Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

ಪಲಿಮಾರು ಶ್ರೀಗಳ ಪ್ರಾರ್ಥಿಸಿದಾಗ ಅಚ್ಚರಿ ಮೂಡಿಸಿತು ದೇವರ ಪವಾಡ

Published

on

ಉಡುಪಿಯ ಮಧ್ವಸರೋವರದ ಬಳಿ ಇರುವ ಭಾಗೀರಥಿ ಗುಡಿಯಲ್ಲಿನ ಗಂಗಾ ಭಾಗೀರಥಿ ಅಮ್ಮನವರು

ಇಂದು ದೇಶಾದ್ಯಂತ ಭಾಗೀರಥಿ ಜಯಂತಿಯನ್ನು ಆಚರಿಸಲಾಗುತ್ತದೆ. ಉಡುಪಿ ಮಠದಲ್ಲಿ ಗಂಗಾರತಿ ಆಗುತ್ತಿದ್ದಂತೆ ಪವಾಡ ಎಂಬಂತೆ ಮರುಕ್ಷಣದಲ್ಲಿ ಧರೆಗಿಳಿದ  ಮಳೆ  ಎಲ್ಲರು ಅಚ್ಚರಿಗೊಂಡಿದ್ದಾರೆ.

ಗಂಗೆ ಶಿವನ ಜಟೆಯಿಂದ ಭಗಿರಥನ ಪ್ರಾರ್ಥನೆ ಇಳಿದು ಬಂದ ದಿನವನ್ನು ಭಾಗೀರಥಿ ಜಯಂತಿ ಎಂದು ಕರೆಯಲಾಗುತ್ತದೆ. ಉಡುಪಿ ಕೃಷ್ಣಮಠದ ಮಧ್ವ ಸರೋವರದ ತಟದಲ್ಲಿ ಭಾಗೀರಥಿ(ಗಂಗಾದೇವಿ)ಗುಡಿಯಿದೆ. ಪ್ರತಿ ವರ್ಷ ಭಾಗೀರಥಿ ಜನ್ಮದಿನ ಸಂದರ್ಭದಲ್ಲಿ ಮಧ್ವ ಸರೋವರ ತುಂಬಿಕೊಂಡಿರುತ್ತಿತ್ತು ಆದರೆ ಈ ವರ್ಷ ಮುಂಗಾರು ವಿಳಂಬವಾಗಿರುವುದರಿಂದ ಸರೋವರದೊಳಗಿರುವ ಬಾವಿಯಲ್ಲಿ ಮಾತ್ರ ನೀರು ಉಳಿದಿದೆ.

ಈ ಬಾರಿಯೂ ಭಾಗೀರಥಿ ಜಯಂತಿ ಹಿನ್ನೆಲೆಯಲ್ಲಿ ಪರ್ಯಾಯ ಪಿಠಾಧಿಪತಿಗಳಾದ ಪಲಿಮಾರು ವಿದ್ಯಾಧೀಶ ತೀರ್ಥ ಶ್ರೀಪಾದರು ಗಂಗೆಗೆ ನಿರಾಜನಗೈದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬರ ನೀಗಿ- ವರ್ಷಧಾರೆಯಾಗಿ ರೈತರರು ಬೆಳೆದ ಬೆಳೆಗಳು ಸಮೃದ್ಧವಾಗಲಿ ಎಂದು ಪ್ರಾರ್ಥಿಸಿದರು. ಮರುಕ್ಷಣವೇ ಉಡುಪಿಯಲ್ಲಿ ಧಾರಾಕಾರವಾಗಿ ವರುಣ ಧರೆಗಿಳಿದು ಸಂಭ್ರಮವನ್ನುಂಟುಮಾಡಿದ. ಅಲ್ಲಿದ್ದವರೆಲ್ಲ ಈ ಪವಾಡ ನೋಡಿ ಮೂಕವಿಸ್ಮಿತರಾದರು.

ಭಗಿರಥಿ ಪೂಜೆಗೈದ ಶ್ರೀ ಗಳು

ಪಲಿಮಾರು ಮತ್ತು ಅದಮಾರು ಮಠದ ಕಿರಿಯ ಯತಿಗಳು ಸರೋವರದಲ್ಲಿರುವಾಗಲೇ ಮಳೆ ಬಂದದ್ದು ವಿಶೇಷವಾಗಿತ್ತು. ಭಾಗೀರಥಿ ಪೂಜೆ ಬಳಿಕ ಉಡುಪಿಯಲ್ಲಿ ಭಾರೀ ಗಾಳಿ ಮಳೆಯಾಗಿ ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ. ಭಾಗೀರಥಿ ಜಯಂತಿಯಂದೇ ಮುಂಗಾರು ಆರಂಭವಾಗಿದ್ದು, ನೀರಿನ ಬರ ನೀಗಲಿ, ಮುಂಗಾರು ರಾಜ್ಯದೆಲ್ಲೆಡೆ ಸುರಿಯಲಿ ಅನ್ನೋದು ಜನರ ಆಶಯವಾಗಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥರು, ಪ್ರತಿನಿತ್ಯ ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಮಳೆಗಾಗಿ ಪ್ರಾರ್ಥಿಸುತ್ತಿದ್ದೇನೆ. ಭಾಗೀರಥಿ ಜನ್ಮದಿನದ ಆಚರಣೆ ಸಂದರ್ಭದಲ್ಲೇ ಮಳೆಯಾಗಿದೆ. ಇದು ಶುಭ ಸೂಚನೆ, ದೇಶ, ರಾಜ್ಯದಲ್ಲಿ ಗಂಗೆ ಅವತರಿಸಿ ಉತ್ತಮ ಮಳೆಯಾಗಲಿ. ರೈತರ ಹೊಲಗಳಲ್ಲಿ ಸಮೃದ್ಧ ಬೆಳೆಯಾಗಿ ಅವರ ಮುಖಗಳಲ್ಲಿ ಸಂತಸದ ಕಳೆ ಮೂಡಲಿ ಎಂದು ಹಾರೈಸಿದರು.

ಉಡುಪಿ ನಗರದಲ್ಲಿ ಮಳೆಯ ಆರ್ಭಟ

 – ಅಲೋಕ್ ಭಟ್, ಉಡುಪಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!