Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಶ್ರೀಧರ ಸ್ವಾಮಿಗಳು ಶಿವಾನಂದರ ಗರಡಿಯಲ್ಲಿ – ಜಿ.ಟಿ.ಶ್ರೀಧರ ಶರ್ಮ

Published

on


ಶ್ರೀಧರಾ, ಹಾವು ಹರಿದಾಡುತ್ತಿದೆ.
ಭಗವಂತನಲ್ಲಿ ತಲ್ಲೀನತೆ, ಅಥವಾ ಧ್ಯಾನಮಗ್ನತೆ ಅಂದರೆ ಶ್ರೀಧರರಿಗೆ ಉಸಿರಾಟದಷ್ಟೇ ತೀರ ಸಹಜವಾಗಿತ್ತು. ಅವರು ಅಂಥ ಆನಂದದಲ್ಲಿಯೇ ಇರುತ್ತಿದ್ದರು. ಈ ಕುರಿತು ಒಂದು ಸ್ಮರಣೆ.
ಶ್ರೀಧರರು ತಮ್ಮ ಗುರು ಶ್ರೀ ಶಿವಾನಂದರೊಂದಿಗೆ ಶೀಗೇಹಳ್ಳಿಯಲ್ಲಿದ್ದ ಸಂದರ್ಭ. ಅಲ್ಲಿ ಸದಾ ಶ್ರೀಧರರು ಗುರುಸೇವೆ ಮತ್ತು ಧ್ಯಾನಮಾಡುತ್ತಿದ್ದರು. ರಾತ್ರಿವೇಳೆ ಶಿವಾನಂದರು ಗುಹಾ ಪ್ರವೇಶ ಮಾಡಿದನಂತರವೂ ಶ್ರೀಧರರು ನಿದ್ದೆ ಮಾಡದೆ ಧ್ಯಾನದಲ್ಲಿಯೇ ತಲ್ಲೀನರಾಗಿರುತ್ತಿದ್ದರು. ಒಂದು ದಿನ ಶ್ರೀಧರರು ಹೀಗೆ ಧ್ಯಾನದಲ್ಲಿದ್ದರು. ಹಾವೊಂದು ಅವರಿದ್ದಕಡೆಗೇ ಹರಿದು ಬಂದಿತು. ಮಠದಲ್ಲಿದ್ದವರು ಇದನ್ನು ಗಮನಿಸಿ ಕಂಗಾಲಾದರು. ಆದರೆ ಶ್ರೀಧರರು ಮಾತ್ರ ಇದರ ಪರಿವೇ ಇಲ್ಲದಂತೆ ತಮ್ಮನ್ನೇ ತಾವು ಮರೆತು ಆನಂದದಲ್ಲಿ ಮಗ್ನರಾಗಿದ್ದರು. ಆ ಹಾವು ಮಾತ್ರ ತನ್ನ ಸ್ವಭಾವದಂತೆ ಇವರ ಹತ್ತಿರಕ್ಕೆ ಬಂದಿತು. ಇವರ ಶರೀರದ ಮೇಲೆಲ್ಲ ಹರಿದಾಡಿ ನಿಧಾನವಾಗಿ ಬೇರೆ ಕಡೆಗೆ ಹೋಯಿತು. ಅಲ್ಲಿದ್ದ ಸೇವಕರೆಲ್ಲಾ ಭಯಭೀತರಾದರು. ಕೆಲವರು ಧೈರ್ಯದಿಂದ ಶ್ರೀಧರರ ಹತ್ತಿರ ಬಂದು ” ಶ್ರೀಧರಾ, ಹಾವು ಹರಿದಾಡುತ್ತಿದೆ” ಎಂದು ಕೂಗಿದರು. ಶ್ರೀಧರರಿಗೆ ಇದರ ಪರಿವೆ ಇಲ್ಲದೆ ಧ್ಯಾನದಲ್ಲಿಯೆ ಮುಳುಗಿದ್ದರು. ಅನಂತರ ಸ್ವಲ್ಪ ಹೊತ್ತು ಕಳೆದಮೇಲೆ ಧ್ಯಾನಾವಸ್ಥೆಯಿಂದ ಈಚೆಬಂದು ಎಲ್ಲರೊಡನೆ ಬೆರೆತರು. ತಮಗೇನೂ ಆಗಿರದಂತೆ ಎಂದಿನ ಸಹಜಸ್ಥಿತಿಯಲ್ಲಿಯೆ ಇದ್ದರು. ಈ ಎಲ್ಲ ಸಂಗತಿಗಳೂ ಶ್ರೀ ಶಿವಾನಂದರಿಗೆ ಗೊತ್ತಿದ್ದವು. ಆದರೆ ಶ್ರೀಧರರಿಗೆ ಏನೂ ಅಪಾಯವಾಗುವುದಿಲ್ಲವೆಂದು ಸುಮ್ಮನಿದ್ದರು. ಶ್ರೀಧರರು ಕೂಡ ತಮಗೆ ಎಂಥ ಕಷ್ಟ, ಅಪಾಯಗಳು ಎದುರಾದರೂ ಗುರುಗಳಲ್ಲಿ ಪ್ರಸ್ತಾಪಿಸುತ್ತಿರಲಿಲ್ಲ.

ಅವೆಲ್ಲವೂ ಆ ಭಗವಂತನ ಲೀಲೆ ಎಂದೇ ಭಾವಿಸಿದ್ದರು. ಗುರುವಿಗೆ ತಮ್ಮ ಶಿಷ್ಯರ ಸಾಮರ್ಥ್ಯದ ಅರಿವಿತ್ತು, ಶಿಷ್ಯರಿಗೆ ತಮ್ಮ ಗುರುಗಳ ಸಾಮರ್ಥ್ಯದ ಅರಿವಿತ್ತು. ಇಂಥ ಗುರುದ್ವಯರಿಗೆ ಸಾವಿರ, ಸಾವಿರ ನಮನಗಳು.

– ಜಿ.ಟಿ. ಶ್ರೀಧರ ಶರ್ಮ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!