Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಧ್ಯಾನರೂಪ / Dhyana Roopa

ಶ್ರೀಲಲಿತಾ ಸಹಸ್ರನಾಮ ಪ್ರತಿಪದಾರ್ಥ 29

Published

on

_66)_  ಸಂಪತ್ಕರೀಸಮಾರೂಢಸಿಂಧುರವ್ರಜಸೇವಿತಾಯೈ ನಮಃ.
ಸುಖಸಂಪನ್ಮಯವಾದ ಪರಾಶಕ್ತಿಯ ಭಾವವೇ ಸಂಪತ್ಕರೀ, ಮೋಕ್ಷವೆಂಬ ಪರಮೈಶ್ವರ್ಯಕ್ಕೆ ಕಾರಣಾಗುವವಳೇ ಸಂಪತ್ಕರೀ. ಸಿಂಧುರ ಎಂಬ ಶಬ್ದಕ್ಕೆ ಸಂಸ್ಕೃತದಲ್ಲಿ ಆನೆ ಎನ್ನುವ ಅರ್ಥದ ಜೊತೆಗೆ ಎಂಟು ಎನ್ನುವ ಸಂಖ್ಯಾವಿಶೇಷವನ್ನೂ ಸೂಚಿಸುತ್ತದೆ. ಎಂಟು ಅನ್ನುವ ಸಂಖ್ಯೆಯು ಇಲ್ಲಿ ಅಷ್ಟ ದಿಗ್ಗಜಗಳನ್ನು ಸೂಚಿಸುತ್ತದೆ.
ಸಂಪತ್ಕರೀ ಎಂಬ ಹೆಸರಿನ ಸೇನಾನಾಯಿಕೆಯ ನೇತೃತ್ವದಲ್ಲಿ ದೇವಿಯ ಗಜಸೈನ್ಯದಲ್ಲಿರುವ ಆನೆಗಳು ಸಾಮಾನ್ಯ ಆನೆಗಳಂತಿರದೆ ಅಷ್ಟ ದಿಗ್ಗಜಗಳಂತೆ ಅಪಾರ ಶಕ್ತಿ ಸಂಪನ್ನವಾಗಿವೆ.ಇಂತಹ ಗಜಸೈನ್ಯವನ್ನು ಹೊಂದಿರುವ ಶ್ರೀಮಾತೆಗೆ ನಮಸ್ಕಾರಗಳು.

 

_67)_ ಅಶ್ವಾರೂಢಾಧಿಷ್ಠಿತಾಶ್ವಕೋಟಿಕೋಟಿಭಿರಾವೃತಾಯೈ ನಮಃ.
ಅಶ್ವಾರೂಢಾ ಎಂಬ ಹೆಸರಿನ ಸೇನಾನಾಯಿಕೆಯ ನೇತೃತ್ವದಲ್ಲಿ ಕೋಟಿ ಕೋಟಿ ಸಂಖ್ಯೆಯ ಅಶ್ವಗಣಗಳು ಸುತ್ತಲೂ ಸೇರಿವೆ.ಅಶ್ವಾರೂಢೆಯು ಶ್ರೀದೇವಿಯ ಪಾಶವೆಂಬ ಆಯುಧದಿಂದ ಆವಿರ್ಭವಿಸಿದವಳು. ಇಂದ್ರಿಯಗಳನ್ನು ನಿಗ್ರಹಿಸುವ ತತ್ವವೇ ಅಶ್ವಾರೂಢಾ ತತ್ವವಾಗಿದೆ.ದೇವಿಯ ಕುದುರೆಯ ಹೆಸರು ಅಪರಾಜಿತ. ಅಶ್ವ ಎನ್ನುವ ಹೆಸರು ಸಂಖ್ಯಾಶಾಸ್ತ್ರದ ಪ್ರಕಾರ ಏಳನ್ನು ಸೂಚಿಸುತ್ತದೆ. ಅದು ಸೂರ್ಯನ ರಥಕ್ಕೆ ಇರುವ ಸಪ್ತಾಶ್ವಗಳಿಗೂ ಹೋಲಿಕೆಯಾಗುತ್ತದೆ. ವಾರದಲ್ಲಿರುವ ಏಳು ದಿನಗಳನ್ನೂ ಸೂಚಿಸುತ್ತದೆ. ಅಶ್ವಾರೂಢಳಾಗಿ ಕೋಟಿ ಕೋಟಿ ಸಂಖ್ಯೆಯ ಅಶ್ವಗಣಗಳನ್ನು ಹೊಂದಿರುವ ಲಲಿತಾಂಬಿಕೆಗೆ ನಮಸ್ಕಾರಗಳು.

✍🏻 ವೇ ಬ್ರ ಶ್ರೀ ವೆಂಕಟೇಶ ಜೋಶಿ
📧 joshivenkatesh7@gmail.com
📱9901884353

ಶ್ರೀಲಲಿತಾ ಸಹಸ್ರನಾಮ ಪ್ರತಿಪದಾರ್ಥ 28

ಶ್ರೀ ಲಲಿತಾ ಸಹಸ್ರನಾಮ ಪ್ರತಿಪದಾರ್ಥ 27

 

 

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!