Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಆದಿ ಶಂಕರಾಚಾರ್ತ ವಿರಚಿತ ಶ್ರೀ ಹನುಮತ್ಪಂಚರತ್ನಮ್ ಭಾವಾರ್ಥ ಸಹಿತ – ಎಲ್. ಬಿ. ಪೆರ್ನಾಜೆ

Published

on

 

ಶ್ರೀ ಹನುಮತ್ಪಂಚರತ್ನಮ್ ಭಾವಾರ್ಥ ಸಹಿತ

ವೀತಾಖಿಲವಿಷಯೇಚ್ಛಂ ಜಾತಾನಂದಾಶ್ರುಪುಲಕಮತ್ಯಚ್ಛಮ್ |
ಸೀತಾಪತಿದೂತಾದ್ಯಂ ವಾತಾತ್ಮಜ ಮದ್ಯ ಭಾವನೆಯೇ ಹೃದ್ಯಮ್ || ೧ ||

ಭಾವಾನುವಾದ :-
ವಿಷಯ ಸುಖಗಳ ಆಶೆಗಳೆಲ್ಲವನ್ನೂ ಬಿಟ್ಟು; ಸಂತೋಷದ ಕಣ್ಣೀರಿನಿಂದ ಪುಳಕಿತನಾದಂತಹಾ; ಅತ್ಯಂತ ಪರಿಶುಧ್ಧನಾಗಿರುವ; ಜಾನಕೀರಮಣನ ಆದಿ ಸೇವಕನಾದ; ಸುಂದರ ರೂಪಿನ ಆ ವಾಯುಪುತ್ರ ಆಂಜನೇಯನನ್ನು ನಾನಿಂದು ಹೃದಯಾಂತರಾಳದಿಂದ ಸ್ಮರಿಸುವೆನು. || ೧ ||

ತರುಣಾರುಣಮುಖಕಮಲಂ ಕರುಣಾರಸಪೂರಿತಾಪಾಂಗಂ |
ಸಂಜೀವನಮಾಶಾಸೇ ಮಂಜುಲಮಹಿಮಾನಮಂಜನಾಭಾಗ್ಯಂ || ೨ ||

ಭಾವಾನುವಾದ :-
ಉದಯಸೂರ್ಯನ ಹಾಗೆ ಕಾಂತಿಯುಕ್ತವಾದ ಮುಖವನ್ನು ಹೊಂದಿದವನಾದ; ದಯಾರಸದ ಹರಿವು ತುಂಬಿದ ಕಡೆಗಣ್ಣುಗಳಿರುವ ;ಜೀವದಾನ ಮಾಡುವ ಮನೋಜ್ಞ ಮನಸ್ಸಿನ; ;ಅಂಜನಾದೇವಿಯ ಪಾಲಿಗೆ ಭಾಗ್ಯಕಾರಕನಾದ ಆ ಹನುಮಂತನನ್ನು ನಾನು ಸ್ತುತಿಸುತ್ತ್ತೇನೆ. || ೨ ||

ಶಂಬರವೈರಿಶರಾತಿಗಮಂಬುಜದಲ ವಿಪುಲಲೋಚನಾದಾರಂ |
ಕಂಬುಗಲಮನಿಲದಿಶಷ್ಟಂ ಬಿಂಬಜ್ವಲಿತೋಷ್ಠಮೇಕಮವಲಂಬೇ || ೩ ||

ಭಾವಾನುವಾದ :-

ಮನ್ಮಥನ ಬಾಣವನ್ನು ದೂರೀಕರಿಸಿದವನಾಗಿರುವ; ತಾವರೆಯ ದಳಗಳನ್ನು ಹೋಲುವ ವಿಶಾಲವಾದ ಕಣ್ಣುಗಳಿಂದ ಕೂಡಿ ಉದಾರ ಚರಿತನಾಗಿರುವ ; ಶಂಖಾಕಾರದ ಕೊರಳನ್ನು ಹೊಂದಿರುವ; ಆ ವಾಯು ದೇವನಿಗೆ ಭಾಗ್ಯವನ್ನು ತಂದುಕೊಟ್ಟ; ತೊಂಡೆಯ ಹಣ್ಣಿನ ತೆರದ ಕಾಂತಿಯುಕ್ತ ತುಟಿಯನ್ನು ಹೊಂದಿದ ಆ ಅಂಜನೇಯನನ್ನು ಮಾತ್ರಾ ನಾನು ಆಶ್ರಯಿಸುವೆನು. || ೩ ||

ದೂರೀಕೃತಸೀತಾರ್ತಿ:ಪ್ರಕಟೀಕೃತರಾಮ ವೈಭವಸ್ಪೂರ್ತಿ: |
ದಾರಿತ ದಶಮುಖಕೀರ್ತಿ:ಪುರತೋ ಮಮ ಭಾತು ಹನುಮತೋ ಮೂರ್ತಿ: || ೪ ||

ಭಾವಾನುವಾದ :-
ಜಾನಕೀದೇವಿಯ ವ್ಯಥೆಯನ್ನು ದೂರಮಾಡಿದ; ಶ್ರೀ ರಾಮಚಂದ್ರನ ವೈಭವದ ಸ್ಪೂರ್ತಿಯನ್ನು ಲೋಕಕ್ಕೆ ಪ್ರಕಟಗೊಳಿಸಿದ; ದಶಮುಖ ರಾವಣನ ಕೀರ್ತಿಯನ್ನು ಹರಣ ಮಾಡಿದ ಆ ಹನುಮಂತನ ಮೂರ್ತಿಯು ಯಾವಾಗಲೂ ನನ್ನೆದುರಿನಲ್ಲಿ ಶೋಭಿಸಲಿ || ೪ ||

ವಾನರನಿಕರಾಧ್ಯಕ್ಷಂ ದಾನವಕುಲಕುಮುದರವಿಕರಸದೃಶಂ |
ದೀನಜನಾವನದೀಕ್ಷಂ ಪವನತಪ:ಪಾಕಪುಂಜಮದ್ರಾಕ್ಷಂ || ೫ ||

ಭಾವಾನುವಾದ :-
ವಾನರ ಸೈನ್ಯಕ್ಕೆ ಅಧಿನಾಯಕನಾಗಿ; ದೈತ್ಯಕುಲವೆಂದು ಹೇಳುವ ನೈದಿಲೆಗಳಿಗೆ ಸೂರ್ಯನ ಕಿರಣವಾಗಿ ನಾಶ ಮಾಡಿದ; ದೀನ ಜನರನ್ನು ರಕ್ಷಿಸುವುದರಲ್ಲಿ ದೀಕ್ಷಾಬಧ್ಧನ ತೆರದಿ ಆಸಕ್ತಿ ಹೊಂದಿದ್ದ; ಆ ವಾಯುದೇವರ ತಪ್ಪಸ್ಸಿನ ಸಿಧ್ಧಿಗಳ ಸಮೂಹ ರೂಪವೇ ಆಗಿರುವ ಆ ಆಂಜನೇಯ ಸ್ವಾಮಿಯನ್ನು ನಾನು ದರ್ಶನ ಮಾಡಿದೆನು. || ೫ ||

ಏತತ್ಪವನಸುತಸ್ಯ ಸ್ತೋತ್ರಂ ಯ: ಪಠತಿ ಪಂಚರತ್ನಾಖ್ಯಂ ||
ಚಿರಮಿಹ ನಿಖಿಲಾನ್ಭೋಗಾನುಂಕ್ತ್ವಾ ಶ್ರೀರಾಮ ಭಕ್ತಿ ಭಾಗ್ಭವತಿ || ೬ ||

ಭಾವಾನುವಾದ :-
ಈ ಪಂಚರತ್ನ ಸ್ತೋತ್ರಂಗಳನ್ನು ಯಾರು ಪಠಣ ಮಾಡುವರೋ ಅವರು ಬಹುಕಾಲ ಈ ಲೋಕದ ಭೋಗಭಾಗ್ಯಂಗಳನ್ನು ಅನುಭವಿಸಿ ಭಗವಾನ್ ಶ್ರೀ ರಾಮಚಂದ್ರನ ಭಕ್ತಿಗೆ ಭಾಜನರಾವರು. || ೬ ||

||ಇತಿ ಶ್ರೀಮದ್ ಜಗದ್ಗುರು ಆದ್ಯಶಂಕರಾಚಾರ್ಯ ವಿರಚಿತ ಶ್ರೀ ಹನುಮತ್ಪಂಚರತ್ನಮ್||

– ಎಲ್.ಬಿ.ಪೆರ್ನಾಜೆ, ಪುತ್ತೂರು

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!