Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಜಗದ್ಗುರು ಶ್ರೀಚಂದ್ರಶೇಖರಭಾರತೀ ಮಹಾಸ್ವಾಮಿಗಳು ರಚಿಸಿದ‌ ಶ್ರೀಋಷ್ಯಶೃಂಗಸ್ತೋ‌ – ಅರ್ಥಸಹಿತ

Published

on

ಶೃಂಗೇರಿ ಎಂದು ಹೆಸರು ಬರಲು ಕಾರಣೀಭೂತರಾದ ಋಷ್ಯಶೃಂಗ ದೇವರ ವರ್ಷಾವಧಿ ಜಾತ್ರಮಹೋತ್ಸವದಲ್ಲಿಂದು ಮಹಾರಥೋತ್ಸವ. ದಶರಥ ಮಹಾರಜನ ಪುತ್ರಕಾಮೇಷ್ಠಿ ಯಾಗದ ನೇತೃತ್ವ ವಹಿಸಿದ್ದರು. ತಿರುಪತಿಯಲ್ಲಿ ಪದ್ಮಾವತಿ ಶ್ರೀನಿವಾಸರ ಕಲ್ಯಾಣವನ್ನು ನೆರೆವೇರಿಸಿ ಕೊಟ್ಟಿದ್ದು ಸಹ ಈ ಮಹಾಮುನಿಯೇ.

ದಕ್ಷಿಣಾಮ್ನಾಯ ಶ್ರೀಶಾರದಾಪೀಠದ ಅಧಿಪತಿಗಳು ತಮ್ಮ ವಿಜಯಯಾತ್ರೇ ಆರಂಭಿಸುವ ಮುನ್ನ ಋಷ್ಯಶೃಂಗ ಮುನಿಗಳಿಗೆ ನಮಿಸಿ ಯಾತ್ರೆ ಆರಂಬಿಸುವುದು ವಾಡಿಕೆ.
ಜೀವನ್ಮುಕ್ತರಾದ ಜಗದ್ಗುರು ಶ್ರೀಚಂದ್ರಶೇಖರಭಾರತೀ ಮಹಾಸ್ವಾಮಿಗಳು ಋಷ್ಯಶೃಂಗ ಮಹಾಮುನಿಯನ್ನು ಶ್ಲೋಕ ರಚಿಸಿ ಸ್ತುತಿಸಿದ್ದಾರೆ.

!!ಶ್ರೀಋಷ್ಯಶೃಂಗಸ್ತೋತ್ರಂ!!

ರೋಮಪಾದದೇಶಮಂಗಸಂಜ್ಞಮಾವಿಶನ್ ಜವಾತ್ ವೃಷ್ಟಿಪೂರ್ಣಮಾತನೋದ್ವಿಭಾಂಡಕಾತ್ಮಜೋರ್ಭಕಃ!
ತಂ ಪಾದಬ್ಜನಮ್ರಲೋಕಮಾನಸೇಷ್ಟದಾಯಕಂ ಋಷ್ಯಶೃಂಗಮಾಶ್ರಯೇ ಸಮಸ್ತದೇಶವೃಷ್ಟಯೆ!!೧!!

.ರೋಮಪಾದನ ಆಳ್ವಿಕೆಯ ಅಂಗದೇಶವನ್ನು ಪ್ರವೇಶಿಸಿ ವಿಭಾಂಡಕ ಋಷಿಗಳ ಪುತ್ರನಾದ ಇನ್ನೂ ಹುಡುಗನಾದ ಋಷ್ಯಶೃಂಗನು (ಆ ದೇಶದಲ್ಲಿ) ಪೂರ್ಣವೃಷ್ಟಿಯನ್ನು (ಮಳೆಯನ್ನು) ಉಂಟುಮಾಡಿದನು. ಪಾದದಲ್ಲಿ ನಮಿಸಿರುವ ಜನರಿಗೆ ಇಷ್ಟಾರ್ಥಗಳನ್ನು ನೀಡುವ ಆ ಋಷ್ಯಶೃಂಗರನ್ನು ಎಲ್ಲ ದೇಶಗಳಲ್ಲೂ ಮಳೆಯಾಗುವುದಕ್ಕಾಗಿ ಆಶ್ರಯಿಸುತ್ತೇನೆ.

ಅನಾವೃಷ್ಟಿಭಯಾತ್ಸರ್ವೇ ಜನಾಃ ಕ್ಲಿಶ್ಯಂತಿ ಸದ್ಗುರೋ!
ಶಿಘ್ರಂ ವೃಷ್ಟಿಪ್ರದಾನೇವ ಸರ್ವಾಂಸ್ತೋಷಯ ತಾನ್ ಪ್ರಭೋ!!೨!!

ಹೇ ಗುರುಗಳಾದ ಋಷ್ಯಶೃಂಗರೇ! ಒಡೆಯರೇ! ಮಳೆಯಲ್ಲಿ ಭಯದಿಂದ (ಕ್ಷಾಮದ ಭಯದಿಂದ) ಎಲ್ಲಾ ಜನರೂ ತೊಂದರೆಪಡುತ್ತಿದ್ದಾರೆ. ಬೇಗನೆ ಮಳೆಯನ್ನು ತರಿಸಿ ಎಲ್ಲರನ್ನೂ ತೃಪ್ತಿಪಡಿಸಿರಿ

ಸರ್ವೇಷು ದೇಶೇಷು ಯಥೇಷ್ಟವೃಷ್ಟಿಃ ಸಂಪೂರ್ಣಸಸ್ಯಾ ಚ ಮಹೀ ಚಕಾಸ್ತು!
ಸರ್ವೇ ಜನಾಸ್ಸಂತು ಸುಖೇನಯುಕ್ತಾಃ ಸ್ವಸ್ವೇಷು ಧರ್ಮೇಷು ರತಾಶ್ಚ ನಿತ್ಯಮ್!!೩!!

ಎಲ್ಲಾ ದೇಶಗಳಲ್ಲಿ ಬೇಕಾದಷ್ಟು ಮಳೆಯಾಗಲಿ.ಭೂಮಿಯು ಸಸ್ಯರಾಶಿಯಿಂದ ಬೆಳಗಲಿ. ಎಲ್ಲರೂ ಸುಖವನ್ನು ಹೊಂದಲಿ ಮತ್ತು ತಮ್ಮ ತಮ್ಮ ಧರ್ಮಾಚರಣೆಯಲ್ಲಿ ನಿರತರಾಗಲಿ.

ವರ್ಧತಾಂ ಸರ್ವಲೋಕೇಪಿ ಧರ್ಮಶ್ಶಾಶ್ವತಿಕಸ್ಸದಾ!
ತತುಷ್ಟಾ ದೇವತಾಸ್ಸರ್ವಾ ಅನುಗೃಹ್ಣಂತು ಮನುಷಾನ್!!೪!!

ಎಲ್ಲಾ ಲೋಕಗಳಲ್ಲೂ ಧರ್ಮವು ಶಾಶ್ವತವಾಗಿ ಅಭಿವೃದ್ಧಿಗೊಳ್ಳಲಿ. ಇದರಿಂದ ತೃಪ್ತರಾದ ಸಕಲ ದೇವತೆಗಳು ಮನುಷ್ಯರನ್ನು ಅನುಗ್ರಹಿಸಲಿ.

ಕುರ್ವಂತು ವೇದಾಧ್ಯಯನಂ ಬ್ರಹ್ಮಚರ್ಯವ್ರತೇ ಸ್ಥಿತಾಃ!
ವಟವೋ ಗುರುಶುಶ್ರೂಷಾಸಕ್ತಾಸ್ಸಂತತಮಾದರಾತ್!!೫!!

ಬ್ರಹ್ಮಚರ್ಯ ವ್ರತಿಗಳಾದ ವಟುಗಳು ವೇದಾಧ್ಯಯನವನ್ನು ನೆಡೆಸಲಿ ಹಾಗೆಯೇ ಸದಾ ಭಕ್ತಿಯಿಂದ ಗುರುಗಳ ಸೇವೆಯಲ್ಲಿ ಆಸಕ್ತರಾಗಲಿ.

ಗೃಹಸ್ಥಾಸ್ತ್ವಗ್ನಿಹೋತ್ರಾದಿಶ್ರೌತಸ್ಮಾರ್ತೇಷು ಕರ್ಮಸು!
ಭೂಯಾಸುಃ ಪ್ರವಣಾ ನಿತ್ಯಂ ದಂಭಾದಿರಹಿತಾ ಜವಾತ್!!೬!!

ಗೃಹಸ್ಥಾಶ್ರಮಿಗಳು ಅಹಂಕಾರ ಮೊದಲಾದವನ್ನು ತೊರೆದು ಅಗ್ನಿಹೋತ್ರ ಮೊದಲಾದ ಶ್ರೌತ-ಸ್ಮಾರ್ತ ಕರ್ಮಗಳಲ್ಲಿ ಆಸಕ್ತರಾಗಲಿ.

ಯತೀನಾಮೂರ್ಧ್ವರೇತಸ್ತ್ವಂ ಶಾಂತ್ಯಾದಿಗುಣಯುಕ್ತಾತಾ ! ದೇಶಿಕೇಂದ್ರ ಜವಾದ್ಭೂಯಾತ್ಪರಬ್ರಹ್ಮಸ್ಥಿತಿಸ್ಸದಾ!!೭!!

ಹೇ ಗುರುಶ್ರೇಷ್ಠರೇ! ಯತಿಗಳು ಶಿಘ್ರವಾಗಿ ಊರ್ಧ್ವರೇತಸ್ಕರಾಗಿ, ಶಾಂತಿ ಮೊದಲಾದ ಗುಣಗಳುಳ್ಳವರಾಗಿ, ಸದಾ ಪರಬ್ರಹ್ಮನುಸಂಧಾನರಾಗಿರಲಿ.

ಶ್ರೀಮದ್ ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳು ವಿರಚಿತ ಋಷ್ಯಶೃಂಗಸ್ತೂತ್ರವು ಸಂಪೂರ್ಣವಾಯಿತು

ಈ ಶ್ಲೋಕವನ್ನು ಪಠಿಸುತ್ತಾ ಋಷ್ಯಶೃಂಗ ಮಹಾಮುನಿಗಳ ಮತ್ತು ಜಗದ್ಗುರು ಮಹಾಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗೋಣ. .

– ವಿಶ್ವಾಸ್. ಎಸ್. ಭಟ್, ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!