Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

“ಶ್ರೀ ನಾಗದೇವತೆ” ಅಷ್ಟೋತ್ತರದ ಮಹತ್ವಗಳು – ಗಿರೀಶ್ ಶರ್ಮರಿಂದ

Published

on

 

“ಶ್ರೀ ನಾಗದೇವತೆ” ಅಷ್ಟೋತ್ತರದ ಮಹತ್ವಗಳು….!!
(C.L. ರಾಮ್ ಕುಮಾರ್ ಗುರುಗಳ ತಾರಾದರ್ಶಿನಿ ಅಂಕಣದಿಂದ ಸಂಗ್ರಹ, ದೇವರ ದೀಪಗಳು, ದೇವರ ಪ್ರಸಾದಗಳು ಪುಸ್ತಕದ ಲೇಖಕರು)

ಬಂಧುಗಳೇ ,
ಹಿಂದೆ “ಸರ್ಪರಾಜ” ಅಥವಾ ನಾಗರಾಜ ಅಷ್ಟೋತ್ತರದ ಮಹತ್ವವನ್ನು ತಿಳಿದು ಕೊಂಡಿದ್ದೆವು..!
ಇಂದು “ನಾಗದೇವತೆ” ಯ ಅಷ್ಟೋತ್ತರದ ಮಹತ್ವ ತಿಳಿದುಕೊಳ್ಳೋಣ…

“ಶ್ರೀ ನಾಗದೇವತೆ” ಅಷ್ಟೋತ್ತರವು ತುಂಬಾ ಅಪರೂಪ ಮತ್ತು ತುಂಬಾ ವಿಶೇಷವೂ ಕೂಡ…

ಈ ಅಷ್ಟೋತ್ತರ ಓದಿದರೆ ಏನು ಫಲ..?

೧. ಶ್ರೀ ನಾಗದೇವತೆ ಅಷ್ಟೋತ್ತರ ಮತ್ತು ಪೂಜೆಯನ್ನು ಪ್ರತಿದಿವಸ ಓದುತ್ತಾ ಬಂದರೆ ಮತ್ತು ಹುತ್ತದ ಪೂಜೆಯನ್ನು ಮಾಡುತ್ತಾ ಬಂದರೆ ನಿಮ್ಮ ಸಮಸ್ತ ವಿಧದ ಸರ್ಪದೋಷಗಳೂ ಬಹಳ ಬೇಗ ನಿವಾರಣೆಯಾಗುತ್ತದೆ..

೨. ಶ್ರೀ ನಾಗದೇವತೆಯ ಅಷ್ಟೋತ್ತರವನ್ನು ಚತುರ್ವರ್ಣದವರೂ ಓದಬಹುದು..

೩. ಯಾರಿಗೆ ವಿವಾಹಕ್ಕೆ ತುಂಬಾ ಅಡತಡೆ ಇದೆ, ಎಷ್ಟೇ ಪ್ರಯತ್ನಪಟ್ಟರೂ ವಿವಾಹವು ಮುಂದೆ ಹೋಗುತ್ತಿರುತ್ತದೆಯೋ, ಅಂತಹವರು ತಮ್ಮ ಮನೆಯಲ್ಲಿ ದೇವರ ಮುಂದೆ ಕುಳಿತು “ಶ್ರೀ ನಾಗದೇವತಾಷ್ಟೋತ್ತರವನ್ನು ಹೇಳಿ ಪೂಜೆ ಮಾಡಿದರೆ ನಿಮಗೆ ಒಪ್ಪುವಂತಹ ಗಂಡು/ಹೆಣ್ಣು ಸಿಕ್ಕಿ ಬಹಳ ಬೇಗ ವಿವಾಹವು ನಡೆಯುತ್ತದೆ..

೪. ಯಾರಿಗೆ ಸಂತಾನಭಾಗ್ಯ ಇರುವುದಿಲ್ಲವೋ ಅಂತಹವರು ” ಶ್ರೀ ಸುಬ್ರಹ್ಮಣ್ಯ ” ದೇವರನ್ನು ಕುರಿತು ಶ್ರೀ ನಾಗದೇವರನ್ನು ಪೂಜಿಸಿ , ಶ್ರೀ ನಾಗದೇವರ ಅಷ್ಟೋತ್ತರದಿಂದ ಪೂಜಿಸುತ್ತಾ ಬಂದರೆ, ಶ್ರೀ ನಾಗದೇವರ ಕೃಪೆಯಿಂದ ಒಂದು ವರ್ಷದೊಳಗೆ ಸಂತಾನ ಭಾಗ್ಯವಾಗುತ್ತದೆ..

೫. ಅಶ್ವತ್ಥ ಮರದ ಕೆಳಗೆ ಇರುವ ನಾಗರಕಲ್ಲಿಗೆ ನಾಗದೇವರ ಅಷ್ಟೋತ್ತರದಿಂದ ಹಾಲು ಮತ್ತು ಜೇನುತುಪ್ಪದಿಂದ ದೇವರಿಗೆ ಅಭಿಷೇಕವನ್ನು ಮಾಡುವಾಗ ಶ್ರೀ ನಾಗದೇವರ ಅಷ್ಟೋತ್ತರವನ್ನು ಹೇಳಿ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗಿ ಸಕಲ ಶತ್ರುಗಳೂ ಮಿತ್ರರಾಗುತ್ತಾರೆ..

 

೬. ಕಾಳಸರ್ಪ ದೋಷವಿರುವವರು ಅಶ್ವತ್ಥ ಮರದ ಕೆಳಗೆ ಕುಳಿತು “ಶ್ರೀ ನಾಗದೇವರ” ಅಷ್ಟೋತ್ತರವನ್ನು ಹೇಳಿ ಹದಿನೆಂಟು ತಿಂಗಳು ಪೂಜೆಯನ್ನು ಮಾಡಿದರೆ ಕಾಳಸರ್ಪ ದೋಷಗಳು ನಿವಾರಣೆಯಾಗುತ್ತದೆ..

೭. ದಂಪತಿಗಳಲ್ಲಿ ಯಾವಗಾಲೂ ಜಗಳವಾಗುತ್ತಿದ್ದರೆ, ಮನಸ್ತಾಪ ಜಾಸ್ತಿ ಇದ್ದರೆ, ಅಂತಹವರು ಪ್ರತಿದಿನ ನಾಗದೇವರ ಅಷ್ಟೋತ್ತರವನ್ನು ಓದಿ ಪೂಜೆ ಮಾಡುತ್ತಾ ಬಂದರೆ ಕಲಹಗಳು ಕಡಿಮೆಯಾಗಿ ಅನುರಾಗದ ಪ್ರೀತಿ ಜಾಸ್ತಿಯಾಗುತ್ತದೆ…!

೮. ಸರ್ಪದೋಷ ಇರುವವರು ಪ್ರತಿದಿನ ಓದುತ್ತಾ ಬಂದರೆ ಸರ್ಪದೋಷ ನಿವಾರಣೆಯಾಗುತ್ತದೆ..

೯. ಚರ್ಮವ್ಯಾಧಿ ಇರುವವರು ಪ್ರತಿದಿವಸ ಓದಿ , ಹುತ್ತದ ಮಣ್ಣಿನಿಂದ ಸ್ನಾನ ಮಾಡಿದರೆ ಸಮಸ್ತ ಚರ್ಮವ್ಯಾಧಿಗಳೂ ನಿವಾರಣೆಯಾಗುತ್ತದೆ..

ಶುಭವಾಗಲಿ..

ಸಂಗ್ರಹ
ಗಿರೀಶ್ ಶರ್ಮ ತುಮಕೂರು
girish1989sharma@gmail.com

M : 9008026083

 

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!