Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶೃಂಗೇರಿ – ಶ್ರೀಸೂರ್ಯನಾರಾಯಣ ದೇವಸ್ಥಾನ, ಎಳ್ಮಗ್ಗೆ ಮತ್ತು ರಥಸಪ್ತಮಿ

Published

on

ಶ್ರೀಸೂರ್ಯನಾರಾಯಣ ದೇವಸ್ಥಾನ, ಎಳ್ಮಗ್ಗೆ 

ಪದ್ಮಾಸನಃ ಪದ್ಮಕರಃ ಪದ್ಮಗರ್ಭ ಸಮದ್ಯುತಿಃ !
ಸಪ್ತಾಶ್ವರಥ ಸಂಯುಕ್ತೋ ದ್ವಿಭುಜಃ ಸ್ಯಾತ್ಸದಾರವಿಃ !!

ಏಳು ಕುದುರೆಯನ್ನು ಕೂಡಿಕೊಂಡಿರುವ ರಥದ ಮೇಲಿರುವ ಪದ್ಮದಮೇಲೆ, ಎರಡು ಕರದಲ್ಲಿ ಪದ್ಮಪುಷ್ಪ ಹಿಡಿದು ರವಿಯು ವಿರಾಜಮಾನನಾಗಿದ್ದಾನೆ. ಮೇಲಿನ ಧ್ಯಾನ ಶ್ಲೋಕದಂತೆ ಇಲ್ಲಿ ಸೂರ್ಯನಾರಯಣಸ್ವಾಮಿಯು ಬರುವ ಭಕ್ತರಿಗೆ ವರಪ್ರದನಾಗಿದ್ದಾನೆ. ಈ ಸ್ಥಳವು‌ ಮೆಣಸೆ ಸೇತುವೆ ಸಮಿಪದ ತುಂಗಾನದಿಯ ದಕ್ಷಿಣದ ದಡದ ಮೇಲಿದೆ. ವಿಭಾಂಡಕ ಮಹರ್ಷಿಗಳ ಸಹೋದರರಾದ ತೀಲಭಾಂಡಕ ಮುನಿಗಳು ತಪಗೈದ ಸ್ಥಳವಾಗಿದೆ.ಈ ಆಲಯದ ಮುಂಬಾಗ ಪ್ರವಹಿಸುವ ತುಂಗೆಗೆ ಆದಿತ್ಯತೀರ್ಥವೆಂದು ಕರೆಯುತ್ತಾರೆ.

ರಥಸಪ್ತಮಿ

ರಥಸಪ್ತಮಿಯಾದ ಇಂದು ಜಗದ್ಗುರು ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಮೊದಲು ಬೆಳಗ್ಗೆ 10-30ರ ಸುಮಾರಿಗೆ ಶ್ರೀ ವಿದ್ಯಾಶಂಕರ ದೇವಸ್ಥಾನದ ಹೊರಸುತ್ತಿನಲ್ಲಿರುವ ಸೂರ್ಯನಾರಾಯಣನಿಗೆ ಮಂಗಳಾರತಿ, ನಂತರ ಶ್ರೀ ನೃಸಿಂಹ ಯಾಗ ಮಂಟಪದಲ್ಲಿ ಏಕ ಚಕ್ರ ರಥರೂಢ ಆದಿತ್ಯನಿಗೆ ಪೂಜೆ ಮತ್ತು ಅಲ್ಲಿಯೇ ಕಿರಿದಾದ ಆ ಒಂದು ಚಕ್ರದ ರಥದ ಉತ್ಸವವೂ ನೆರವೇರುತ್ತದೆ. ನಂತರ ಎಳ್ಮಗ್ಗೆ ಸೂರ್ಯನಾರಾಯಣ ದೇವಸ್ಥಾನಕ್ಕೆ ಚಿತ್ತೈಸಿ ವಿಶೇಷ ಪೂಜೆ ನೆರವೇರಿಸುತ್ತಾರೆ.

ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ ಎಂಬ ಪ್ರಾರ್ಥನೆಯೊಂದಿಗೆ ಶೃಂಗೇರಿ ಪರಿಸರದ ಮನೆಗಳ ತುಳಸಿಕಟ್ಟೆಯಲ್ಲಿ ಇಚ್ಛಾಶಕ್ತಿ, ಆತ್ಮಕಾರಕನಾಗಿ ಪ್ರತ್ಯಕ್ಷ ದೇವನಾಗಿರುವ ಭಾಸ್ಕರನ ಆರಾಧನೆ ನಡೆಯುತ್ತದೆ.

ವಿಶ್ವಾಸ್. ಎಸ್. ಭಟ್, ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!