Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ನಮ್ಮ ದೇವಾಲಯಗಳು / Our Temple's

ಹಾಲಾಡಿ ಶ್ರೀಲಕ್ಷ್ಮೀನೃಸಿಂಹ ಕ್ಷೇತ್ರದ ದಶನ – ಸಂದೀಪ್ ದೀಕ್ಷಿತ್

Published

on

ಭಗವಂತನ ವಸ್ತುತಃ ಪರಿಚ್ಚೇಧರಾಹಿತ್ಯವನ್ನು ತಿಳಿಸುವ ಅವತಾರವೆಂದರೆ ಅದು ಶ್ರೀ ನೃಸಿಂಹಾವತಾರ. ಈ ನೃಸಿಂಹಾವತಾರದಲ್ಲಿ ಪರಮಾತ್ಮನು, ಭೇಧ ಬುದ್ಧಿ ಜನ್ಯವಾದ ವೈರತ್ವದ ರೂಪವಾದ ಹಿರಣ್ಯ ಕಷಿಪುವನ್ನು ಸಂಹರಿಸಿದನು. ಭಗವಂತನು ಸರ್ವಾತ್ಮನೂ, ಸರ್ವವ್ಯಾಪಿಯೂ ಎಂದು ತಿಳಿದ ಪ್ರಹ್ಲಾದನನ್ನು ರಕ್ಷಿಸುವ ಮೂಲಕ ಉಪನಿಷತ್ ಪ್ರತಿಪಾದಿತವಾದ, ಭಗವಂತನು ಸರ್ವಾತ್ಮನೆಂದು ಘೋಷಿಸುವ ಅದ್ವೈತ ತತ್ವವನ್ನು ಬೋಧಿಸಿದನು. ಇಂತಹ ಶ್ರೀನರಹರಿಯ ದಿವ್ಯ ಮಂಗಳ ಸಾನಿಧ್ಯದಿಂದ ಪುನೀತವಾಗಿರುವ ಕ್ಷೇತ್ರ ಹಾಲಾಡಿ ಕ್ಷೇತ್ರ.

ಹಾಲಾಡಿಯ ನೃಸಿಂಹ ದೇವರಿಗೆ ಪುನರ್ ಪ್ರತಿಷ್ಠಾ ಕುಂಭಾಭಿಷೇಕ ನೆರವೇರಿಸಿ ಧಾರ್ಮಿಕ ಸಭೆಯಲ್ಲಿ ದಿವ್ಯ ಸಾನಿಧ್ಯವಹಿಸಿದ ಶೃಂಗೇರಿ ಜಗದ್ಗುರು ಮಹಾಸ್ವಾಮಿಗಳು.

ಹಿಂದೆ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಹದಿನಾಲ್ಕನೇ ಜಗದ್ಗುರುಗಳಾದ, ಪರಮಹಂಸೇತ್ಯಾದಿ ಬಿರುದಾಂಕಿತರಾದ ಶ್ರೀ ನೃಸಿಂಹ ಭಾರತೀ ಮಹಾಸ್ವಾಮಿಗಳು ತಮ್ಮ ದಿಗ್ವಿಜಯ ಯಾತ್ರೆ ಮಾಡುವ ಸಂದರ್ಭದಲ್ಲಿ ಈ ಹಾಲಾಡಿ ಕ್ಷೇತ್ರಕ್ಕೆ ಬಂದಾಗ ಭಗವಂತನು ತಾನು ವಾರಾಹಿ ನದಿಯಲ್ಲಿ ಇರುವಂತೆ ತನ್ನನ್ನು ಪ್ರತಿಷ್ಠಾಪಿಸುವಂತೆ ಸ್ವಪ್ನದಲ್ಲಿ ಅಪ್ಪಣೆ ಮಾಡಿದನು. ಮಾರನೆಯ ದಿನ ಜಗದ್ಗುರು ಶ್ರೀ ನರಸಿಂಹ ಭಾರತೀ ಮಹಾಸ್ವಾಮಿಗಳು ವಾರಾಹಿ ನದಿಯಲ್ಲಿ ಇದ್ದ ಲಕ್ಷ್ಮಿ ನರಸಿಂಹ ಮೂರ್ತಿ ಯನ್ನು ಹೊರತೆಗೆದು ಪ್ರತಿಷ್ಠಾದಿ ಕಾರ್ಯಗಳನ್ನು ಮಾಡಿದರು. ಆನಂತರ ಈ ಹಾಲಾಡಿ ಕ್ಷೇತ್ರದಲ್ಲಿಯೇ ತಮ್ಮ ಅನುಷ್ಠಾನವನ್ನು ಮುಂದುವರೆಸಿದರು. ಆದ್ದರಿಂದ ಶ್ರೀ ನೃಸಿಂಹ ಭಾರತೀ ಮಹಾಸ್ವಾಮಿಗಳಿಗೆ ಹಾಲಾಡಿ ಒಡೆಯರ್ ಎಂಬ ಹೆಸರು ಬಂದಿತ್ತು. ಜಗದ್ಗುರುಗಳು ತಮ್ಮ ಕಮಂಡಲು ತೀರ್ಥ ವನ್ನು ಇಲ್ಲಿ ಹಾಕಿದ್ದರಿಂದ ಈ ಭಾಗದಲ್ಲಿ ವಿಷ ಯುಕ್ತ ಸಸ್ಯಗಳು ಬೆಳೆಯುವುದಿಲ್ಲವೆಂಬ ಪ್ರತೀತಿ ಇದೆ. ಶ್ರೀ ನೃಸಿಂಹ ಭಾರತೀ ಮಹಾಸ್ವಾಮಿಗಳ ನಂತರ ಬಹುತೇಕ ಎಲ್ಲಾ ಜಗದ್ಗುರುಗಳು ತಮ್ಮ ದಿಗ್ವಿಜಯ ಯಾತ್ರೆಯ ಸಮಯದಲ್ಲಿ ಈ ಕ್ಷೇತ್ರಕ್ಕೆ ಬಂದು ಲಕ್ಷ್ಮಿ ನರಸಿಂಹನನ್ನು ಪೂಜಿಸಿದ್ದಾರೆ.

ಆದಿಶೇಷನ ಮೇಲೆ ಯೋಗಾರೂಢನಾಗಿ ಲಕ್ಷ್ಮೀ ಸಮೇತ ನರಸಿಂಹ ದೇವರು

ಈ ಕ್ಷೇತ್ರದಲ್ಲಿ ನರಸಿಂಹನು ಲಕ್ಷ್ಮೀ ನರಸಿಂಹ ಸ್ವರೂಪದಿಂದ ಭಕ್ತಾನುಗ್ರಹ ತತ್ಪರನಾಗಿದ್ದಾನೇ. ಚತುರ್ಭುಜನಾಗಿ ಶಂಖ,ಚಕ್ರ ಗಳನ್ನು ಮೇಲಿನ ಹಸ್ತದ್ವಯಗಳಲ್ಲಿ ಧರಿಸಿ, ಕೆಳಗಿನ ಹಸ್ತದಲ್ಲಿ ವರದಾಭಯ ಮುದ್ರೆಯನ್ನು ಧರಿಸಿದ್ದಾನೆ. ಆದಿಶೇಷನ ಮೇಲೆ ಯೋಗಾರೂಢನಾಗಿ ಲಕ್ಷ್ಮೀ ಸಮೇತನಾಗಿ ನರಹರಿಯ ದರ್ಶನ ನೀಡುತ್ತಿದ್ದಾನೆ.
ನಿತ್ಯವೂ ಇಲ್ಲಿ ರುದ್ರ ನಮಕ, ಚಮಕ, ಪುರುಷ ಸೂಕ್ತ ,ಶ್ರೀ ಸೂಕ್ತ ಹಾಗೂ ಮನ್ಯು ಸೂಕ್ತ ಗಳಿಂದ ಅಭಿಷೇಕವೇ ಮೊದಲಾದ ಪೂಜಾ ಕೈಂಕರ್ಯ ಗಳು ನಡೆಯುತ್ತಿದೆ. ವಿಶೇಷ ಸಂಧರ್ಭ ಗಳಲ್ಲಿ ಹಾಗೂ ಪರ್ವ ಕಾಲ ಗಳಲ್ಲಿ ಲಕ್ಷ್ಮಿ ನಾರಾಯಣ ಹೃದಯ ಪಾರಾಯಣ, ಪ­ವಮಾನ ಅಭಿಷೇಕ , ಮಂತ್ರರಾಜ ನೃಸಿಂಹಾನುಷ್ಟುಪ್ ಮಂತ್ರದ ಜಪ ಹೋಮಗಳು ನಡೆಯುತ್ತದೆ.

1990ರಲ್ಲಿ ಪರಮಹಂಸೇತ್ಯಾದಿ ಬಿರುದಾಂಕಿತರಾದ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಅನಂತ ಶ್ರೀ ವಿಭೂಷಿತ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಈ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಯಿತು.

ಅನಂತರ 04 ಡಿಸೆಂಬರ್ 2016ರಲ್ಲಿ ಜಗದ್ಗುರುಗಳ ಕರಕಮಲಗಳಿಂದ ಬ್ರಹ್ಮ ಕುಂಭಾಭಿಷೆಕವಾಯಿತು. ಈಗ ಸುಂದರ ಪ್ರಕೃತಿಯ ಮಧ್ಯೆ ವಾರಾಹಿ ನದಿಯ ದಡದ ಮೇಲೆ ಶಿಲಾಮಯ ದೇವಾಲಯವನ್ನು ನಾವು ನೋಡಬಹುದು.ಆಲಯವು ಚಂದ್ರಶಾಲೆ, ತೀರ್ಥ ಮಂಟಪ ಮತ್ತು ವಿಶಾಲ ಪ್ರಾಂಗಣ ಗಳಿಂದ ಶೋಭಿಸುತ್ತಿದೆ. ಪರಿವಾರ ದೇವತೆಯಾದ ಆಂಜನೇಯನ ಸಾನಿಧ್ಯವೂ ಮತ್ತೂ ಲಕ್ಷ್ಮಿ ನಾರಾಯಣರ ಸುಂದರ ವಿಗ್ರಹವೂ ಇಲ್ಲಿ ಪ್ರತಿಷ್ಠಾಪಿತವಾಗಿದೆ.

– ಸಂದೀಪ್ ದೀಕ್ಷಿತ್, ಸಾಗರ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!