಅಧಿಷ್ಠಾನ ಮಂದಿರವು ನಿರ್ಮಿತವಾಗಿದೆ. ಇಲ್ಲಿ ಅಭಿಷೇಕ ಮಾಡಿಸಿ ತಿರ್ಥಸ್ನಾನ ಮಾಡುವುದರಿಂದ ಬಾಲಗ್ರಹ ಸೇರಿದಂತೆ ಸಕಲವಿಧವಾದ ಭೂತಪ್ರೇತಾದಿಗಳಿಂದಾಗುವ ಭೀತಿ,ನಾನಾ ರೋಗಗಳು ನಿವಾರಣೆಯಾಗುತ್ತದೆಂಬ ದೃಢ ವಿಶ್ವಾಸ ಭಕ್ತಸಮುದಾಯದಲ್ಲಿದೆ.ಸನ್ಯಾಸಿಗಳ ಸಮಾಧಿಯ ಅಭಿಷೇಕ ಪುಣ್ಯ ಜಲದ ತಿರ್ಥಸ್ನಾನಗಳು ದೇಶದಲ್ಲಿ ಕೆಲವೇ ಕಡೆ ಲಭ್ಯವಾದರೂ,ಪೀಠಾಧಿಪತಿಗಳಾದ ಜಗದ್ಗುರುಗಳ ಅಧಿಷ್ಠಾನದ ಅಭಿಷೇಕ ಪುಣ್ಯ ಜಲದ ತೀರ್ಥಸ್ನಾನದ ಭಾಗ್ಯ ದೊರಕುವುದು ಜಗತ್ತಿನಲ್ಲಿ ಇಲ್ಲಿ ಮಾತ್ರವಾಗಿರುವುದು ವಿಶೇಷ.

ಜಗದ್ಗುರು ಶ್ರೀನೃಸಿಂಹಭಾರತೀ(ಅಷ್ಟಮ) ಮಹಾಸ್ವಾಮಿಗಳ 139 ನೆಯ ಆರಾಧನೆಯ ಸುಸಂದರ್ಭದಲ್ಲಿ ಗುರುದೇವರ ಚರಿತ್ರೆಯಿಂದ ಆಯ್ದ ಭಾಗದಿಂದ ಸ್ಮರಣೆಗೈಯುತ್ತ..

ಕನ್ನಡ1 of 2
To Change Language, Click ← → (arrow) Button

19 ಅಭಿಪ್ರಾಯಗಳು

19. ಅಭಿಪ್ರಾಯಗಳು

 1. venkatesan

  May 26, 2017 at 4:02 am

  great .

  • admin

   May 27, 2017 at 1:57 am

   Ty

 2. Rashmi

  May 26, 2017 at 4:57 am

  Thanks so much for the post

  • admin

   May 27, 2017 at 1:57 am

   Welcome.

 3. ಲಕ್ಷ್ಮೀನರಸಿಂಹ ಶರ್ಮ

  May 26, 2017 at 11:40 am

  ವಂದೇ ಶ್ರೀಗುರು ಪರಂಪರಾಮ್ 🙏🙏

 4. Yagnesh

  May 26, 2017 at 12:36 pm

  Sri Gurubhyo namaha.

 5. Badariprashanth ks

  May 27, 2017 at 6:17 am

  Om Gum gurave namaha….

  • admin

   May 28, 2017 at 7:54 am

   Ty for ur support

 6. Ratnapriya polisetty

  May 27, 2017 at 7:19 am

  Thank you very much for these posts. Please continue .

  • admin

   May 27, 2017 at 3:32 pm

   Ty for ur Support
   Regards
   Team Jnanada

 7. Sravan

  May 28, 2017 at 1:25 pm

  Feeling blessed to have a chance to know more about the Mahaan, Sankaracharya Sri Nrusimha Bharathi Maha Swamy.. Please do post further about Jagadguru.

  I totally believe that it benefits who ever reads Guru Charitra.

  Jaya Jaya Sankara Hara Hara Sankara

  • admin

   May 28, 2017 at 6:00 pm

   Ty for ur support

 8. రత్నగిరి నాగేశశాస్త్రీ

  May 30, 2017 at 1:07 am

  శ్రీ సద్గురుచరణారవిందాభ్యాంనమః

  • admin

   May 30, 2017 at 5:31 pm

   ty for ur support

 9. Uma s

  May 30, 2017 at 1:59 pm

  Thank you for the infm.

  • admin

   May 30, 2017 at 5:30 pm

   welcome

 10. prabhakar

  May 31, 2017 at 9:20 am

  very well written in easy and understandable vocabulary. pl keep up the good work and ket us have more such writings from you. All the best

  • admin

   May 31, 2017 at 10:29 am

   Ty for ur Support

 11. Anuradha

  June 6, 2017 at 2:18 am

  Thank you very much. Feel blessed to read about the great Guru Parampara of Sringeri Peetham which have been graced by Maha jnaanis

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!