Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ನಮ್ಮ ದೇವಾಲಯಗಳು / Our Temple's

ಶ್ರೀ ತುಳಜಾ ಭವಾನಿ ದೇವಿ – ತುಳಜಾಪುರ – ಕ್ಷೇತ್ರದಶನ – ಎನ್.ಆರ್.ಸಂಗಾ,

Published

on

ಶ್ರೀ ತುಳಜಾ ಭವಾನಿ ದೇವಿ – ತುಳಜಾಪುರ

ಮಹಾರಾಷ್ಟ್ರದ ಉಸ್ಮಾನಬಾದಜಿಲ್ಲೆಯ ಒಂದು ಹಳ್ಳಿ ಚಿಂಚ್ ಪುರ್. ಹುಣೆಸೆ ಗಿಡ ಬಹಳ ಬೆಳೆಯುವದರಿಂದ ಈ ಊರಿಗೆ ಚಿಂಚ್ ಪುರ್ ಎಂದು ಹೆಸರು ಬಂದಿದೆ.
ಯಾವಾಗ ಶ್ರೀ ಶಕ್ತಿ ಮಾತೆ, ಭೂಲೋಕದಲ್ಲಿ
ತುಳಜಾ ಭವಾನಿ ” ಅವತಾರದಲ್ಲಿ ಬಂದು ಇಲ್ಲಿ
ನೆಲಸಿದಳೋ, ಆಗಿನಿಂದ ಚಿಂಚಪೂರ್ –
ತುಳಜಾಪುರ್ ವಾಯಿತು.” ತುಳಜಾಪುರ – ತುಳಜಾ
ಭವಾನಿ ” – ಪ್ರಸಿದ್ಧ ಯಾತ್ರಾ ಸ್ಥಳ. ಪುಣ್ಯ ಕ್ಷೇತ್ರ
ವಾಯಿತು.
ತುಳಜಾಪುರ – ಸೋಲಾಪುರದಿಂದ 45 ಕಿ.ಮಿ. ದೂರದಲ್ಲಿದೆ. ಹಾಗೆಯೇ ಸಹ್ಯಾದ್ರಿ ಶ್ರೇಣಿಯ ಯಮುನಾಚಲ ಬೆಟ್ಟ ಪ್ರದೇಶದಲ್ಲಿದೆ.
ಭಾರತದಲ್ಲಿರುವ 51 ಶಕ್ತಿ ಪೀಠಗಳಲ್ಲಿ ಇದು
ಒಂದು. ಶಕ್ತಿ ಪೀಠದಲ್ಲಿ 2ನೇಯದು ತುಳಜಾಪುರ
ತುಳಜಾಭವಾನಿ.
ವರಾಹೀ, ಬ್ರಾಹ್ಮೀ, ವೈಷ್ಣವೀ, ಕೌಮರೀ, ಇಂದ್ರಾಣೀ
ಶಾಂಭವೀ, ಭವಾನೀ ( ಅಂಬಾ ). ಹೀಗೆ ಸಪ್ತ ಕನ್ಯೆಯ
ರೂಪದಲ್ಲಿ ಶಕ್ತಿಮಾತೆ ಪಾರ್ವತಿ ಅವತರಿಸಿ
ರಾಕ್ಷಸರನ್ನು ಕಾಲ – ಕಾಲಕ್ಕೆ ಸಂಹರಿಸುತ್ತಾ
ಬಂದಿದ್ದಾಳೆ.
ಮಾತಂಗ ರಾಕ್ಷಸನನ್ನು ಸಂಹರಿಸಿದ್ದರಿಂದ
ಮಾತಂಗೀ ‘ ಎಂದು , ಮಹಿಷಾಸುರನನ್ನು ಸಂಹ
ರಿಸಿದ್ದರಿಂದ ‘ ಮಹಿಷ ಮರ್ಧಿನೀ” ಎಂದು
ಕರೆಯುವದುಂಟು.
ಸರ್ವಾಲಂಕಾರಭೂಷಿತಳು, ದಿವ್ಯಾಸ್ತ್ರಗಳನ್ನು ಹೊಂದಿ
ದವಳೂ, ಸಕಲ ಮಂಗಳ ದ್ರವ್ಯಗಳಿಂದ
ಪೂಜಿಸಲ್ಪಡುವ ಮಾತೆಯ ಎಡ ಹಸ್ತದಲ್ಲಿ
ಮಹಿಷನ ಶಿರ ಹಿಡಿದ ದೃಶ್ಯ ಬಹಳ ಆಕರ್ಷಣೀಯ
ವಾಗಿದೆ. ಮುಂದೆ ತನ್ನ ವಾಹನವಾದ ಸಿಂಹ
ವಿರಾಜಮಾನವಾಗಿದೆ.

ಶಿವಾಜಿ ಮಹಾರಾಜರು ಹಾಗು ಅವರ ತಾಯಿ
ಜೀಜಾಬಾಯಿಯ ಆರಾಧ್ಯ ದೇವತೆ ತುಳಜಾ
ಭವಾನಿ.‌ ಇಲ್ಲಿ ಪರಮ ಪಾವನವಾದ ಕಲ್ಯಾಣಿ ( ತೀರ್ಥ )

ಗಳಿವೆ. ಈ ಕಲ್ಯಾಣದಲ್ಲಿ ಮಿಂದರೆ, ಭಕ್ತರ ಸರ್ವ
ಸಕಲ ಪಾಪ ಕರ್ಮಗಳು ಮುಕ್ತಿಯಾಗುತ್ತವೆ ಎಂದು
ಭಕ್ತರ ನಂಬಿಕೆಯಾಗಿದೆ.


ದೇವಾಲಯದ ಉತ್ತರ ದಿಕ್ಕಿಗೆ, ಊರ ಹೊರ
ವಲಯದಲ್ಲಿ ತುಳಜಾಭವಾನಿಯ ಸಣ್ಣ ಮೂರ್ತಿ
ಇದೆ. ಇದಕ್ಕೆ ‘ ಧಕ್ತೆ ತುಳಜಾಪುರ” ಎಂದು
ಕರೆಯುತ್ತಾರೆ.

ಮುಖ್ಯ ದೇವಾಲಯಕ್ಕೆ ಬರುವ ಮುನ್ನ ,
ಧಕ್ತೆ ತುಳಜಾಪುರ್- ತುಳಜಾಭವಾನಿಯ ದರ್ಶನ
ಪದೆಯುವದು ಹೆಚ್ಚು ಶ್ರೇಯಸ್ಕರ.

ಯಾವುದೇ ಶುಭ ಕಾರ್ಯಗಳಾಗಲಿ ಶ್ರೀ ಮಾತೆಯ ಸನ್ನಿಧಿಗೆ ಬಂದು ಆಶೀರ್ವಾದ ಪಡೆಯುವದು ಇಲ್ಲಿ ಸಾಮಾನ್ಯವಾಗಿದೆ.

– ಎನ್.ಆರ್.ಸಂಗಾ, ಇಳಕಲ್

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!