Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

ಪ್ರಜ್ಞಾನಮ್ ದಿನದರ್ಶಿನೀ – ಮರಳಿ ಸನಾತನ ಚಿಂತನೆಯತ್ತ 

Published

on

ಪ್ರಜ್ಞಾನಮ್ ದಿನದರ್ಶಿನೀ

ಇಂದಿನ ದಿನಮಾನದಲ್ಲಿ ನಾವು ಕಾಲಗಣನೆಗಾಗಿ ಜನವರಿಯಿಂದ ಡಿಸೆಂಬರ್ ವರೆಗಿನ ದಿನಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಹಾಗಾಗಿ ನಮ್ಮ ಪ್ರಾಚೀನಪದ್ಧತಿಯಾದ ಸಂವತ್ಸರ, ಅಯನ, ಋತು, ಮಾಸ, ತಿಥಿಗಳನ್ನೆಲ್ಲ ಮರೆಯುತ್ತಿದ್ದೇವೆ. ಇವುಗಳನ್ನು ನೆನಪಿಸಲೆಂದೇ ‘ಪ್ರಜ್ಞಾನಮ್’ ಎಂಬ ಸಂಸ್ಥೆಯ ಮೂಲಕ ಈ ನವೀನ ಪ್ರಯೋಗವನ್ನು ಕೈಗೆತ್ತಿಕೊಂಡಿದ್ದೇವೆ.

ಮರಳಿ ಸನಾತನ ಚಿಂತನೆಯತ್ತ 

ಹಿಂದೂಧರ್ಮದ ಕಾಲಗಣನಾಪದ್ಧತಿಯಂತೆ ತಯಾರಿಸಲ್ಪಟ್ಟ ಈ ದಿನದರ್ಶಿನಿಯು ಜನವರಿಯಿಂದ ಪ್ರಾರಂಭವಾಗದೆ ಹಿಂದೂ ಸಂಸ್ಕೃತಿಯ ಚೈತ್ರಾದಿ ಮಾಸಗಳಿಂದ ಪ್ರಾರಂಭವಾಗುವುದು. ಆದರೂ ಜನರ ಅಪೇಕ್ಷೆಯಂತೆ ಜನವರಿಯಿಂದ ಯುಗಾದಿಯ ತನಕ ಇರುವ ಮಾಸಾದಿಗಳನ್ನೂ ಸಹ ಈ ದಿನದರ್ಶಿನಿಯು ಒಳಗೊಂಡಿದೆ. ವಿಕಾರಿಸಂವತ್ಸರದ ಈ ವಿನೂತನ ದಿನದರ್ಶಿನಿಯು ಕೇವಲ ಪುಸ್ತಕರೂಪದಲ್ಲಿರದೇ ಗೋಡೆಗೆ ಅಂಟಿಸುವಂತೆ ನಿರ್ಮಿಸಲ್ಪಟ್ಟಿದೆ. ಈ ಹೊಸಪ್ರಯತ್ನವು ಶೃಂಗೇರಿಯ ಮೆಣಸೆಯಲ್ಲಿರುವ ಪ್ರಜ್ಞಾನಮ್ ಎಂಬ ಸಂಸ್ಥೆಯಿಂದ ಮಾಡಲ್ಪಟ್ಟಿದೆ. ಇದು ಸನಾತನ ಧಾರ್ಮಿಕ ಆಧ್ಯಾತ್ಮಿಕ ವಿದ್ಯಾಪ್ರಸಾರಕ್ಕಾಗಿ ಕಟಿಬದ್ಧವಾದ ಸಂಸ್ಥೆ.

ಪ್ರಜ್ಞಾನಂ ದಿನದರ್ಶಿನಿಯ ವಿಶೇಷತೆಗಳು

ಈ ದಿನದರ್ಶಿನಿಯಲ್ಲಿ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳೆಂಬ ಪಂಚಾಂಗಗಳನ್ನು ಸುಲಭವಾಗಿ ನೋಡಬಹುದಾಗಿದೆ. ಚಂದ್ರನ ಚಲನೆಯನ್ನನುಸರಿಸಿ ಚೈತ್ರಾದಿ ಮಾಸಗಳೆಂಬ ತಿಂಗಳುಗಳು ನಿರ್ಧಾರಿತವಾಗಿರುತ್ತವೆ. ತಿಂಗಳಿನ ಆರಂಭ ಪಾಡ್ಯದಿಂದ, ತಿಂಗಳ ಕೊನೆಯ ದಿನ ಅಮಾವಾಸ್ಯೆಯಾಗಿರುತ್ತದೆ. ತಿಥಿ ಹಾಗೂ ನಕ್ಷತ್ರಗಳ ಮಾನವನ್ನು ಗಂಟೆಗಳಲ್ಲಿ ತೋರಿಸಲಾಗಿದೆ. ತಿಥಿಗಳ ಜೊತೆಗೆ ಇಂಗ್ಲೀಷ್ ದಿನಾಂಕಗಳನ್ನೂ ಕೊಡಲಾಗಿದೆ. ಹಿಂದೂ ಹಬ್ಬ-ಹುಣ್ಣಿಮೆಯ ವಿವರಗಳನ್ನು ಇಲ್ಲಿ ಕಾಣಬಹುದು. ಇವುಗಳ ಜೊತೆಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳ ಮಾಹಿತಿಯನ್ನೂ ಒಳಗೊಂಡಿದೆ. ಈ ದಿನದರ್ಶಿನಿಯು ನಮ್ಮ ಜೀವನಶೈಲಿಯನ್ನು ಇನ್ನಷ್ಟು ನಮ್ಮ ಪರಂಪರೆಗೆ ಹತ್ತಿರವಾಗಿಸಬಲ್ಲುದು.

ಬೆಲೆ ಹಾಗೂ ಪಡೆಯುವ ವಿಧಾನ

ವಿಕಾರಿಸಂವತ್ಸರ ದಿನದರ್ಶಿಕೆಯ ಬೆಲೆ – 50 ರೂಪಾಯಿ. ಕೊರಿಯರ್ ಚಾರ್ಜ್ ಪ್ರತ್ಯೇಕವಾಗಿರುತ್ತದೆ.

ಈ ದಿನದರ್ಶಿನಿಯನ್ನು ಅಪೇಕ್ಷಿಸುವವರು ಈ ಕೆಳಗೆ ಕೊಟ್ಟಿರುವ ಖಾತೆಗೆ ಹಣವನ್ನು ಸಂದಾಯ ಮಾಡಿ ತಮ್ಮ ವಿಳಾಸ ಮತ್ತು ಹಣಸಂದಾಯ ಮಾಡಿದ ಮಾಹಿತಿಯನ್ನು 9449512485ನಂಬರಿಗೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ 9449512485, 9482211173, 9480217372 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸಂಸ್ಕೃತಿಯ ಉಳಿವಿಗೆ ನಮ್ಮದೂ ಕೊಡುಗೆ ಸಲ್ಲಲಿ. ದಿನದರ್ಶಿನಿಯನ್ನು ಕೊಳ್ಳುವ ಮೂಲಕ ಈ ಹೊಸ ಪ್ರಯತ್ನವನ್ನು ಬೆಂಬಲಿಸೋಣ.

Name – Prajnaanam

Bank Name – Canara Bank

Branch – Sringeri

IFSC – CNRB0000866

A/c No. – 0866101013707

image.png
– 9449512485

E-mail – prajaanam@gmail.com

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!