Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗೇರಿ ಗುರು ಮಹಿಮೆ 19

Published

on

ಒಮ್ಮೆ ಶಿವಮೊಗ್ಗೆಯಿಂದ ಹಲವಾರು ಜನ ಭಕ್ತರು ಗುರುವರ್ಯರ ದರ್ಶನಕ್ಕಾಗಿ ಶೃಂಗೇರಿಗೆ ಬಂದರು. ಎಲ್ಲರೂ ಅವರವರ ಮತಧರ್ಮಕ್ಕೆ ಅನುಗುಣವಾಗಿ ಸಂಧ್ಯಾವಂದನೆ, ಪ್ರಾರ್ಥನೆಗಳನ್ನು ನೆರವೇರಿಸಿ ಶ್ರೀ ಶಾರದಾ ಅಮ್ಮನವರ ದರ್ಶನ ಮಾಡಿದರು. ನಂತರ ನೃಸಿಂಹವನಕ್ಕೆ ತೆರಳಿ ಗುರುದೇವ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ದರ್ಶನಕ್ಕಾಗಿ ಆಕಾಂಕ್ಷಿಗಳಾಗಿ ಕುಳಿತರು. ಆ ಗುಂಪಿನಲ್ಲಿ ಎಸ್.ವಿ.ಕೃಷ್ಣಮೂರ್ತಿರಾಯರೂ ಒಬ್ಬರು. ಗುರುದೇವರು ಹೊರಕ್ಕೆ ಆಗಮಿಸಿ‌ ಎಲ್ಲರ ಭಕ್ತಿ ಶ್ರದ್ಧೆಯನ್ನು ಹಸನ್ಮುಖದಿಂದ ಸ್ವೀಕರಿಸಿದರು.

ತೀರ್ಥ ವಿನಿಯೋಗ ಮಾಡುತ್ತಿದ್ದ‌ ಗುರುಗಳು ಪ್ರತಿಯೊಬ್ಬರ ಯೋಗ ಕ್ಷೇಮ ವಿಚಾರಿಸಿ, ಒಂದೆರಡು ಮಾತುಗಳಲ್ಲಿಯೇ ಅನುಗ್ರಹಿಸುತ್ತಿದ್ದರು. ಕೃಷ್ಣಮೂರ್ತಿರಾಯರ ಸರದಿ ಬಂದಾಗ,ರಾಯರು ತಲೆಬಾಗಿ ನಮಸ್ಕರಿಸಿ, ಕೈ ಚಾಚಿದರು. ಗುರುದೇವರು ತಲೆಯೆತ್ತಿ ಅವರ ಮುಖವನ್ನೊಮ್ಮೆ ನೋಡಿ,ಮೆಲ್ಲನೆ “ತಾವೇನು ಸ್ಮಾರ್ತ‌ ಸಂಪ್ರದಾಯಕ್ಕೆ ಸೇರಿದವರೋ?” ಎಂದರು.
ರಾಯರ ಮೈ ಬೆವರಿ, ಮುಖದಲ್ಲಿ ತಪ್ಪು ಮಾಡಿದ ಭಾವ ವ್ಯಕ್ತವಾಯಿತು.ಅವರು ಸಾವರಿಸಿ ಕೊಂಡು “ಅಲ್ಲ, ನಾನು ಸ್ಮಾರ್ತ ಸಂಪ್ರದಾಯಕ್ಕೆ ಸೇರಿದವನಲ್ಲ” ಎಂದರು. ರಾಯರು ಮಾಧ್ವ ಸಂಪ್ರದಾಯಕ್ಕೆ ಸೇರಿದವರಾಗಿದ್ದು ಆ ದಿನ ಸ್ಮಾರ್ತ ಮಿತ್ರರ ಜೊತೆಯಲ್ಲಿ ಸೇರಿ ತಾವೂ ಭಸ್ಮಧಾರಣೆ ಮಾಡಿಕೊಂಡುಬಿಟ್ಟಿದ್ದರು!

ಗುರುದೇವರು “ನೀವು ಭಸ್ಮ ಧರಿಸಿ ಬಂದರೆ ನನಗೆ ಹತ್ತಿರವಾಗುವುದಿಲ್ಲ. ಮುದ್ರೆ ಧಾರಣೆ ಮಾಡಿಕೊಂಡು ಬಂದರೆ ನನಗೆ ದೂರವಾಗುವುದಿಲ್ಲ. ನಿಮ್ಮ ಸಂಪ್ರದಾಯ ಪಾಲಿಸಬೇಕಾದುದು ಧರ್ಮ. ಅದೇ ನಿಮಗೆ ಶ್ರೇಯಸ್ಕರ. ಇತರರನ್ನು ಮೆಚ್ಚಿಸುವುದಕ್ಕಾಗಿ ನೀವು ಭಸ್ಮಧಾರಣೆ ಮಾಡಿಕೊಳ್ಳ ಬಾರದು. ನಿಮ್ಮ ಮತ ಧರ್ಮದಂತೆ ನೆಡೆಯಿರಿ” ಎಂದು ಮೃದುವಾಗಿ ನುಡಿದರು. ರಾಯರು ಈ ವಿಷಯದಿಂದ ತುಂಬಾ ಪ್ರಭಾವಿತರಾದರು. ಶ್ರೀ ಗುರುದೇವರ ಉಪದೇಶವನ್ನು ಆಗಾಗ ಸ್ಮರಿಸಿಕೊಳ್ಳುತ್ತಿದ್ದರು. ರಾಯರು ಮುಂದೆ ರಾಜ್ಯಸಭೆಯ ಉಪಸಭಾಪತಿಗಳಾದರು.

ಶ್ರೀ ಗುರುದೇವರ ಸಮದೃಷ್ಠಿ ಪರಮತಗಳಲ್ಲಿರುವ ಗೌರವ ಭಾವನೆ, ತಪ್ಪು ಮಾಡಿದವರನ್ನು ತಿದ್ದಿ ಸನ್ಮಾರ್ಗ ತೋರಿಸುವ‌ ರೀತಿ ಇವುಗಳಿಂದ ಬಹುಜನ ಪ್ರಭಾವಿತರಾಗಿದ್ದರು.

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಚರಿತ್ರೆಯಿಂದ ಆಯ್ದ ಭಾಗದಿಂದ ಶ್ರೀಗುರುಚರಣದ ಸ್ಮರಣೆಗೈಯುತ್ತಾ..

– ವಿಶ್ವಾಸ್. ಎಸ್ .ಭಟ್ , ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!