Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಶ್ರೀಲಲಿತಾ ಸಹಸ್ರನಾಮ ಪ್ರತಿಪದಾರ್ಥ 28

Published

on

_64)_ ದೇವರ್ಷಿಗಣಸಂಘಾತಸ್ತೂಯಮಾನಾತ್ಮವೈಭವಾಯೈ ನಮಃ.
ಲಲಿತಾಂಬೆಯು ದೇವಗಣ ಮತ್ತು ಋಷಿಗಣಗಳ ಸಮೂಹಗಳಿಂದ ಸ್ತುತಿಸಲ್ಪಡುವ ವೈಭವವುಳ್ಳವಳು. ಇಲ್ಲಿ ದೇವರ್ಷಿಗಣ ಎಂಬ ಶಬ್ದವನ್ನು ದೇವಗಣ, ಋಷಿಗಣವೆಂದೂ ಹಾಗೂ ದೇವರ್ಷಿಗಳ ಗಣವೆಂದೂ ಎರಡು ರೀತಿಯಲ್ಲಿ ಅರ್ಥೈಸಬಹುದು. ಇಂದ್ರಾದಿ ಅಷ್ಟ ದಿಕ್ಪಾಲಕರೂ, ಬ್ರಹ್ಮರ್ಷಿ ಗಳೆಂದು ಮಾನ್ಯತೆ ಪಡೆದ ಋಷಿ ಶ್ರೇಷ್ಠರುಗಳ ಸಮೂಹ ವೈಭವದಿಂದ ಸ್ತುತಿಸುವ ಲಲಿತಾಂಬೆಯ ಮಹಿಮೆ ಅಪಾರವಾದದ್ದು. ಅಂತಹ ಲಲಿತಾಂಬೆಗೆ ನಮಸ್ಕಾರಗಳು.

_65)_  ಭಂಡಾಸುರವಧೋದ್ಯುಕ್ತಶಕ್ತಿಸೇನಾಸಮನ್ವಿತಾಯೈ ನಮಃ.
ಭಂಡ ಎಂಬ ಶಬ್ದವೇ ಇದು ಅಸುರನಿಗೆ ಸಂಬಂಧಿಸಿದ್ದು ಎಂಬ ಅರ್ಥವನ್ನು ಕೊಡುತ್ತದೆ. ಆಧ್ಯಾತ್ಮಿಕವಾಗಿ ರಜೋಗುಣ, ತಮೋಗುಣಗಳಿಂದ ಕೂಡಿದ ನಿರ್ಲಜ್ಜ ವ್ಯಕ್ತಿ ಎಂದು ಆಗುತ್ತದೆ.ಭಂಡಾಸುರನನ್ನು ಸಂಹರಿಸಲು ಸಿದ್ಧವಾದ ಶಕ್ತಿದೇವತೆಗಳ ಸೈನ್ಯ ಆಕೆಯ ಬಳಿ ಬಂದು ನಿಂತಿವೆ. ಆ ಶ್ರೀಮಾತೆಗೆ ನಮಸ್ಕಾರಗಳು.

✍🏻 ವೇ ಬ್ರ ಶ್ರೀ ವೆಂಕಟೇಶ ಜೋಶಿ
📧 joshivenkatesh7@gmail.com
📱9901884353

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!