Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಶ್ರೀ ಪಾದವಲ್ಲಭ ಚರಿತ್ರೆ – ೨೩

Published

on

ಅಧ್ಯಾಯ-೯

ಶಂಕರಭಟ್ಟರು ಮುಂದುವರಿಸುತ್ತಾ ತಿರುಮಲದಾಸರಲ್ಲಿ ಕೇಳುತ್ತಾರೆ, ಸ್ವಾಮಿ ನಾನು ಶ್ರೀಪಾದವಲ್ಲಭ ಚರಿತ್ರೆಯನ್ನು ಬರೆಯಬೇಕೆಂದಿರುವೆ ಅವರ ದಿವ್ಯ ಭವ್ಯಸ್ವರೂಪವನ್ನು ಹೇಗೆ ವರ್ಣಿಸಬೇಕೆಂಬುದು ತಿಳಿಯುತ್ತಿಲ್ಲ ದಯಮಾಡಿ ವಿವರಿಸಿ.

ತಿರುಮಲದಾಸರು ಮಗೂ ಶಂಕರಭಟ್ಟ ಹೇಗೆ ಮಾನವನು ಭೋಜನವನ್ನು ಸಂಪಾದಿಸಿ ಸೇವಿಸುವುದಷ್ಠೇ ಅವನ ಕರ್ತವ್ಯ‌ವೋ ಹಾಗೆ ಸಂಕಲ್ಪ ಮಾತ್ರವೇ ನಿನ್ನದು, ಮುಂದೆ ಆಹಾರವು ಜೀರ್ಣವಾಗಿ ಶಕ್ತಿಯನ್ನು ಕೊಡುವುದು ಬೇಡವಾದದ್ದನ್ನು ತ್ಯಜಿಸುವುದು ಶರೀರದ ಕರ್ತವ್ಯವು ಹೇಗೋ ಹಾಗೇ ಈ ಯಾತ್ರೆಯಲ್ಲಿ ನಿನ್ನ ಅನುಭವಗಳನ್ನು ಮಾತ್ರ ನೆನೆಸಿಕೊ ಶ್ರೀಪಾದವಲ್ಲಭರು ನಿನ್ನ ಲೇಖನಿಯಿಂದ ತಾವೇ ಬರೆಸಿಕೊಳ್ಳುತ್ತಾರೆ.

ನಿನ್ನ ಮನಸ್ಸಿನಲ್ಲಿ ಇನ್ನೂ ಶ್ರೀಪಾದವಲ್ಲಭರು ದತ್ತರ ಅವತಾರವೆಂಬುದು ನಿಜವೇ ಎಂಬ ಸಂಶಯವಿದೆ ಅದನ್ನು ದೂರಮಾಡು ಎಂದರು, ತಕ್ಷಣ ಪಶ್ಚಾತ್ತಾಪದಿಂದ ಬೆಂದ ಶಂಕರಭಟ್ಟರು ಶ್ರೀಪಾದವಲ್ಲಭರದು ಖಂಡಿತವಾಗಿ ದತ್ತಾತ್ರೇಯರ ಅವತಾರವೆಂದು ಪೂರ್ಣವಾಗಿ ನಂಬಿದಾಗ, ಕ್ರಮೇಣ ಕಬ್ಬಿಣದ ಕಡಲೆ ತಿನ್ನುವ ಕಡಲೆಯಾಗಿ ಮಾರ್ಪಾಟಾಯಿತು.

ತಿರುಮಲದಾಸರು ಮುಂದುವರಿಸುತ್ತಾ ಗೀತೆಯಲ್ಲಿ ಶ್ರೀಕೃಷ್ಣನ ಹೇಳಿದಂತೆ ಕರ್ಮಫಲವನ್ನು ಅನುಭವಿಸಲೇಬೇಕು ಭೌತಿಕ ಶರೀರದ ಮೂಲಕ ಅನುಭವಿಸಬೇಕಾದ ಹತ್ತು ವರ್ಷಗಳಷ್ಟು ಕರ್ಮವನ್ನು ಕೆಲವು ಕಾಲ ಮಾನಸಿಕ ಕ್ಷೋಭೆ ಅಥವಾ ಮಾನಸಿಕ ಬಾದೆಗಳನ್ನು ಅನುಭವಿಸುವ ಮೂಲಕವೂ ಬಿಡುಗಡೆ ಹೊಂದಬಹುದು.

ಸತ್ಪುರುಷರಿಗೆ, ಸಾಧುಗಳಿಗೆ, ಯೋಗಿಗಳಿಗೆ, ಸನ್ಯಾಸಿಗಳಿಗೆ ಸೇವೆ ಮಾಡುವುದರಿಂದ ಹಾಗೂ ದೇವತಾಕಾರ್ಯಗಳನ್ನು ಮಾಡುವುದರಿಂದ ಕೂಡ ಪಾಪಕರ್ಮಗಳು ಕ್ಷಯಹೊಂದುವವು.

ಸತ್ಪುರುಷರು,ಸಾಧುಗಳು,ಯೋಗಿಗಳು,ಸನ್ಯಾಸಿಗಳು ಪುಣ್ಯಸ್ವರೂಪರು ಅವರ ಸೇವೆ, ದರ್ಶನ ಪಾದಧೂಳಿನಿಂದ ಪಾಪ ನಿವೃತ್ತಿಯಾಗುವುದು. ಅವರು ಅಗ್ನಿಸ್ವರೂಪರಾದ್ದರಿಂದ ಭಕ್ತರ ಪಾಪಕರ್ಮಗಳನ್ನು ದಹಿಸಿಬಿಡಬಲ್ಲರು.

ಒಂದು ಅದ್ಭುತವಾದ ಘಟನೆಯನ್ನು ಹೇಳುತ್ತೇನೆ ಕೇಳು ಎಂದು ಹೇಳಲಾರಂಭಿಸಿದರು.
ಸುಮತಿ ಮಹಾರಾಣಿಗೆ ಬಾಲಕ ಶ್ರೀಪಾದನಿಗೆ ಸಾಕಾಗುವಷ್ಟು ಕ್ಷೀರಧಾರೆ ಇರಲಿಲ್ಲ ಹಾಗೂ ಅವರ ಮನೆಯ ಹಸು ಕೂಡ ಕೇವಲ ಆರಾಧ್ಯದೈವವಾದ ಕಾಲಾಗ್ನಿಶಮನದತ್ತನಿಗೆ ನೈವೇದ್ಯಕ್ಕೆ ಸಾಕಾಗುವಷ್ಟು ಹಾಲನ್ನು ಮಾತ್ರ ಕೊಡುತ್ತಿತ್ತು. ಪೌರೋಹಿತ್ಯದಲ್ಲಿ ಸಾಕಷ್ಟು ಆದಾಯವಿಲ್ಲದೆ ಆರ್ಥಿಕವಾಗಿ ಅಷ್ಟೇನೂ ಶಕ್ತರಲ್ಲದ ತಂದೆ ಅಪ್ಪಲರಾಜಶರ್ಮರು ಎಂದೂ ದಾನವನ್ನು ಸ್ವೀಕರಿಸುತ್ತಿರಲಿಲ್ಲ ಹಾಗೂ ಮಾವನವರಾದ ಬಾಪನಾರ್ಯರಿಂದಲೂ ಏನನ್ನೂ ಪಡೆಯುತ್ತಿರಲಿಲ್ಲ. ತಂದೆತಾಯಿಗೆ ಮಗನಿಗೆ ಹೊಟ್ಟೆತುಂಬ ಹಾಲನ್ನು ಕೊಡುವ ಶಕ್ತಿಯಿಲ್ಲವಲ್ಲ ಎಂಬ ನೋವು, ಒಮ್ಮೆ ಸುಮತಿಮಹಾರಣಿಯು ಅಪ್ಪಲರಾಜಶರ್ಮರಲ್ಲಿ “ನಾಥ ನಮ್ಮ ತವರುಮನೆಯವರು ಒಳ್ಳೆಯ ಸ್ಥಿತಿವಂತರು ಹಾಗೂ ನಿಷ್ಠಾಗರಿಷ್ಠರಾದ ಶ್ರೋತ್ರಿಯರು ಅವರಿಂದ ಒಂದು ಧೇನುವನ್ನು ಪಡೆದು ದತ್ತಾವತಾರಿಯಾದ ಈ ಕೂಸಿಗೆ ಹೊಟ್ಟೆತುಂಬ ಹಾಲನ್ನು ಕೊಡುವುದರಿಂದ ತಪ್ಪೇನಿಲ್ಲವಲ್ಲ” ಎಂದರು..! ಅದಕ್ಕುತ್ತರಿಸುತ್ತಾ ಅಪ್ಪಲರಾಜಶರ್ಮರು “ಈ ಕೂಸು ದತ್ತಾವತಾರವೆಂದು ಅನೇಕ ಮಹಾನುಭಾವರು ಹೇಳಿದ್ದಾರೆ ಹಾಗೂ ಅದಕ್ಕೆ ಪುಷ್ಟಿನೀಡುವ ಸಾಕಷ್ಟು ಘಟನೆಗಳು ಕೂಡ ಘಟಿಸಿವೆ, ಅದು ಸತ್ಯವೇ ಆಗಿದ್ದರೆ ನಿನಗೆ ಕ್ಷೀರಸಮೃದ್ಧಿಯನ್ನುಂಟು ಮಾಡಲಿ… ಇಲ್ಲವಾದಲ್ಲಿ ನಮ್ಮ ಮನೆಯ ಹಸು ಹೆಚ್ಚು ಹಾಲು ಕೊಡುವಂತೆ ಮಾಡಲಿ ಅಥವಾ ಕುರುಡ ಕುಂಟರಾದ ಶ್ರೀಪಾದರ ಅಣ್ಣಂದಿರು ಶ್ರೀಧರ ಹಾಗೂ ರಾಮರಾಜರನ್ನು ಊನತೆಯಿಂದ ವಿಮುಕ್ತರನ್ನಾಗಿ ಮಾಡಬಹುದಲ್ಲ..? ಎಲ್ಲವನ್ನೂ ಬಿಟ್ಟು ನನ್ನ ನಿಯಮಗಳನ್ನು ಉಲ್ಲಂಘನೆ ಮಾಡಬೇಕಾದ ವಿಷಮ ಪರಿಸ್ಥಿತಿಯನ್ನು ನನಗೇಕೆ ಒಡ್ಡುತ್ತಿದ್ದೀಯೇ ..? ಎಂದು ಕೇಳಿದರು.

ಮುಂದುವರಿಯುವುದು

ಆಧಾರ: ಶ್ರೀ ಪಾದವಲ್ಲಭ ದಿವ್ಯ ಚರಿತಾಮೃತ

– ರಾಮಚಂದ್ರ ಬಾಳಗಂಚಿ
🙏ಶ್ರೀ ಪಾದರಾಜಂ ಶರಣಂ ಪ್ರಪದ್ಯೆ🙏

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!