Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶೃಂಗೇರಿ ಶರನ್ನವರಾತ್ರಿ ಒಂದು ಅದ್ಭುತ ಮಹೋತ್ಸವ

Published

on

ಶೃಂಗೇರಿ ಶರನ್ನವರಾತ್ರಿ ಒಂದು ಅದ್ಭುತ ಮಹೋತ್ಸವ

ಭಾರತದಲ್ಲಿ ಹೆಚ್ಚಾಗಿ ನವರಾತ್ರಿ ಉತ್ಸವವನ್ನು ಒಂಬತ್ತು ದಿನಗಳಕಾಲ (ವಿಜಯದಶಮಿ ಸೇರಿಸಿದರೆ ಹತ್ತು ದಿನಗಳು) ಆಚರಿಸಿದರೆ ನಮ್ಮ ಈ ಶೃಂಗೇರಿಯಲ್ಲಿ ಒಂದು ಪಕ್ಷ (ಹದಿನೈದು ದಿನ) ಆಚರಿಸಲಾಗುತ್ತದೆ. ಮಹಾಲಯ ಅಮಾವಾಸ್ಯೆದಿನ ಮಹಾಭಿಷೇಕದಿಂದ ಪ್ರಾರಂಭವಾಗಿ ಪ್ರತಿನಿತ್ಯ ನಾನಾಲಂಕಾರಗಳು, ಚತುರ್ವೇದಗಳು, ರಾಮಾಯಣ, ಶ್ರೀಮದ್ಭಾಗವತ, ದೇವೀಭಾಗವತ, ದುರ್ಗಾಸಪ್ತಶತೀ, ಮಾಧವೀಯ ಶಂಕರ ದಿಗ್ವಿಜಯ, ಪ್ರಸ್ಥಾನತ್ರಯಭಾಷ್ಯ ಇತ್ಯಾದಿ ಪಾರಾಯಣಗಳು, ಶ್ರೀಚಕ್ರನವಾವರಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಜಬೀದಿ ಉತ್ಸವ, ದರ್ಬಾರ್, ನವಮಿಯಂದು ನೆಡೆಯುವ ಶತಚಂಡಿಕಾಯಾಗದ ಪೂರ್ಣಾಹುತಿ, ಆಯುಧಪೂಜೆ, ಗಜಪೂಜೆ, ಅಶ್ವಪೂಜೆ, ವಿಜಯದಶಮಿಯಂದು ಲಕ್ಷ್ಮೀನಾರಾಯಣ ಹೋಮ, ಸಂಜೆ ವಿಜಯೋತ್ಸವ ಶಮೀಪೂಜೆ, ಏಕಾದಶಿಯ ದಿನ ವೈಭವದ ಶಾರದಂಬ ಮಹಾರಥೋತ್ಸವ. ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ. ಭಕ್ತರ ಭಜನೆ, ನಾನಕಲಾತಂಡಗಳ ಸಡಗರ.
ಭೂಮಿಹುಣ್ಣಿಮೆಯಂದು ಬೆಳಗ್ಗೆ ಶಾರದಮ್ಮನವರಿಗೆ ಪುನರಭಿಷೇಕ, ಸಂಜೆ ತೆಪ್ಪೋತ್ಸವದೊಂದಿಗೆ ಶರನ್ನವರಾತ್ರಿಯ ಉತ್ಸವಕ್ಕೆ ಅಧಿಕೃತ ತೆರೆಬೀಳುತ್ತದೆ.

ನೂರಾರು ವರುಷಗಳ ಭವ್ಯ ಪರಂಪರೆಗೆ ಮತ್ತು ಶಾಸ್ತ್ರ ಸಂಪ್ರದಾಯಗಳಿಗೆ ಸ್ವಲ್ಪವೂ ಚ್ಯುತಿ ಬಾರದಂತೆ, ಆಧುನಿಕತೆಯ ಸ್ಪರ್ಶದೊಂದಿಗೆ ವಿಜೃಂಭಣೆಯಿಂದ ನೆಡೆಯುವ ಶೃಂಗೇರಿ ಶರನ್ನವರಾತ್ರಿ ಮಹೋತ್ಸವವು ಒಂದು ಅದ್ಭುತ. ಇದರಲ್ಲಿ ಭಾಗವಹಿಸಿಲು ಹಲವಾರು ಜನುಮದ ಪುಣ್ಯ ಬೇಕು.

ಫೋಟೋ ಕೃಪೆ : ದಿಲೀಪ್ ರಾವ್, ಶಶಿ ಬಚ್ಚನ್

– ವಿಶ್ವಾಸ್.‌ ಎಸ್. ಭಟ್, ಶೃಂಗೇರಿ

 

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!