Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ನಾಗದೇವರ ಮೊರೆಹೊದ ಕ್ರಿಶ್ಚಯನ್ ಕುಟುಂಬಕ್ಕೆ ಅಚ್ಚರಿ ಮೂಡಿಸಿತು ನಾಗನ ಪವಾಡ

Published

on

ಮಂಗಳೂರು: ನೀರಿಲ್ಲದೆ ಒಣಗಿ ಹೋಗಿದ್ದ ಕ್ರಿಶ್ಚಿಯನ್ ರೈತರೋರ್ವರ ಕೃಷಿ ತೋಟಕ್ಕೆ ನಾಗದೇವ ಕೃಪೆ ತೋರಿ ಅಚ್ಚರಿ ಮೂಡಿಸಿದ್ದಾನೆ.

ಮಂಗಳೂರು ತಾಲೂಕಿನ ಕಿನ್ನಿಗೋಳಿ ಬಳಿಯ ನಿಡ್ಡೋಡಿಯ ಗುಂಡೆಲ್ ಎಂಬಲ್ಲಿ ವಾಸ ಇರುವ ವಿಕ್ಟರ್ ಡಿಸಿಲ್ವರ ಕೃಷಿ ತೋಟಕ್ಕೆ ಈ ಬಾರಿ ಮಳೆ ಇಲ್ಲದೆ ನೀರು ಇಲ್ಲದಾಗಿತ್ತು. ಏಳು ಎಕರೆ ವ್ಯಾಪ್ತಿಯ ಅಡಿಕೆ ತೋಟಗಳ ಮಧ್ಯೆ ನಾಲ್ಕು ಕಡೆ ಕೊಳವೆ ಬಾವಿ ತೋಡಿಸಿದರೂ ನೀರು ಸಿಕ್ಕಿರಲಿಲ್ಲ. ಐದಾರು ಲಕ್ಷ ಖರ್ಚು ಮಾಡಿ ನೊಂದಿದ್ದ ವಿಕ್ಟರ್ ಡಿಸಿಲ್ವ ಕೊನೆಗೆ ಜ್ಯೋತಿಷಿಯ ಮೊರೆಹೋಗಿದ್ದರು.

ಕೊನೆಗೆ, ಬೋರ್‌ವೆಲ್ ಮಾಲೀಕ ಪ್ರಕಾಶ್ ಸಲಹೆಯಂತೆ, ಬೆಳ್ತಂಗಡಿಯ ಉಪ್ಪಿನಂಗಡಿ ಜ್ಯೋತಿಷಿ ಜಗದೀಶ್ ಶಾಂತಿ ಜಾಗದಲ್ಲಿ ಪ್ರಶ್ನೆ ಇಟ್ಟು, ನಾಗದೋಷ ಮತ್ತು ಜಾಗಕ್ಕೆ ಸಂಬಂಧಿಸಿದ ಜುಮಾದಿ ದೈವದ ದೋಷದ ಬಗ್ಗೆ ಹೇಳಿದರು. ಬಳಿಕ ನಾಗನಿಗೆ ಅದೇ ಜಾಗದಲ್ಲಿ ಆಶ್ಲೇಷ ಬಲಿ ಸೇವೆ ಅರ್ಪಿಸಿದ ಕ್ರಿಶ್ಚಿಯನ್ ಕುಟುಂಬ, ದೈವಗಳಿಗೆ ಸೀಯಾಳ ಅರ್ಪಿಸಿ ಬೇಡಿಕೊಂಡಿತ್ತು. ಪರಿಹಾರ ರೂಪವಾಗಿ ನಾಗ ಪೂಜೆ, ಜುಮಾದಿ ದೈವಕ್ಕೆ ಸೀಯಾಳ, ಕೊಡಮಣಿತ್ತಾಯ ದೈವಕ್ಕೆ ಹಾಲು ನೀಡಲು ಬೆಳ್ಳಿಯ ಲೋಟ ಕೊಡಬೇಕು. ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಿ ಪ್ರಾರ್ಥನೆ ಮಾಡಬೇಕು. ಕಾರ್ಕಳ, ಮಂಗಳೂರು ಮತ್ತು ತಮ್ಮ ಗ್ರಾಮದ ಚರ್ಚ್‌ಗಳಲ್ಲಿಯೂ ಪೂಜೆ ಸಲ್ಲಿಸಬೇಕು. ಬೇಕಾದಷ್ಟು ನೀರು ಸಿಗುತ್ತದೆ ಎಂದರು. ಆ ನಂತರ ಜ್ಯೋತಿಷಿ ಸೂಚಿಸಿದ ಜಾಗದಲ್ಲಿ ಮತ್ತೆ ಬೋರ್‍ವೆಲ್ ಕೊರೆದಾಗ, ಕೇವಲ 90 ಅಡಿ ಆಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಿಕ್ಕಿದೆ.

 

ಪ್ರತ್ಯಕ್ಷ ದರ್ಶನ ನೀಡಿ ಅನುಗ್ರಹಿಸಿದ ನಾಗ ದೇವರು

ನೀರು ಲಭಿಸಿದ ಮರುದಿನ ಕೊಳವೆ ಬಾವಿ ಸಮೀಪ ಕಲ್ಲಿನ ಮೇಲೆ ಸರ್ಪ ಮಲಗಿತ್ತು. ಭಯಗೊಂಡ ವಿಕ್ಟರ್, ಶಾಂತಿಯವರಿಗೆ ಕರೆ ಮಾಡಿದರು. ‘ನಾಗ ದೇವರೇ ಬಂದಿದ್ದಾರೆ, ತಾವು ಪ್ರಾರ್ಥಿಸಿಕೊಂಡಂತೆ ಪೂಜೆ ನೆರವೇರಿಸಿದರೆ ಸರ್ಪ ಹೋಗಲಿದೆ ಎಂದರು. ಮೇ ಮೊದಲ ವಾರದಲ್ಲಿ ನಾಗನಿಗೆ ಅಶ್ಲೇಷ ಬಲಿ ಮತ್ತಿತರ ಪೂಜೆಯನ್ನು ಜಗದೀಶ್ ಶಾಂತಿ ನೇತೃತ್ವದಲ್ಲಿ ನೆರವೇರಿಸಲಾಯಿತು. ಪೂಜೆ ನಂತರ ಜಗದೀಶ್ ಶಾಂತಿಯವರ ಹೇಳಿಕೆಯಂತೆ ಹಿಂದೆ ತೋಡಿದ್ದ ಎಲ್ಲ ಕೊಳವೆ ಬಾವಿಗಳಲ್ಲಿಯೂ ನೀರು ಲಭಿಸಿತು.

ನಾಲ್ಕು ಕಡೆ ಬೋರ್ ಹಾಕಿದರೂ ನೀರು ಸಿಗದೇ ಇದ್ದ ಜಾಗದಲ್ಲಿ ಈಗ ಯಥೇಚ್ಛ ನೀರು ಲಭ್ಯವಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಬಳಿಕ ಇತರೆ ಕೊಳವೆ ಬಾವಿಗಳಲ್ಲೂ ಪರಿಶೀಲಿಸಿದಾಗ ಕೇವಲ 15 ಅಡಿ ಆಳದಲ್ಲಿಯೇ ಸಾಕಷ್ಟು ನೀರು ಕಂಡುಬಂದಿದೆ. ಊರಿನ ಸಮಸ್ತರಿಗೆ ಇದು ಅಚ್ಚರಿಗೆ ಕಾರಣವಾಗಿದ್ದು, ವಿಜ್ಞಾನಕ್ಕೂ ಸವಾಲ್ ಆಗಿ ಪರಿಣಮಿಸಿದೆ. ಈಗ ಜನರು ಅಚ್ಚರಿಯಿಂದ ಅಲ್ಲಿಗೆ ತೆರಳುತ್ತಿದ್ದು ನಾಗನೇ ಕೃಪೆ ತೋರಿದ್ದಾನೆ ಎನ್ನುವ ಮಾತನ್ನು ಜನ ಆಡಿಕೊಳ್ಳುತ್ತಿದ್ದಾರೆ.

ಪೂಜೆಯಿಂದ ನೀರಿಲ್ಲದ ಕೊಳವೆ ಬಾವಿಯಲ್ಲಿ ಮೇಲ್ಮಟ್ಟದಲ್ಲೇ ನೀರು ಕಂಡುಬಂದ್ದು ಪವಾಡ. ಅಗತ್ಯವಿದ್ದರೆ ಪಂಚಾಯತ್‌ಗೆ ನೀರು ಕೊಡಲು ವಿಕ್ಟರ್ ಮುಂದಾಗಿದ್ದಾರೆ. ಇದರೊಂದಿಗೆ ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

– ಅಲೋಕ್, ಕಿನ್ನಿಗೋಳಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!