Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ದಿನಕ್ಕೊಂದು ಸ್ತೋತ್ರ

ಪದ್ಮ ಪುರಾಣೋಕ್ತಂ -ಸರಸ್ವತೀ ಸ್ತೋತ್ರಮ್ – ಎಲ್.ಬಿ. ಪೆರ್ನಾಜೆ

Published

on

ಪದ್ಮ ಪುರಾಣೋಕ್ತಂ -ಸರಸ್ವತೀ ಸ್ತೋತ್ರಂ

ದೇವಗುರುವಾಗಿರುವ ಬೃಹಸ್ಪತಿಯು ವಾಗ್ದೇವಿ ಶಾರದೆಯನ್ನು ತನ್ನ ವಾಕ್ಸಿದ್ಧಿಗೋಸ್ಕರವಾಗಿ ಸ್ತುತಿಸುವ ಮೂಲಕ ಒಲಿಸಿಕೊಂಡನೆಂಬ ಕಥಾನಕವು ಪದ್ಮಪುರಾಣದಲ್ಲಿದೆ. ಇದೇ ಸ್ತೋತ್ರವು ಕೆಲವು ಪಾಠಾಂತರಗಳಲ್ಲಿ ಶಿವ-ಪಾರ್ವತಿ ಸಂವಾದ ಕಥಾನಕವುಳ್ಳ ರುದ್ರಯಾಮಳದಲ್ಲಿಯೂ ಇದೆ. ಇಲ್ಲಿ ಕಾಣಿಸಲಾಗಿರುವುದು ಪದ್ಮ ಪುರಾಣದಲ್ಲಿನ ಪಠ್ಯ

ಶ್ರೀ: ||ಬೃಹಸ್ಪತಿರುವಾಚ—-
ಸರಸ್ವತೀಂ ನಮಸ್ಯಾಮಿ ಚೇತನಾನಾಂ ಹೃದಿ ಸ್ಥಿತಾಂ |
ಕಂಠಸ್ಥಾಂ ಪದ್ಮಯೋನೇಸ್ತು ಹಿಮಾಕರ ಪ್ರಿಯಾಂ ಸದಾ ||೧||

ಭಾವಾರ್ಥ:- ಬೃಹಸ್ಪತಿಯು ನುಡಿಯುತ್ತಾನೆ–
ಸಮಸ್ತ ಜೀವಿಗಳಲ್ಲಿಯೂ ನೆಲೆಸಿರುವ ವಾಗ್ದೇವಿ ಸರಸ್ವತಿಗೆ ನಾನು ನಮಸ್ಕರಿಸುವೆ. ಬ್ರಹ್ಮನ ಕಂಠ ಪ್ರದೇಶದಲ್ಲಿ ತಂಪಾದಕಿರಣಗಳುಳ್ಳುವಳಾದ ಆಕೆಯು ಪ್ರೀತಿಯುಳ್ಳವಳಾಗಿಸದಾ ನೆಲೆಸಿರುತ್ತಾಳೆ.

ಮತಿದಾಂ ವರದಾಂ ಶುದ್ಧಾಂ ವೀಣಾಹಸ್ತ ವರಪ್ರದಾಂ |
ಐಂ ಐಂ ಮಂತ್ರ ಪ್ರಿಯಾಂ ಹ್ರೀಂ ಹ್ರಾಂ ಕುಮತಿದ್ವಂಸಕಾರಿಣೀಮ್ ||೨||

ಭಾವಾರ್ಥ:- ಸಮಸ್ತರಿಗೂ ಸನ್ಮತಿಯನ್ನು ಈಯುವ,ವರದಾಯಿನಿಯಾಗಿ,ಪರಮಪವಿತ್ರಳೂ ಆಗಿ,ವೀಣೆಯನ್ನು ಕೈಯಲ್ಲಿ ಧರಿಸಿ, ಐಂ, ಬೀಜಾಕ್ಷರದ ಮೂಲಕ ಸಿದ್ಧಿಯನ್ನು ಕರುಣಿಸುತ್ತಾ ಹ್ರೀಂ ಹಾಗೂ ಹ್ರಾಂ ಬೀಜಾಕ್ಷರ ಮಂತ್ರಗಳಿಂದ ಮನುಜರ ಕುಬುದ್ಧಿಯನ್ನು ನಾಶಗೊಳಿಸುತ್ತಾ ಇರುವ ಸರಸ್ವತೀ ದೇವಿಗೆ ಪ್ರಣಾಮಗಳು.

ಸುಪ್ರಕಾಶಾಂ ನಿರಾಲಂಬಾಂ ಅಜ್ಞಾನ ತಿಮಿರಾಪಹಾಂ |
ಶುಕ್ಲಾಂ ಮೋಕ್ಷಪ್ರದಾಂ ರಮ್ಯಾಂ ಶುಭಾಂಗಾಂ ಶೋಭನಪ್ರದಾಮ್ ||೩||

ಭಾವಾರ್ಥ:- ಅಜ್ಞಾನವನ್ನು ದೂರೀಕರಿಸಿ, ಜ್ಞಾನದ ಬೆಳಕನ್ನು ಒದಗಿಸುವ ಬಿಳಿಯವರ್ಣದಿಂದ ಕೂಡಿ ಮೋಕ್ಷದಾಯಕಳಾಗಿಯೂ, ಮನೋಹರವಾಗಿರುವ ಸುಂದರವಾದ ಶರೀರವನ್ನು ಹೊಂದಿದಶುಭಪ್ರದಾಯಳಾಗಿರುವ ಸರಸ್ವತಿಗೆ ನಾನು ನಮಸ್ಕರಿಸುವೆ.

ಪದ್ಮೋಪವಿಷ್ಠಾಂ ಕುಂಡಲಿನೀಂ ಶುಕ್ಲವರ್ಣಾಂ ಮನೋರಮಾಂ ಆದಿತ್ಯಮಂಡಲೇ ಲೀನಾಂ ಪ್ರಣಮಾಮಿ ಹರಿ ಪ್ರಿಯಾಮ್ ||೪||

ಭಾವಾರ್ಥ:- ಪದ್ಮಾಸನೆಯಾಗಿ, ಕುಂಡಲಿನೀ ಶಕ್ತಿಯನ್ನು ಹೊಂದಿ, ಬಿಳಿಯ ವರ್ಣವನಾಂತು, ಮನಸ್ಸಿಗೆ ಆನಂದವನ್ನು ಒದಗಿಸುತ್ತಾ, ಸೂರ್ಯಮಂಡಲವಾಸಿಯಾಗಿ, ಮಹಾವಿಷ್ಣುವಿಗೆ ಪ್ರಿಯಳಾದವಳಾಗಿರುವ ಸರಸ್ವತೀದೇವಿಗೆ ನನ್ನ ಪ್ರಣಾಮಗಳು.

ಇತಿ ಮಾಸಂ ಸ್ತುತಾಸ್ನೇನ ವಾಗೀಶೇನ ಮಹಾತ್ಮನಾ |
ಆತ್ಮಾನಂ ದರ್ಶಯಾ ಮಾಸ ಶರದಿಂದು ಸಮ ಪ್ರಭಾಮ್ ||೫||

ಭಾವಾರ್ಥ:- ಈ ರೀತಿಯಾಗಿ ಶ್ರೀಸರಸ್ವತೀದೇವಿಯನ್ನು ಒಂದು ತಿಂಗಳ ಕಾಲ ಪ್ರಾರ್ಥನೆಯನ್ನು ಮಾಡಿದ ನಂತರ ಬೃಹಸ್ಪತಿಗೆ ವಾಗ್ದೇವಿಯು ಸಂತಸಗೊಂಡು ಒಲಿದು ಪ್ರತ್ಯಕ್ಷಳಾಗಿ ತನ್ನ ಅತ್ಯದ್ಭುತ ರೂಪವನ್ನು ಕಾಣಿಸಿದಳು.

ಸರಸ್ವತ್ಯುವಾಚ–
ವರಂ ವೃಣೀಷ್ಟ ಭದ್ರಂ ತೇ ಯಸ್ತೇ ಮನಸಿ ವರ್ತತೇ ||

ಬೃಹಸ್ಪತಿರುವಾಚ—-
ವರದಾ ಯದಿ ಮೇ ದೇವಿ ಸಮ್ಯಕ್ ಜ್ಞಾನಂ ಪ್ರಯಚ್ಛಮೇ ||೬||

ಸರಸ್ವತಿಯು ಹೇಳುವಳು “ಮಗೂ; ನಿನಗೇನು ಬೇಕಾಗಿದೆ; ಬೇಡಿಕೊ”
ಬೃಹಸ್ಪತಿ ಅನ್ನುತ್ತಾನೆ “ನನಗೆ ಪರಿಪೂರ್ಣವಾದಂತಹಾ ಜ್ಞಾನವನ್ನು ಅನುಗ್ರಹಿಸುವವಳಾಗು”

ಸರಸ್ವತ್ಯುವಾಚ—
ಇದಂ ತೇ ನಿರ್ಮಲಂ ಜ್ಞಾನಂ ಅಜ್ಞಾನ ತಿಮಿರಾಪಹಮ್ |
ಸ್ತೋತ್ರೇಣಾನೇನ ಮಾಂ ಸ್ರೌತಿ ಸಮ್ಯಗ್ವೇದವಿದೋ ನರ:
ಲಭತೇ ಪರಮಂ ಜ್ಞಾನಂ ಮಮ ತುಲ್ಯ ಪರಾಕ್ರಮಂ ||೭||

ಸರಸ್ವತಿಯು ಅನ್ನುವಳು—
ಇದೋ ನೀನು ಬೇಡಿಕೊಂಡಂತೆ ನಿನಗೆ ಪರಿಪೂರ್ಣವಾಗಿರುವ ಜ್ಞಾನವನ್ನು ಅನುಗ್ರಹಿಸುತ್ತಿರುವೆ. ಈ ಜ್ಞಾನವನ್ನು ಪಡೆದವನಾದ ನೀನು ನನಗೆ ಸರಿಸಾಟಿಯಾದ ಜ್ಞಾನಿಯಾಗುವೆ.

ತ್ರಿ ಸಂಧ್ಯಂ ಯ: ಪಠೇನ್ನಿತ್ಯಂ ಯಸ್ತ್ವಿದಂ ಜಪತೇ ಸದಾ |
ತೇಷಾಂ ಕಂಠೇ ಸದಾ ವಾಸಂ ಕರಿಷ್ಯಾಮಿ ನ ಸಂಶಯ: ||೮||

ಭಾವಾರ್ಥ:- ಯಾರು ನೀನು ಮಾಡುವ ಸ್ತೋತ್ರವನ್ನು ದಿನದ ಮೂರು ಸಂಧ್ಯಾಕಾಲಗಳಲ್ಲಿಯೂ ಶ್ರದ್ಧಾಭಕ್ತಿಯಿಂದ ಪಠಿಸುತ್ತಾರೋ,ಜಪಿಸುತ್ತಾರೋ ಅಂತಹವರ ಕಂಠದಲ್ಲಿ ನಾನು ಸದಾ ನೆಲೆಸಿರುತ್ತೇನೆ. ಇದು ನಿಸ್ಸಂಶಯ ಎಂಬುದಾಗಿ ಬೃಹಸ್ಪತಿಗೆ ವಚನವನ್ನಿತ್ತಳು.

– ಎಲ್. ಬಿ. ಪೆರ್ನಾಜೆ, ಪುತ್ತೂರು

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!