Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ನಿಲಯ – ಕಿರುಪರಿಚಯ

Published

on

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ನಿಲಯ, ಬೆಂಗಳೂರು – ಕಿರು ಪರಿಚಯ

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ನಿಲಯಂ

ಸ್ಥಳ: ರಂಗಾದೊರೈ ಆಸ್ಪತ್ರೆ ಆವರಣ, ನರಸಿಂಹಶಾಸ್ತ್ರೀ ರಸ್ತೆ, ಶಂಕರಪುರಂ, ಬೆಂಗಳೂರು

ಬಾಗಿಲು ತೆಗೆಯುವ ಸಮಯ:

ಪ್ರತಿ ದಿನ: ಬೆಳಗ್ಗೆ ೫:೧೫ – ೫:೪೫ (5 :15am – 5:45am)

ಪ್ರತಿ ಅಮಾವಾಸ್ಯೆ: ಸಂಜೆ ೬:೦೦ – ೮:೦೦ (ಭಜನೆ) (06:00pm -8:00pm)

ಗುರುವಾರ, ಶನಿವಾರ, ಭಾನುವಾರ: ಬೆಳಗ್ಗೆ ೧೧:೪೫ – ೧:೦೦ (ಅನಿವಾರ್ಯ ಸಂದರ್ಭಗಳನ್ನು ಹೊರತು ಪಡಿಸಿ)

ಜಗದ್ಗುರು ಶ್ರೀ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳು ನರಸಿಂಹಶಾಸ್ತ್ರೀಯವರನ್ನು (ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳ ಪೂರ್ವಾಶ್ರಮದ ಹೆಸರು) ಪೂರ್ವ ಮೀಮಾಂಸಾ ಶಾಸ್ತ್ರಾಧ್ಯಯನಕ್ಕೆ ಬೆಂಗಳೂರಿನಲ್ಲಿ ತಾವೇ ಸ್ಥಾಪಿಸಿದ್ದ ಗೀರ್ವಾಣ ಪ್ರೌಢವಿದ್ಯಾಭಿವರ್ದಿನಿಗೆ ಕಳುಹಿಸಲು ನಿರ್ಧರಿಸಿದರು. ನರಸಿಂಹ ಶಾಸ್ತ್ರೀಗಳ ತಂದೆ-ತಾಯಿ, ಮಗನನ್ನು ಬಿಟ್ಟಿರಬೇಕೆಂಬ ಆತಂಕವನ್ನು ಅರಿತ ಗುರುಗಳು ಅವರನ್ನೂ ಮಗನ ಜೊತೆಯಲ್ಲಿ ಕಳುಹಿಸುವ ಏರ್ಪಾಡು ಮಾಡಿದರು. ಅಂದಿನ ಅಗ್ರಹಾರವಾಗಿದ್ದ ಈಗಿನ ರಂಗಾದೊರೈ ಆಸ್ಪತ್ರೆಯ ಆವರಣದಲ್ಲಿರುವ ಒಂದು ಮನೆಯಲ್ಲಿ ನರಸಿಂಹ ಶಾಸ್ತ್ರಿಗಳೊಡನೆ ಅವರ ತಂದೆ-ತಾಯಿಯರು ಸಹ ಉಳಿಯಲು ವ್ಯವಸ್ಥೆ ಮಾಡಿಸಿದರು. ೧೯೧೧-೧೨ ರಲ್ಲಿ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ತಮ್ಮ ಪೂರ್ವಾಶ್ರಮದಲ್ಲಿ ತಂದೆ-ತಾಯಿಯರೊಡನೆ ವಾಸವಿದ್ದ ಮನೆಯೇ “ಶ್ರೀ ಚಂದ್ರಶೇಖರ ಭಾರತೀ ನಿಲಯಂ”.

ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ಪೂರ್ವಾಶ್ರಮದಲ್ಲಿ ವಾಸವಿದ್ದ ಈ ಮನೆಯನ್ನು ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮಿಗಳು ೨೦೦೭ನೇ ಇಸವಿಯಲ್ಲಿ ಕೈಗೊಂಡಿದ್ದ ತಮ್ಮ ವಿಜಯ ಯಾತ್ರೆಯ ಸಂದರ್ಭದಲ್ಲಿ ಸ್ಮಾರಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿ ಸ್ವತಃ ತಾವೇ ಮೊದಲ ಪೂಜೆಯನ್ನು ನೆರವೇರಿಸಿದರು. ಮತ್ತು ಪ್ರತಿನಿತ್ಯ ಇಲ್ಲಿ ಪೂಜೆ ನಡೆಸುವಂತೆ ವ್ಯವಸ್ಥೆಮಾಡಿದರು. ಅಂದಿನಿಂದ ಪ್ರತಿನಿತ್ಯ ಬೆಳಗಿನ ಜಾವ ಸುಮಾರು ೫:೧೫ – ೫:೩೦ರ ಹೊತ್ತಿಗೆ ಪುರೋಹಿತರು ಇಲ್ಲಿಗೆ ಬಂದು ಪೂಜೆಯನ್ನು ನೆರವೇರಿಸುತ್ತಿದ್ದಾರೆ.

ಇಲ್ಲಿ ಹಲವಾರು ಭಕ್ತರು ಸೇರಿ ಪ್ರತಿ ಅಮಾವಾಸ್ಯೆಯಂದು ಸಂಜೆ ೬:೦೦ ರಿಂದ ೮:೦೦ರ ವರೆಗೆ ಭಜನೆಯನ್ನು ಸಹ ನಡೆಸಿಕೊಂಡು ಹೋಗುತ್ತಿದ್ದಾರೆ.

 

ಇಲ್ಲಿಗೆ ಬರುವ ಭಕ್ತರು ಕೆಲ ಹೊತ್ತು ಕುಳಿತು ಧ್ಯಾನವನ್ನು ಮಾಡಿ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ. ಎದುರಲ್ಲೇ ಇರುವ ರಂಗಾದೊರೈ ಆಸ್ಪತ್ರೆಗೆ ಬರುವ ಹಲವು ರೋಗಿಗಳು ಇಲ್ಲಿಗೆ ಬಂದು ತಮ್ಮ ರೋಗವು ಗುಣವಾಗುವಂತೆ ಗುರುಗಳಲ್ಲಿ ಬೇಡಿ, ಸುಧಾರಣೆಯನ್ನು ಕಂಡ ಬಹಳಷ್ಟು ಉದಾಹರಣೆಗಳಿವೆ. ಇನ್ನು ಅಧ್ಯಾತ್ಮ ಆಸಕ್ತರಿಗೆ ಈ ಸ್ಥಳವು ಕಲ್ಪವೃಕ್ಷವೇ ಸರಿ. ಮನಸ್ಸಿಗೆ ನೆಮ್ಮದಿಯಿಲ್ಲದವರು ಇಲ್ಲಿ ಬಂದು ನೆಮ್ಮದಿಯನ್ನು ಕಂಡವರಿದ್ದಾರೆ. ಕೋಪದ ಸ್ವಭಾವದವರು ಇಲ್ಲಿಗೆ ಬರಲು ಪ್ರಾರಂಭಿಸಿದಮೇಲೆ ಸೌಮ್ಯ ಸ್ವಭಾವದವರಾಗಿ ಬದಲಾಗಿದ್ದಾರೆ. ಅನೇಕ ಅಧ್ಯಾತ್ಮ ಆಸಕ್ತರು ಇಲ್ಲಿಗೆ ಬಂದು ಪ್ರೇರಣೆಯ ಮೂಲಕ ಮಾರ್ಗದರ್ಶನ ಪಡೆದುಕೊಳ್ಳುತ್ತಾರೆ. ಅಧಿಷ್ಠಾನ ಮಂದಿರದ ಬಾಗಿಲು ತೆಗೆದಿರದಿದ್ದರೂ ಕೆಲವು ಭಕ್ತರು ಹೊರಗಡೆಯೇ ಕುಳಿತು ಗುರುಸಾನಿಧ್ಯದ ಅನುಭವವನ್ನು ಪಡೆದುಕೊಳ್ಳುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಸ್ಥಳವು ಬೇಡಿದ್ದೆಲ್ಲ ನೀಡುವ ಕಾಮಧೇನುವಾಗಿದೆ.

– ಸಂದೀಪ್ ಎಂ.ಕೆ. ತರೀಕೆರೆ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!