Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಕಾರುಣ್ಯ ನಿಧೇ 2 Karunya Nidhe 2

Published

on

ಕನ್ನಡ1 of 2
To Change Language, Click ← → (arrow) Button

 

ಗುರು ಮಹಿಮೆ 10

ಸನಾತನ ಧರ್ಮದ ಅಂತಸ್ಸತ್ವ ಅಡಿಗಿರುವುದು ಸಂಸ್ಕೃತದಲ್ಲಿ:ಭಾರತೀಯ ಸಂಸ್ಕೃತಿಯಂತೂ ಸಂಸ್ಕೃತವನ್ನೇ ಆಶ್ರಯಿಸಿದೆ.ಆದ್ದರಿಂದ ಈ ದೇಶದ ಜನಸಾಮಾನ್ಯರು ಸಂಸ್ಕೃತವನ್ನು ಕಲಿಯಬೇಕು ಮತ್ತು ಕಲಿಯುವಂತಾಗಲಿ ಎಂಬ ಮಹೋದ್ದೇಶದಿಂದ ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಶ್ರೀ ಸುರಸರಸ್ವತೀ ಸಭಾ ಎಂಬ ಸಂಸ್ಥೆಯನ್ನು ದಿನಾಂಕ – 08/11/1969 ರಂದು ಸ್ಥಾಪಿಸಿದರು.ಅಂದು ನರಕಚತುರ್ದಶಿ.ಶ್ರೀಕೃಷ್ಣನು ನರಕನೆಂಬ ರಾಕ್ಷಸನನ್ನು ಸಂಹರಿಸಿದ ದಿನ.ಆ ಸುದಿನ ಮಹಾಸ್ವಾಮಿಗಳ ವರ್ಧಂತಿ‌‌.ಜೊತೆಗೆ ಸ್ಥಿರವಾಸರ(ಶನಿವಾರಕ್ಕೆ ಸ್ಥಿರವಾಸರ ಎಂದು ಕರೆಯುತ್ತಾರೆ).ಆದ್ದರಿಂದ ಈ ಸಂಸ್ಥೆ ಜನರ ಮನದಲ್ಲಿರುವ ಅಜ್ಞಾನವೆಂಬ ನರಕಾಸುರನನ್ನು ಸಂಹರಿಸಿ,ಸುಜ್ಞಾನವನ್ನು ಪಸರಿಸುತ್ತಾ,ಸ್ಥಿರವಾಗಿ ಬೆಳೆದು ಬರುತ್ತಿದೆ.

ಸಮಾನ ಅವಕಾಶ:
ಇಲ್ಲಿ ಸಂಸ್ಕೃತ ಕಲಿಯಲು ಜಾತಿ-ಮತ-ಲಿಂಗ-ವಯಸ್ಸು ಇತ್ಯಾದಿ ಯಾವ ಭೇದವೂ ಇಲ್ಲ. ಆಸಕ್ತರೆಲ್ಲರಿಗೂ ಸಮಾನ ಅವಕಾಶ.ಬೆಂಗಳೂರಿನ ಶಂಕರಪುರದಲ್ಲಿರುವ ಸುರಸರಸ್ವತೀ ಸಭಾದ ಕಾರ್ಯಾಲಯದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಉಚಿತ ಸಂಸ್ಕೃತ ತರಗತಿಗಳನ್ನು ನೆಡೆಸಲಾಗುತ್ತಿದೆ.
ಸುರಸರಸ್ವತೀಸಭಾ ತನ್ನ ಆರಂಭದ ವರ್ಷಗಳಿಂದಲೂ ವರ್ಷಕ್ಕೆ ಎರಡು ಬಾರಿ ಪರೀಕ್ಷೆಗಳನ್ನು ನೆಡೆಸಿಕೊಂಡು ಬರುತ್ತಿದೆ. ಪ್ರಥಮ,ದ್ವಿತೀಯ,ತೃತೀಯ,ತುರೀಯಾ ಎಂಬ ನಾಲ್ಕು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕರ್ನಾಟಕದ ಮಾತ್ರವಲ್ಲ,ಇತರ ರಾಜ್ಯಗಳ ಕೇಂದ್ರಗಳೂ ಸೇರಿದಂತೆ ನೂರಕ್ಕೂ ಹೆಚ್ಚು ಪರೀಕ್ಷಾಕೇಂದ್ರಗಳಿವೆ.ಈ ಕೇಂದ್ರಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.ಇದುವರೆಗೂ ಸುಮಾರು ಐದುವರೆ ಲಕ್ಷದಷ್ಟು ಜನ ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.
ಸಂಸ್ಕೃತದ ಮೇಲಿನ ಪ್ರೀತಿಯಿಂದ.ಉಚಿತವಾಗಿ ಪಾಠಮಾಡುವ ಅಧ್ಯಾಪಕರು & ಸಂಸ್ಥೆಯ ಕಾರ್ಯಕರ್ತರ ಪರಿಶ್ರಮ ನಿಜಕ್ಕೂ ಪ್ರಶಂಸನೀಯವಾಗಿದೆ.

ಪರೀಕ್ಷೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕೆಳಗಿ ನೀಡಿರುವ web link ಗೆ ಹೋಗಿ

 

ಸಭೆಯ ಬಗ್ಗೆ

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!