Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶೃಂಗೇರಿ ಶಾರದಾಂಬೆಗೆ ಮಹಾಭಿಷೇಕ – ಪರಂಪರಾಗತ ವಾಡಿಕೆ ಮತ್ತೊಮ್ಮೆ ಮರುಕಳಿಸಿತು – ವಿಶ್ವಾಸ್ ಎಸ್ ಭಟ್

Published

on

ದಕ್ಷಿಣಾಮ್ನಾಯ ಶೃಂಗೇರಿ ಶ್ರೀಮಠದಲ್ಲಿ ಶಾರದಾಂಬ ದೇವಾಲಯದ ಕುಂಭಾಭಿಷೇಕದ ಮಹೋತ್ಸವದ ದಿನದ ಅಂಗವಾಗಿ ಇಂದು ಶ್ರೀ ಶಾರದಾಂಬೆಗೆ ವಿಶೇಷ ಮಹಾಭಿಷೇಕ ನೆರವೇರಿತು.

ವೈಶಾಖ ಮಾಸದ ಕಷ್ಣ ಪಕ್ಷದ ಪಾಡ್ಯದಂದು ಶಾರದಾಂಬಾ ದೇವಿಯ ಪುನರ್ ಪ್ರತಿಷ್ಠಾ ಕುಂಭಾಭಿಷೇಕವಾದ ದಿನದ ಪ್ರಯುಕ್ತ ಶ್ರೀ ಶಾರದೆಯ ಮೂಲ ವಿಗ್ರಹಕ್ಕೆ ಪಂಚಾಮೃತಭಿಷೇಕ ಸೇರಿದಂತೆ 108ಬಾರಿ ದುರ್ಗಾಸೂಕ್ತ , ಶ್ರೀಸೂಕ್ತ ,‌ರಾತ್ರಿಸೂಕ್ತ ಸೇರಿದಂತೆ ವೇದ ಸೂಕ್ತಗಳಿಂದ ಮಹಾಭಿಷೇಕ ನೆರವೇರಿತು. ಜಗದ್ಗುರು ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಮಹಾನಿರಾಜನವು ನೆರವೇರಿತು.

ತಾಯಿ ಶಾರದೆಯ ಮೂಲ ವಿಗ್ರಹಕ್ಕೆ ವರ್ಷದಲ್ಲಿ ಮೂರು ಬಾರಿ ಮಾತ್ರ ಮಹಾಭಿಷೇಕ ನಡೆಯುತ್ತದೆ. ವೈಶಾಖ ಬಹುಳ ಪಾಡ್ಯವಾದಯಿಂದು ,ಮಹಾಲಯ ಅಮಾವಾಸ್ಯೆ ಮತ್ತು ಭೂಮಿ ಹುಣ್ಣಿಮೆ ದಿನದಂದು ನೆರವೇರುವುದು.

ಇಂದಿನ ಮಹಾಭಿಷೇಕ ಮಹೋತ್ಸವದ ಹಿನ್ನೆಲೆ:

1916ರಲ್ಲಿ ಜಗದ್ಗುರು ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳು ವೈಶಾಖ ಬಹುಳ ಪಾಡ್ಯದಂದು ಶ್ರೀ ತುಂಗಾನದಿಯ ದಕ್ಷಿಣ ತಟದ ನರಸಿಂಹವನದಲ್ಲಿ ಬೆಳಗ್ಗೆ 8 ಕ್ಕೆ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತಿ ಸ್ವಾಮಿಗಳ ಅಧಿಷ್ಠಾನ ಕುಂಭಾಭಿಷೇಕ ಹಾಗೂ 10 ಗಂಟೆಗೆ ಶಾರದಾಂಬ ದೇವಸ್ಥಾನದ ಕುಂಭಾಭಿಷೇಕ ನೆರವೇರಿಸಿದ್ದರು. ಅಂದು ನಡೆದ ಮಹೋತ್ಸವದಲ್ಲಿ ಶುಭ ಕಾರ್ಯಕ್ಕೆ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕಷ್ಣರಾಜ ಒಡೆಯರ್ ಆಗಮಿಸಿದ್ದರು.

ಮಳೆಯ ನಡುವೆ ಮಠದ ಅಂಗಳ

ವೈಶಾಖ ಬಹುಳ ಪಾಡ್ಯದಂದು ಶಾರದಮ್ಮನವರ ಅಭಿಷೇಕ ಸಂಪನ್ನವಾದ ಬಳಿಕ ಈ ದಿನ ಮಳೆ ಬರುವುದು ಪರಂಪರಾಗತ ವಾಡಿಕೆ. ವಾಡಿಕೆಯಂತೆ ಶೃಂಗೇರಿಯಲ್ಲಿಂದು ಸಹ ಮಳೆ ಬಂದಿದೆ. ಭಕ್ತರಲ್ಲಿ ಹರ್ಷವುಂಟು ಮಾಡಿದೆ.

– ವಿಶ್ವಾಸ್. ಎಸ್. ಭಟ್, ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!