Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

ಕೆನಡಾ ಶಾಲೆಗಳಿಗೂ ತಿಳಿಯಿತು ಸಂಸ್ಕೃತದ ಮಹತ್ವ – ಸಂಸ್ಕೃತ ಕಲಿಕೆಗೆ ಆಸಕ್ತಿ ತೋರುತ್ತಿರುವ ಕೆನಡಾ ಶಾಲೆಗಳು

Published

on

ಟೊರೆಂಟೋ: ಅತಿ ಪ್ರಾಚೀನವಾದ ಸಂಸ್ಕೃತ ಭಾಷೆ ಈಗ ಕೆನಡಾದ ಟೊರೆಂಟೋ ಡಿಸ್ಟ್ರಿಕ್ಟ್ ಸ್ಕೂಲ್ ಬೋರ್ಡ್ (TDSB) ಸಿಲೆಬಸ್­ನಲ್ಲಿ ಸ್ಥಾನ ಪಡೆದಿದೆ. ಕಿಂಡರ್­ಗಾರ್ಟನ್­ನಿಂದ ಹಿಡಿದು ಗ್ರೇಡ್ 8ರ ವರೆಗಿನ ಮಕ್ಕಳು ಅಲ್ಲಿ ಸಂಸ್ಕೃತವನ್ನು ಕಲಿಯುತ್ತಿದ್ದಾರೆ. ಎನ್­ಜಿಓ ಸಂಸ್ಕೃತ ಭಾರತಿಯ ನಿಸ್ವಾರ್ಥ ಸೇವೆಯ ಶ್ರಮದ ಫಲವಾಗಿ ಈ ಯಶಸ್ಸು ದೊರೆತಿದೆ.

ಸ್ಕಾರ್ಬರೊ ನಗರದ ಕಾರ್ನೆಲ್ ಪಬ್ಲಿಕ್ ಸ್ಕೂಲಿನಲ್ಲಿ ಪ್ರತಿ ಶನಿವಾರ ಬೆಳಿಗ್ಗೆ ಸಂಸ್ಕೃತವನ್ನು ಅನೌಪಚಾರಿಕವಾಗಿ ಕಳೆದ ವರ್ಷದಿಂದ ಕಲಿಸಲಾಗುತ್ತಿತ್ತು. ಸುಮಾರು 24 ಮಕ್ಕಳು ಅಲ್ಲಿ ಕಲಿಯುತ್ತಿದ್ದರು. ಟೊರೆಂಟೋ ಡಿಸ್ಟ್ರಿಕ್ಟ್ ಸ್ಕೂಲ್ ಬೋರ್ಡ್ ಕ್ರಮವನ್ನು ಬೆಂಬಲಿಸಿ ಔಪಚಾರಿಕ ಶಿಕ್ಷಣದಲ್ಲಿ ಅಳವಡಿಸಿ ಮುನ್ನುಡಿ ಬರೆದಾಗ, ಉಳಿದ ಹಲವು ಶಾಲೆಗಳೂ ಸಂಸ್ಕೃತವನ್ನು ಕಲಿಸಲು ಆರಂಭಿಸಿವೆ.

“ಸಂಸ್ಕೃತ ಭಾರತಿ” ಕಳೆದ 2014 ರಿಂದ ಸಂಸ್ಕೃತವನ್ನು ಕೆನಡಾ ದೇಶದಲ್ಲಿ ಪ್ರಚಾರಪಡಿಸುತ್ತಾ ಸಾಗುತ್ತಿದೆ. ಸಂಸ್ಕೃತ ಭಾರತೀಯ ಕೆನಾಡ ಸಂಚಾಲಕರಾದ ಹರ್ಷ ಥಕ್ಕರ್ – ಇದೊಂದು ಅದ್ಭುತ ರಿತಿಯಲ್ಲಿ ಸಂಸ್ಕೃತದ ಪ್ರಚಾರ ಹಾಗು ನಮ್ಮ ನಿರೀಕ್ಷೆಗಳನ್ನು ಮೀರಿ ಕಲಿಕಾ ಆಸಕ್ತಿ ಕೆನಡದಲ್ಲಿ ಕಂಡುಬಂದಿದೆ. ಕೆಲವು ಸ್ವಯಂಸೇವಕರ ಸಹಕಾರದಿಂದ ಆರಂಭಿತ ಅಭಿಯಾನ ಇಂದು ಈ ಹಂತದವರೆಗೆ ಬಂದ ಪ್ರತಿಕ್ರಿಯೆಗಳು ಸಂತೋಷವನ್ನು ನೀಡಿದೆ ಎಂದರು.

– ಅಂಶುಮಾನ್ ಭಟ್

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!