Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಮೇಗೂರಿನಲ್ಲಿ ಸಂಪನ್ನಗೊಂಡ ವೈಭವದ ಕುಂಭಾಭೀಷೇಕ

Published

on

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮುನಿವೃಂದಪುರ (ಮೇಗೂರು) ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿಂದು ( 22.04.2019 ) ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಕುಂಭಾಭೀಷೇಕ ನೆರವೇರಿತು.

ಪ್ರಾತಃ 9.30 ಗಂಟೆಗೆ ಸರಿಯಾಗಿ ದೇವಸ್ಥಾನಕ್ಕೆ ಚಿತಗತೈಸಿದ ಜಗದ್ಗುರು ಮಹಾಸ್ವಾಮಿಗಳನ್ನು. ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಭಕ್ತಜನರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಅನುಷ್ಠಾನಗಳನ್ನು ಮುಗಿಸಿ ದೇವಸ್ಥಾನಕ್ಕೆ ಆಗಮಿಸಿದ ಶ್ರೀ ಶ್ರೀ ಗಳು ಮೊದಲು ಶ್ರೀ ಮಹಾ ಗಣಪತಿಯ ಪೂಜೆ ನೆರವೇರಿಸಿ, ನಂತರ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಗೆ ಅಭಿಷೇಕ ಮತ್ತು ಅರ್ಚನೆಯನ್ನು ನೆರವೇರಿಸಿದರು. ನಂತರದಲ್ಲಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದರು. ತದನಂತರ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದ ಶಿಖರಕ್ಕೆ ತೆರಳಿ ಕಳಶಕ್ಕೆ ಅಭಿಷೇಕ ನೆರವೇರಿಸಿದರು. ಅದಾದ ನಂತರ ಶಿಲಾಫಲಕವನ್ನು ಅನಾವರಣ ಮಾಡಿ ನೇರವಾಗಿ ವೇದಿಕೆಗೆ ಆಗಮಿಸಿದರು.

ಶ್ರೀ ಜಗದ್ಗುರು ಮಹಾಸ್ವಾಮಿಗಳು ಅನುಗ್ರಹ ಭಾಷಣವನ್ನು ಮಾಡುತ್ತಾ ಮಹಾಭಾರತದ ಅನೇಕ ಸಂದರ್ಭಗಳ ನಿದರ್ಶನವನ್ನು ನೀಡುತ್ತಾ ಅತ್ಯಂತ ಬೋಧಪ್ರದವಾದ ನುಡಿಗಳನ್ನಾಡಿ ಅನಹಗ್ರಹಮಾಡಿದರು.

ಶ್ರೀ ಮಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ. ವಿ.ಆರ್.ಗೌರೀಶಂಕರರವರು ಮಾತನಾಡುತ್ತಾ ಪುನರ್ ನಿರ್ಮಾಣ ಕಾರ್ಯವು ಬಹಳ ಸುಂದರವಾಗಿ ಮೂಡಿ ಬಂದಿರುವ ಬಗ್ಗೆ ಭಕ್ತ ಜನರನ್ನು ಪ್ರಶಂಸಿಸಿದರು.

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!