Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗೇರಿ ಗುರುಮಹಿಮೆ 20

Published

on

ಒಮ್ಮೆ ಶಾಲೆಯಲ್ಲಿ ಸಂಸ್ಕೃತವನ್ನು ಮಕ್ಕಳಿಗೆ ಕಲಿಸುತ್ತಿದ್ದ ಪಂಡಿತರೊಬ್ಬರು ಜಗದ್ಗುರು ಶ್ರೀಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ದರ್ಶನಕ್ಕೆ ಬಂದರು. ಆಗ ಬ್ರಿಟಿಷ್ ಆಳ್ವಿಕೆಯ ಕಾಲ. ಆ ಪಂಡಿತರಿಗೆ ಸಂಗೀತದಲ್ಲಿಯೂ ಪಾಂಡಿತ್ಯವಿತ್ತು. ಜಗದ್ಗುರು ಮಹಾಸ್ವಾಮಿಗಳ ಎದರು ಹಾಡಲು ಬಯಸಿದರು. ಮಹಾಸ್ವಾಮಿಗಳು ಒಪ್ಪಿಕೊಂಡರು. ಆದರೂ ಆ ಪಂಡಿತರಿಗೆ ಜಗದ್ಗುರುಗಳಿಗೆ ಸಂಗೀತ ಜ್ಞಾನವಿದೆಯೋ ಇಲ್ಲವೋ ಎಂಬ ಅನುಮಾನವಿತ್ತು. ಅವರು ಮೊದಲ ಕಿರ್ತನೆಯನ್ನು ಪೂರ್ಣಗೊಳಿಸಿದ ತಕ್ಷಣ ಜಗದ್ಗುರು ಮಹಾಸ್ವಾಮಿಗಳು, “ಕೇದಾರ ಗೌಳವಲ್ಲವೇ?” ಎಂದರು. ಮತ್ತೊಂದು ಕಿರ್ತನೆ ಆದ ಮೇಲೆ ” ದೇವ ಗಾಂಧಾರವಲ್ಲವೇ?” ಎಂದರು. ಇದು ಹೀಗೆಯೇ, ಜಗದ್ಗುರು ಮಹಾಸ್ವಾಮಿಗಳ ಜ್ಞಾನದ ಕುರಿತಾದ ತಪ್ಪುಕಲ್ಪನೆ ದೂರವಾಗುವವರೆಗೂ, ನೆಡೆಯಿತು. ಈ ಕಛೇರಿಯ ನಂತರ ಆ ಪಂಡಿತರು ತಮ್ಮ ಮನದಲ್ಲಿ ಮೂಡಿದ ಆಲೋಚನೆಯಿಂದ ಪಶ್ಚಾತ್ತಾಪ ಪಟ್ಟು, ಶಿರಭಾಗಿ ಗುರು ಮಹರಾಜರಿಗೆ ಶರಣಾದರು. ಜಗದ್ಗುರು ಮಹಾಸ್ವಾಮಿಗಳು ಅವರನ್ನು ಆಶಿರ್ವದಿಸಿ ಮಕ್ಕಳ ಏಳ್ಗೆಗಾಗಿ ಅವರು ಶ್ರಮಿಸುತ್ತಿರುವುದನ್ನು ಶ್ಲಾಘಿಸಿ ಅನುಗ್ರಹ ಮಾಡಿದರು. ವೈರಾಗ್ಯ ಚಕ್ರವರ್ತಿಗಳಾದ ಜಗದ್ಗುರು ಶ್ರೀಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಶಿಷ್ಯ ಜನರನ್ನು ಅನುಗ್ರಹಿಸುತ್ತಿದ್ದ ಪರಿ ಮತ್ತು ಅನುಗ್ರಹಿತ ಭಕ್ತನ ಸ್ಥಿತಿ ಅನುಭವವೇದ್ಯವವೇ ಹೊರತು ವರ್ಣಿಸಲಾಗದು.

ದಾರ್ಶನಿಕ ಅವಧೂತರಾದ ಜಗದ್ಗುರು ಶ್ರೀಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ದಿವ್ಯ ಚರಿತೆಯಿಂದ ಆಯ್ದ ಭಾಗದೊಂದಿಗೆ ಗುರುಚರಣವ ಸ್ಮರಿಸುತ್ತಾ.

ಭವಾನೀ ಸಮೇತಂ ಭಜೆ ಮಲಹಾನಿಕರೇಶ್ವರಂ

– ವಿಶ್ವಾಸ್ ಎಸ್. ಭಟ್, ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!