Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

ವೈದಿಕ ಜ್ಯೋತಿಷ 21 (ಭಾರತೀಯ ಜ್ಯೋತಿಷ್ಯವನ್ನು ಪರಿಚಯಿಸುವ ಸರಣಿ)

Published

on

ಸೂರ್ಯನಿಂದ ಉಂಟಾಗುವ ಯೋಗಗಳ ಬಗ್ಗೆ ತಿಳಿಯೋಣ.

हित्वेन्दुं शुभवेसिवास्युभयचर्याख्याः स्वरिःफोभय
स्थानस्थैःसवितुःशुभैःस्युरशुभैस्ते पापसंज्ञाःस्मृताः।
सत्पार्श्वो शुभकर्तरीत्युदयभे पापैस्तु पापाह्वयो
लग्नाद्वित्तगतैः शुभैस्तु सुशुभो योगो न पापेक्षितैः।। (फ.दी ६-८)

ಈ ಮೇಲಿನ ಶ್ಲೋಕದಲ್ಲಿ ಸೂರ್ಯನಿಂದ ಉಂಟಾಗುವ ಯೋಗಗಳು ಹೇಳಲ್ಪಟ್ಟಿವೆ.

ಸೂರ್ಯನಿರುವ ರಾಶಿಯಿಂದ ದ್ವಿತೀಯ ಭಾವದಲ್ಲಿ ಶುಭಗ್ರಹಗಳು (ಬುಧ, ಗುರು, ಶುಕ್ರ) ಯಾವುದಾದರೂ ಇದ್ದರೆ ಶುಭ ವೇಸಿಯೋಗ ವಾಗುತ್ತದೆ.

ಸೂರ್ಯನಿರುವ ಸ್ಥಾನದಿಂದ ದ್ವಾದಶ ಭಾವದಲ್ಲಿ ಶುಭಗ್ರಹಗಳು ಯಾವುದಾದರೂ ಇದ್ದರೆ ಶುಭವಾಸಿಯೋಗ ವಾಗುತ್ತದೆ.

ಸೂರ್ಯನಿಂದ ದ್ವಿತೀಯ, ದ್ವಾದಶ ಎರಡೂ ಭಾವಗಳಲ್ಲಿ ಶುಭಗ್ರಹಗಳಿದ್ದರೆ ಶುಭ ಉಭಯಚಾರಿಯೋಗ ವಾಗುತ್ತದೆ.

ಸೂರ್ಯನಿರುವ ರಾಶಿಯಿಂದ ದ್ವಿತೀಯ ಭಾವದಲ್ಲಿ ಪಾಪ ಗ್ರಹಗಳು (ಮಂಗಳ, ಶನಿ) ಇದ್ದರೆ ಅಶುಭವೇಸಿ ಯೋಗವಾಗುತ್ತದೆ.

ಸೂರ್ಯನಿಂದ ದ್ವಾದಶ ಭಾವದಲ್ಲಿ ಪಾಪ ಗ್ರಹಗಳಿದ್ದರೆ ಪಾಪವಾಸಿ ಯೋಗವಾಗುತ್ತದೆ. ಸೂರ್ಯನಿಂದ ದ್ವಿತೀಯ ಹಾಗೂ ದ್ವಾದಶ ಎರಡೂ ಭಾವಗಳಲ್ಲಿ ಪಾಪಗ್ರಹಗಳಿದ್ದರೆ ಅಶುಭ ಉಭಯಚಾರೀಯೋಗವಾಗುತ್ತದೆ.

ಲಗ್ನದಿಂದ ದ್ವಿತೀಯ ಭಾವದಲ್ಲಿ ಪಾಪಗ್ರಹಗಳಿಂದ ಅದೃಷ್ಟ (ನೋಡಲ್ಪಡದ) ಶುಭಗ್ರಹವಿದ್ದರೆ ಸುಶುಭ ಯೋಗ ಎಂದು ಹೇಳಲಾಗಿದೆ.
ಈ ಯೋಗಗಳ ಫಲವನ್ನು ಮುಂದಿನ ಭಾಗದಲ್ಲಿ ತಿಳಿಯೋಣ.

✍🏻 ವೇ ಬ್ರ ಶ್ರೀ ವೆಂಕಟೇಶ ಜೋಶಿ
📧 joshivenkatesh7@gmail.com
📱9901884353

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!