Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶೃಂಗೇರಿಯಲಿಂದು ಸಂಧಾನೋತ್ಸವ

Published

on

ಸಾಮನ್ಯವಾಗಿ ರಥೋತ್ಸವದ ಮರುದಿವಸ ವಿಶೇಷವಾಗಿ ಶೈವಾಗಮ ದೇಗುಲಗಳಲ್ಲಿ ಸಂಧಾನೋತ್ಸವ ನೆಡೆಯುತ್ತದೆ. ಶೃಂಗೇರಿಯ ಪುರಾಣಪ್ರಸಿದ್ಧ ಭವಾನಿ ಮಲಹಾನಿಕರೇಶ್ವರ ದೇವರ ರಥೋತ್ಸವ ಮರುದಿನ ಅಂದರೆ ಪಾಲ್ಗುಣ ಶುದ್ಧ ಪಾಡ್ಯದಂದು (07.02.2019) ಶೃಂಗೇರಿ ಶ್ರೀ ಮಠದ ಆವರಣದಲ್ಲಿ ಈ ಕಾರ್ಯಕ್ರಮ ಜರುಗುತ್ತದೆ. 25 ನೆಯ ಪೀಠಾಧಿಪತಿಗಳಾದ ಜಗದ್ಗುರು ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳಿಂದ ರಚಿತವಾದ ಸಂಧನಾಕಲ್ಪ ಕೃತಿಯ ಆಧಾರದ ಮೇಲೆ ಸಂಧಾನೋತ್ಸವವು ನೆರವೇರುತ್ತದೆ. ಶಿವಪಾರ್ವತಿಯರ ಈ ಪ್ರಣಯಕಲದ ಕುರಿತು ಜಗದ್ಗುರು ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಚಾಟು ಶ್ಲೋಕವೊಂದನ್ನು ರಚಿಸಿ ಭಕ್ತರನ್ನು ಅನುಗ್ರಹಿಸಿದ್ದಾರೆ.

 

ಪಾರ್ವತಿ ದೇವಿಗೆ ತಿಳಿಸದೆಯೆ ಒಮ್ಮೆ ಶಿವನು ಬೇಟೆಯಾಡಲು ಅರಣ್ಯಕ್ಕೆ ಹೋಗಿರುತ್ತಾನೆ. ಬರುವಾಗ ಮಧ್ಯರಾತ್ರಿಯಾಗಿರುತ್ತದೆ.
ಮನೆಯ ಬಾಗಿಲು ಹಾಕಿರುತ್ತದೆ. ಇವನು ಕದವದಾಟಿ ಒಳಬರಲು ಹೊರಟಾಗ ಪಾರ್ವತಿಯು ಪ್ರಣಯ-ಕಲಹಕ್ಕೆ ನಾಂದಿ ಹಾಡುತ್ತಾಳೆ.
ಪಾರ್ವತಿ – ಯಾರದು?
ಶಿವ – ಪ್ರೀಯೆ ನಾನು !
ಪಾ – ನಾನು ಎಂದರೇ ?
ಶಿ – ನಾನು ಶೂಲಿ! (ತ್ರಿಶೂಲ ಹಿಡಿದವನು – ಶೂಲಿ)
ಪಾ – ಏನು ಶೂಲರೋಗವೇ? ನಾನು ವೈದ್ಯಳಲ್ಲ. ನೀನು ವೈದ್ಯರ ಬಳಿ ಹೋಗು. (ಶೂಲಿ – ಉದರಬೇನೆ)
ಶಿ – ಪ್ರಿಯತಮೆ ನಾನು ನೀಲಕಂಠ !
ಪಾ – ಹಾಗದರೆ ನೀನು ಕೆಕೆ ಹಾಕು ? (ನೀಲಕಂಠ – ನವಿಲು).
ಶಿ – ಭಾರ್ಯೇ ನಾನು ಪಶುಪತಿ !
ಪಾ – ಓಹೋ ಪಶುಪತಿಯಾದರೆ ಎಲ್ಲಿ ನಿನ್ನ ಕೊಂಬುಗಳು?
ಶಿ – ನಾನು ಎತ್ತಲ್ಲ. ನಾನು ಸ್ಥಾಣು! (ಅಣು-ಅಣುವಿನಲ್ಲೂ ಶಿವನಿದ್ದಾನೆ ಹಾಗಾಗಿ ಶಿವನು – ಸ್ಥಾಣು)
ಪಾ – ನೀನು ಒಣಗಿದ ಮರವಾದರೆ ಹೇಗೆ ಮಾತನಾಡುತ್ತಿಯ? (ಸ್ಥಾಣು – ಒಣಗಿದ ಮರ)
ಶಿ – ಪ್ರೇಯಸಿ ನಾನು ಶಿವಾಯಾಃ (ಪಾರ್ವತಿ) ಪತಿಃ.!
ಪಾ – ಏನು? ಶಿವೆಯ(ಹೆಣ್ಣು ನರಿ)ಗಂಡ ಹಾಗದರೆ ನರಿ, ಕಾಡಿಗೆ ಹೊರಡು… ಇಲ್ಲೇನು ಕೆಲಸ…?
ಹೀಗೆ ಪಾರ್ವತಿಯು ವಾಗ್ಬಾಣಗಳಿಂದ ಶಿವನನ್ನು ಪ್ರಣಯ ಕಲಹದಲ್ಲಿ ಹಿಮ್ಮೆಟ್ಟಿಸಿದಳು. ನಂತರ ಮಂದಸ್ಮಿತಳಾಗಿ ಶಿವನೊಂದಿಗೆ ಅನುರಕ್ತಳಾದಳು.‌ ಅನುಮಾನವಿರದ ಅನುರಾಗವಿಲ್ಲ ಎಂಬುದನ್ನು ವಿವರಿಸಿದಂತೆ ಕಾಣುತ್ತದೆ.

 

ಪ್ರಸ್ತುತ ಚಿಕ್ಕ ಪುಟ್ಟ ವಿಚಾರಗಳಿಂದುಂಟಾಗುವ ದಾಂಪತ್ಯ ಕಲಹಗಳು ವಿಚ್ಛೇದನದಲ್ಲಿ‌ ಹೆಚ್ಚಾಗಿ ಸಮಾಪ್ತಿಯಾಗುತ್ತಿದೆ. ಪೂರ್ವದಲ್ಲಿ ಇಂತಹ ವಿಚಾರಗಳಲ್ಲಿ ವಾದ-ವಿವಾದ ನೆಡೆದರೂ ತಾಳ್ಮೇ,ಸಂಯಮದ ಜೊತೆಗೆ ಹಿರಿಯರ ಮಧ್ಯಸ್ತಿಕೆಗಳಿಂದಾಗಿ ದಾಂಪತ್ಯ ಅನುರಾಗದಿಂದ ಕೂಡಿ ಸುಖಮಯವಾಗಿ ಸಾಗುತ್ತಿತ್ತು ಎಂಬುದು ಹಿರಿಯರ ಅಭಿಪ್ರಾಯ.

ಆಗಮೋಗಕ್ತ ದೇವಾಲಯಗಳಲ್ಲಿ ರಥೋತ್ಸವದ ಸುಸಂಧರ್ಭದಲ್ಲಿ ಸಂಧಾನೋತ್ಸವ ನೆಡೆಯುತ್ತಾ ಬಂದಿದೆ.

ಭವಾನೀ ಸಮೇತಂ ಭಜೆ ಮಲಹಾನಿಕರೇಶ್ವರಂ

– ವಿಶ್ವಾಸ್. ಎಸ್. ಭಟ್, ಶೃಂಗೇರಿ

 

 

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!