Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ದಿನಕ್ಕೊಂದು ಸ್ತೋತ್ರ

ಶ್ರೀ ಆದಿಶಂಕರಾಚಾರ್ಯ ವಿರಚಿತ ಪಾಂಡುರಂಗ ಅಷ್ಟಕ ಅರ್ಥಸಹಿತ 

Published

on

ಇಂದು ಆಷಾಢ ಶುಕ್ಲ ಏಕಾದಶಿ, ಪ್ರಥಮ ಏಕಾದಶಿ. ವಿಠೋಭನ ನಾಮಸ್ಮರಣೆ ಮಹತ್ವವನ್ನು ಪಡೆದಿದೆ. ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ಪಾಂಡುರಂಗ ಅಷ್ಟಕವನ್ನು ಅರ್ಥಸಹಿತವಾಗಿ ಜ್ಞಾನದಾದಲ್ಲಿ ನೋಡೋಣ

ಪಾಂಡುರಂಗಾಷ್ಟಕಂ

ಮಹಾಯೋಗಪೀಠೇ ತಟೇ ಭೀಮರಥ್ಯಾ |
ವರಂ ಪುಂಡರೀಕಾಯ ದಾತುಂ ಮುನೀಂದ್ರೈಃ ।|
ಸಮಾಗತ್ಯ ನಿಷ್ಠಂತಮಾನಂದಕಂದಂ |
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ ॥ 1॥

ಭೀಮಾ ತೀರದಲ್ಲಿ ಮಹಾಯೋಗ ಪೀಠದಲ್ಲಿ ಭಕ್ತ ಶ್ರೇಷ್ಠ ಪುಂಡಲಿಕನಿಗೆ ವರವನ್ನು ನೀಡಲು ಮುನಿಶ್ರೇಷ್ಠರೊಂದಿಗೆ ಬಂದು ನಿಂತಿರುವ ಆನಂದಮಯ ಪರಬ್ರಹ್ಮ ಸ್ವರೂಪಿ ಪಾಂಡುರಂಗನನ್ನು ಭಜಿಸುವೆನು.

ತಟಿದ್ವಾಸಸಂ ನೀಲಮೇಘಾವಭಾಸಂ |
ರಮಾಮಂದಿರಂ ಸುಂದರಂ ಚಿತ್ಪ್ರಕಾಶಮ್ ||
ವರಂ ತ್ವಿಷ್ಟಕಾಯಾಂ ಸಮನ್ಯಸ್ತಪಾದಂ |
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ ॥ 2॥

 

ವಿದ್ಯುಲ್ಲತೆಯಂತೆ ಹೊಳೆಯುವ ಪೀತಾಂಬರವನ್ನು ಧರಿಸಿದ, ಶರೀರದ ನೀಲವರ್ಣಕಾಂತಿಯು ಲಕ್ಷ್ಮಿಗೆ ಆಶ್ರಯಸ್ಥಾನವಾದ,ಸುಂದರವಾದ,ಚಿತ್ ಸ್ವರೂಪನಾದ,ಭಕ್ತರಿಗೆ ವರಗಳನ್ನ ಅನುಗ್ರಹಿಸಲು ಶ್ರೇಷ್ಠ ರೂಪಧರಿಸಿ ಇಟ್ಟಿಗೆ ಮೇಲೆ ಸಮವಾಗಿ ಪಾದಗಳನ್ನಿರಿಸಿದ ಪರಬ್ರಹ್ಮ ಸ್ವರೂಪಿ ಪಾಂಡುರಂಗನನ್ನು ಭಜಿಸುವೆನು.

ಪ್ರಮಾಣಂ ಭವಾಬ್ಧೇರಿದಂ ಮಾಮಕಾನಾಂ |
ನಿತಂಬಃ ಕರಾಭ್ಯಾಂ ಧೃತೋ ಯೇನ ತಸ್ಮಾತ್ || ವಿಧಾತುರ್ವಸತ್ಯೈ ಧೃತೋ ನಾಭಿಕೋಶಃ |
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ ॥ 3॥

‘ತನಗೆ ಶರಣಾದವರಿಗೆ ಪ್ರಪಂಚದ ಪ್ರಮಾಣವು ಇಷ್ಟೇ’ – ಎಂದು ತೋರಲು ಯಾರು ಸೊಂಟದ ಮೇಲೆ ಕೈ ಇಟ್ಟುರುವನೋ,ಬ್ರಹ್ಮನ ವಾಸಸ್ಥಾನವನ್ನು ನಾಭಿಯಲ್ಲಿರಿಸಿದ ಪರಬ್ರಹ್ಮ ಸ್ವರೂಪಿ ಪಾಂಡುರಂಗನನ್ನು ಭಜಿಸುವೆನು.

ಸ್ಫುರತ್ಕೌಸ್ತುಭಾಲಂಕೃತಂ ಕಂಠದೇಶೇ |
ಶ್ರಿಯಾ ಜುಷ್ಟಕೇಯೂರಕಂ ಶ್ರೀನಿವಾಸಮ್ ||
ಶಿವಂ ಶಾಂತಮೀಡ್ಯಂ ವರಂ ಲೋಕಪಾಲಂ

ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ ॥ 4॥

ಕೊರಳಲ್ಲಿ ಕೌಸ್ತುಭಮಣಿಯನ್ನು ಧರಿಸಿ ಶೋಭಿಸುತ್ತಿರುವ,ಲಕ್ಷ್ಮೀ ಸಹಿತನಾದ,ಬಾಹುಪುರಿಯನ್ನು ಧರಿಸಿದ ಶ್ರೀನಿವಾಸನನ್ನು, ಮಂಗಲಮಯ ಸ್ವರೂಪನನ್ನು,ಶಾಂತನನ್ನು,ಭಕ್ತರಿಂದ ಸ್ತುಯತಿಸಲ್ಪಡುವ,ಶ್ರೇಷ್ಠನನ್ನು,ಲೋಕರಕ್ಷನನ್ನು,ಪರಬ್ರಹ್ಮ‌ಸ್ವರೂಪಿ ಪಾಂಡುರಂಗನನ್ನು ಭಜಿಸುವೆನು.

ಶರಚ್ಚಂದ್ರಬಿಂಬಾನನಂ ಚಾರುಹಾಸಂ | ಲಸತ್ಕುಂಡಲಾಕ್ರಾಂತಗಂಡಸ್ಥಲಾಂತಮ್ ।| ಜಪಾರಾಗಬಿಂಬಾಧರಂ ಕಽಜನೇತ್ರಂ |
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್॥ 5॥

ಶರತ್ಕಾಲದ ಚಂದ್ರನಂತೆ ಸುಂದರವಾದ ಮುಖವುಳ್ಳ ನಗೆಮೊಗದರಸ,ಕುಂಡಲಗಳ ಪ್ರಭೆಯುಗಲ್ಲದ ಮೇಲೆ ವ್ಯಾಪಕವಾಗಿರುವ,ಕೆಂದುಟಿಗಳನ್ನು ಹೊಂದಿರುವ,ಸೂರ್ಯದೇವನೇ ನೇತ್ರವಾಗಿರುವ ಪರಬ್ರಹ್ಮ‌ಸ್ವರೂಪಿ ಪಾಂಡುರಂಗನನ್ನು ಭಜಿಸುವೆನು.

ಕಿರೀಟೋಜ್ವಲತ್ಸರ್ವದಿಕ್ಪ್ರಾಂತ ಭಾಗಂ |
ಸುರೈರರ್ಚಿತಂ ದಿವ್ಯರತ್ನೈರನರ್ಘೈಃ ||
ತ್ರಿಭಂಗಾಕೃತಿ ಬರ್ಹಮಾಲ್ಯಾವತಂಸಂ |
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್॥ 6॥

ಯಾರ ಕಿರೀಟದ ಪ್ರಭೆಯು ದಶದಿಕ್ಕುಗಳಲ್ಲಿಯೂ ವ್ಯಾಪಿಸಿದೆಯೋ, ದೇವತೆಗಳಿಂದ ಅಮೂಲ್ಯವಾದ ರತ್ನಗಳಿಂದ ಪೂಜೆಗೊಳ್ಳುತ್ತಿರುವ,ಮೂರು ವಿಭಾಗಗಳ ಆಕೃತಿಗಳುಳ್ಳ , ನವಿಲುಗರಿ, ಹೂಮಾಲೆ, ಆಭರಣಗಳಿಂದ ಅಲಂಕೃತವಾದ ಪರಬ್ರಹ್ಮ‌ಸ್ವರೂಪಿ ಪಾಂಡುರಂಗನನ್ನು ಭಜಿಸುವೆನು.

ವಿಭುಂ ವೇಣುನಾದಂ ಚರಂತಂ ದುರಂತಂ |
ಸ್ವಯಂ ಲೀಲಯಾ ಗೋಪವೇಷಂ ದಧಾನಮ್ ||
ಗವಾಂ ಬೃಂದಕಾನಂದದಂ ಚಾರುಹಾಸಂ |
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ ॥ 7॥

ವಿಶ್ವವ್ಯಾಪಿಯೂ, ಕೊಳಲನ್ನೂದುತ್ತ ತಿರುಗುವ, ಊಹೆಗೆ ನಿಲುಕದ‌ ಅಂತವುಳ್ಳ, ತನ್ನ ಲೀಲೆಯಿಂದ ಗೋಪವೇಷವನ್ನು ಧರಿಸಿರುವ,ಗೋವುಗಳಿಗೆ ಆನಂದವನ್ನು ನೀಡುವ, ಮಂದಹಾಸವುಳ್ಳ,ಪರಬ್ರಹ್ಮ‌ಸ್ವರೂಪಿ ಪಾಂಡುರಂಗನನ್ನು ಭಜಿಸುವೆನು.

ಅಜಂ ರುಕ್ಮಿಣೀ ಪ್ರಾಣಸಂಜೀವನಂ ತಂ |
ಪರಂ ಧಾಮ ಕೈವಲ್ಯಮೇಕಂ ತುರೀಯಮ್ ||
ಪ್ರಸನ್ನಂ ಪ್ರಪನ್ನಾರ್ತಿಹಂ ದೇವದೇವಂ |
ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ ॥ 8॥

ಜನ್ಮಾಂತರ ರಹಿತನು,ರುಕ್ಮಿಣಿಯ ಪ್ರಾಣಕ್ಕೆ ಸಂಜೀವಿನಿಯಾಗಿರುವವನನ್ನು,ಶ್ರೇಷ್ಠ ಆಶ್ರಯಸ್ಥಾನನಾಗಿರುವವನನ್ನು,ಮೊಕ್ಷ ರೂಪವನ್ನು, ಅದ್ವಿತೀಯನನ್ನು ತುರಿಯಾವಸ್ಥೆಯಲ್ಲಿರುವವನ್ನು, ಆನಂದಮಯನನ್ನು, ಶರಣುಬಂದವರ ದುಃಖ ನಿವಾರಿಸವವನ್ನನ್ನು,ದೇವಾದಿದೇವ ಪರಬ್ರಹ್ಮ‌ಸ್ವರೂಪಿ ಪಾಂಡುರಂಗನನ್ನು ಭಜಿಸುವೆನು.

ಸ್ತವಂ ಪಾಂಡುರಂಗಸ್ಯ ವೈ ಪುಣ್ಯದಂ ಯೇ | ಪಠಂತ್ಯೇಕಚಿತ್ತೇನ ಭಕ್ತ್ಯಾ ಚ ನಿತ್ಯಮ್ ||
ಭವಾಂಭೋನಿಧಿಂ ತೇ ವಿತೀರ್ತ್ವಾಂತಕಾಲೇ
ಹರೇರಾಲಯಂ ಶಾಶ್ವತಂ ಪ್ರಾಪ್ನುವಂತಿ ||9||

ನಿಶ್ಚಯವಾಗಿ ಪುಣ್ಯವನ್ನು ಅನುಗ್ರಹ ಮಾಡುವ ಪಾಂಡುರಂಗನ ಸ್ತೋತ್ರವನ್ನು ಏಕಾಗ್ರಚಿತ್ತರಾಗಿ ಭಕ್ತಿಯಿಂದ ಪಾರಾಯಣ ಮಾಡುತ್ತಾರೋ ಅವರು ಸಂಸಾರ ಸಾಗರವನ್ನು ದಾಟಿ ಅಂತ್ಯಕಾಲದಲ್ಲಿ ಹರಿಯ ನಿವಾಸವನ್ನು ಹೊಂದುವರು..

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಛಂಕರಭಗವತಃ ಕೃತೌ ಪಾಂಡುರಂಗಾಷ್ಟಕಂ ಸಂಪೂರ್ಣಮ್ ॥

ವಿಠ್ಠಲನ ಅನುಗ್ರಹ ಸರ್ವರಿಗೂ ಲಭಿಸಲಿ ಎಂದು ಪ್ರಾರ್ಥಿಸುತ್ತಾ…

– ವಿಶ್ವಾಸ್.ಎಸ್.ಶೃಂಗೇರಿ

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!