Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಬೆಲಗೂರಿನ‌ ಅವಧೂತರಿಂದ ಬದಲಾದ ಬದುಕು

Published

on

ಕಾಯಿ ಮಂಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಲಗೂರಿನ ತಿಮಪ್ಪಯ್ಯನವರು ಸಮಯ ಸಿಕ್ಕಾಗಲ್ಲೇಲ್ಲಾ ಅವದೂತ ಗುರು ಶ್ರೀ ಬಿಂದುಮಾಧವ ಶರ್ಮರ ಸೇವೆಯನ್ನು ಮಾಡುತ್ತಿದ್ದರು. ತಮ್ಮ ಬಾಲ್ಯದಿಂದಲೂ ಗುರುಗಳ ಹತ್ತಿರವಿದ್ದಿದ್ದರಿಂದ ಭಕ್ತಿ ಶ್ರದ್ಧೆ ತುಸು ಹೆಚ್ಚಾಗಿಯೇ ಇದ್ದದ್ದು ಸಹಜ.ಹಿರಿಯರೆಲ್ಲ ಸೇರಿ ಬ್ರಹ್ಮಾವರ ಸಮೀಪದ ಸಾಸ್ಥನ ಮೂಲದ ಗೀತಾ ಎಂಬುವವರೊಂದಿಗೆ ತಿಮ್ಮಪ್ಪಯ್ಯನವರ ವಿವಾಹವನ್ನು ಮಾಡಿಸಿದರು. ಮದುವೆಗೆ ಮೊದಲು ಕಾಯಿ ಮಂಡಿ ಕೆಲಸದಿಂದ ಬರುತ್ತಿದ್ದ ಆದಾಯ ಜೀವನ ನಿರ್ವಹಣೆಗೆ ಸಾಕಾಗುತ್ತಿತ್ತು. ಮದುವೆ ನಂತರ ಸಂಸಾರದ ಸಾಗಿಸಲು ಆ ಆದಾಯ ಸಾಕಾಗುತ್ತಿರಲಿಲ್ಲ. ಹೀಗಿರುವಾಗ ಶ್ರೀ ಬಿಂದುಮಾಧವ ಶರ್ಮರ ಸಲಹೆಯಂತೆ ಸ್ವಂತ ಉದ್ಯೋಗಕ್ಕೆ ಮುಂದಾದರು.ಬೆಲಗೂರಿನಲ್ಲಿ ಒಂದು ಉಪಹಾರ ಮಂದಿರವನ್ನು ತೆರೆದರು. ತಮ್ಮ ತಾತ-ಮುತ್ತಂದಿರು ಶಾನುಭೋಗರಾದ್ದರಿಂದ “ಶಾನುಭೋಗ” ಉಪಹಾರ ಮಂದಿರ ಎಂದು ಹೆಸರಿಟ್ಟರು. ಪ್ರಾರಂಭಿಸಿದ ಕೆಲ ವರ್ಷಗಳಲ್ಲೇ ಆರ್ಥಿಕ ಮಟ್ಟದಲ್ಲಿ ಸುಧಾರಣೆ ಕಂಡಿತು. ಹೀಗಿರುವಾಗ ಯಾವ ಕೆಟ್ಟ ದೃಷ್ಟಿ ತಾಕಿತೊ ಏನೋ ಎಂಬಂತೆ ತಿಮ್ಮಪ್ಪಯ್ಯನವರ ಮಡದಿಯ ಆರೋಗ್ಯ ಹದಗೆಟ್ಟಿತು. ನಾನ ವೈದ್ಯರ ಬಳಿ ಹೋಗಿ ಬಂದಾಯಿತು, ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ದಿನದಿಂದ ದಿನಕ್ಕೆ ಸ್ಥಿತಿ ಗಂಭೀರವಾಗುತ್ತಾ ಹೋಯಿತು. ಬಿಂದು ಮಾಧವ ಶರ್ಮರ ಮೊರೆಹೊದಾಗ ಅವರು ತಿಮ್ಮಪ್ಪಯ್ಯನವರ ಮನೆಗೆ ಬಂದು ಅನುಗ್ರಹಿಸಿ ಅಪ್ಪಣೆಮಾಡಿದ ಸರಳ ಪರಿಹಾರಗಳ ಮೂಲಕ ಆರೋಗ್ಯ ಪರಿಸ್ಥಿತಿ ಉತ್ತಮವಾಯಿತು. ಕೆಲವು ದಿನಗಳಲ್ಲಿ ತಿಮ್ಮಪ್ಪಯ್ಯನವರ ಮಡದಿ ಎಂದಿನಂತಾದರು. ಪತಿ-ಪತ್ನಿ ಇಬ್ಬರು ಮಕ್ಕಳೊಂದಿಗೆ ಶ್ರೀ ಬಿಂದುಮಾಧವಶರ್ಮರ ಚರಣವನ್ನು ಸದಾ ಸ್ಮರಿಸುತ್ತಾ ಬೆಲಗೂರಿನಲ್ಲಿ ಇಂದಿಗೂ ಶಾನುಭೋಗ ಉಪಹಾರ ಮಂದಿರ ನಡೆಸುತ್ತಿದ್ದಾರೆ.

– ಶಂಕರ್ ಶರ್ಮ, ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!