ವರಮಹಾಲಕ್ಷ್ಮೀ ಹಬ್ಬದ ಶುಭಾಷಯಗಳು..
“ಶ್ರೀ ವರಮಹಾಲಕ್ಷ್ಮೀ ವ್ರತ” ಮತ್ತು ವಿಚಾರಗಳು.
“ಪ್ರಾಯಶ್ಚಿತ್ತ ಸಂಕಲ್ಪ” ಮಾಡಿನೇ ಪೂಜೆ ಮಾಡಬೇಕು..
“ಶುಕ್ಲೇ ಶ್ರಾವಣೇ ಮಾಸಿ ಪೂರ್ಣಿಮೋಪಾಂತ್ಯ ಭಾರ್ಗವೇ ||
” ವರಮಹಾಲಕ್ಷ್ಮೀ ವ್ರತ ಕಾರ್ಯಂ :- ಎಂಬ ಶ್ಲೋಕದ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಶುಕ್ಲ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರ, ಅಂದರೆ ಶ್ರಾವಣ ಮಾಸದ ಎರಡನೇ ಶುಕ್ರವಾರ ಅಥವಾ ಮೂರನೇ ಶುಕ್ರವಾರದಲ್ಲಿ ಆಚರಿಸಲ್ಪಡುವ ವ್ರತಪೂಜೆಯೇ “ಶ್ರೀ ವರಮಹಾಲಕ್ಷ್ಮೀ ವ್ರತ”..
ಹಿಂದೆ ರಾಕ್ಷಸರು ಹಾಗೂ ದೇವತೆಗಳು ಮಂದಾರ ಪರ್ವತವನ್ನು ಕಡೆಯುವಾಗ ಮಹಾದೇವಿಯ ಸ್ವರೂಪವಾದ ಲಕ್ಷ್ಮಿಯು ಸ್ವಯಂಭೂವಾಗಿ ಪದ್ಮದಲ್ಲಿ ಹವಿರ್ಭವಿಸುತ್ತಾಳೆ..
ಮಹಾಪದ್ಮ ಸಂಸ್ಥಳಾದ ದೇವಿಯು ಮಹಾಲಕ್ಷ್ಮೀ ಸ್ವರೂಪಿಣಿಯಾಗಿದ್ದಾಳೆ.
“ಪದ್ಮನಯನೆ, ಪದ್ಮಹಸ್ತೇ, ಪದ್ಮಮುಖಿ, ಪದ್ಮಾಸನಾ, ಪದ್ಮಾಲಯಾಸ್ತಳಾದ ಲಕ್ಷ್ಮಿಯು ದೇವೀ ಸ್ವರೂಪ.
ಈ ಲಕ್ಷ್ಮಿಯು ನಾಮಪಾರಾಯಣ ಪ್ರೀತಳಾಗಿದ್ದಾಳೆ.
ಶ್ರೀ ಲಕ್ಷ್ಮಿಯು ಅಷ್ಟಲಕ್ಷ್ಮಿಯಾಗಿ ಎಲ್ಲರನ್ನೂ ಸಲಹುತ್ತಾಳೆ.
ಆದಿಲಕ್ಷ್ಮೀ, ಗಜಲಕ್ಷ್ಮೀ, ಧನಲಕ್ಷ್ಮೀ, ಧಾನ್ಯಲಕ್ಷ್ಮೀ, ಸಂತಾನಲಕ್ಷ್ಮೀ, ವೀರಲಕ್ಷ್ಮೀ, ವಿದ್ಯಾಲಕ್ಷ್ಮೀ, ಜಯಲಕ್ಷ್ಮೀ.
ಈ ರೀತಿ ಅಷ್ಟಲಕ್ಷ್ಮಿಯರಾಗಿ ಭಕ್ತರ ಕೋರಿಕೆಗಳನ್ನು ಅತೀ ಶೀಘ್ರದಲ್ಲೇ ನೆರವೇರಿಸುವ ಅಮೃತಾನಂದ ಮಯಿಯಾಗಿದ್ದಾಳೆ.
ವ್ರತ ಸಮಯ: ವರಮಹಾಲಕ್ಷ್ಮೀ ವ್ರತವಾದ “ಶ್ರೀ ವರಮಹಾಲಕ್ಷ್ಮೀ ವ್ರತ”ವನ್ನು ” ಬ್ರಾಹ್ಮೀ” ಮುಹೂರ್ತದಲ್ಲಿ ಮಾಡುವುದು ಅತ್ಯಂತ ಶುಭ ..
ಈ ಸಮಯದಲ್ಲಿ ಮಾಡಿದರೆ ಅತ್ಯಂತ ಶುಭಫಲ, ಅಭಿವೃದ್ಧಿ, ಇಷ್ಟಾರ್ಥ ಸಿದ್ಧಿಯಾಗುವುದು.
“ಬ್ರಾಹ್ಮೀ ಮುಹೂರ್ತ” ಎಂದರೆ ಅರ್ಧರಾತ್ರಿ ಕಳೆದ ಮೇಲೆ ಬೆಳಗಿನ ಜಾವ ಬರುವುದೇ ಬ್ರಾಹ್ಮೀ ಮುಹೂರ್ತ.
ಈ ಸಮಯದಲ್ಲಿ ಮಾಡುವ ಪೂಜೆಯು ಬಹು ಉತ್ತಮವಾಗಿರುತ್ತದೆ.
ಬೆಳಗಿನ ಜಾವದ ವಾತಾವರಣ ಪ್ರಶಾಂತವಾಗಿರುತ್ತದೆ. ಪೂಜೆಯು ನಿರಾತಂಕವಾಗಿ ಸಾಗಲು ಅತ್ಯಂತ ಶ್ರೇಷ್ಟ ಸಮಯವಾಗಿರುತ್ತದೆ.
ಈ ಸಮಯದಲ್ಲಿ ೫ ನಿಮಿಷ ಮಾಡುವ ಪೂಜೆಯು ಮನಸ್ಸಿಗೆ ಎಷ್ಟೋ ಶಾಂತಿ ನೆಮ್ಮದಿಯನ್ನು ಕೊಡುತ್ತದೆ. ಸಂಜೆಯ ಗೋಧೂಳಿ ಸಮಯದಲ್ಲೂ ಮಾಡಬಹುದು.
ಯಾರಿಗೆ ಉಪವಾಸ ಇರಲು ಸಾಧ್ಯವಿಲ್ಲವೋ, ಬ್ರಹ್ಮಚರ್ಯ ಪಾಲಿಸಲು ಸಾಧ್ಯವಿಲ್ಲವೋ, ನಿಯಮಗಳಿಂದ ವ್ರತಾಚರಣೆ ಮಾಡಲು ಸಾಧ್ಯವಿಲ್ಲವೋ, ಅಶಕ್ತರೋ, ಹಣಕಾಸು ಸ್ಥಿತಿ ಉತ್ತಮವಾಗಿಲ್ಲವೋ, ಇವರುಗಳು ಮಾಡುವುದಕ್ಕೆ ಆಗದಿದ್ದ ಪಕ್ಷದಲ್ಲಿ ಮುಂದೇ ಬರುವ ದೀಪಾವಳಿಯಂದು “ಶ್ರೀ ಲಕ್ಷ್ಮೀ” ಪೂಜೆಯನ್ನು ಮಾಡಬಹುದು (ವ್ರತಬೇಡ).
“ರೋಗಿಗಳು, ಪ್ರತಿದಿನ ಮಾತ್ರೆ ತೆಗೆದುಕೊಳ್ಳುವವರು, ಅಶಕ್ತರೂ, ವೃದ್ಧರೂ, ಮಕ್ಕಳೂ, ತಮ್ಮ ಗುರುಗಳ ಮುಖೇನ ತಿಳಿದು ಫಲಾಹಾರ ಅಥವಾ ಉಪಹಾರ ಸೇವಿಸಬಹುದು.
ಈ ವ್ರತವನ್ನು ಆಡಂಬರದಿಂದ ಮಾಡಬೇಕೆಂದಿಲ್ಲ, ಭಕ್ತಿಯಿಂದ ಶಕ್ತಿ ಇರುವಷ್ಟು ಪೂಜಿಸಿ ಹತ್ತು ನಿಮಿಷ ಪ್ರಾರ್ಥಿಸಿದರೆ ಸಾಕು, ಆ ದೇವಿ ಪೂರ್ಣಕಟಾಕ್ಷವನ್ನು ಕರುಣಿಸುವಳು.
ಈ ವ್ರತವನ್ನು ಯಾರ್ಯಾರು ಮಾಡಬಾರದು.
ನಿಮ್ಮ ಕುಟುಂಬದಲ್ಲಿ ಸಂಪ್ರದಾಯವಿದ್ದು ಮೊದಲಿನಿಂದಲೂ ಆಚರಿಸುತ್ತಾ ಬಂದಿದ್ದರೆ ಮಾತ್ರ ಮಾಡಿ. ಇಲ್ಲದಿದ್ದರೆ ಬೇಡ. ಮಾಡಲೇಬೇಕು ಎಂದಾದರೆ ಗುರುಗಳ ಮುಖೇನ ಕೇಳಿ ಮಾಡಿ.
೧. ಯಾರು ಪರಸ್ತ್ರೀಯನ್ನು ಗೌರವಿಸುವುದಿಲ್ಲವೋ, ತಮ್ಮ ಕುಟುಂಬದ ಸ್ತ್ರೀಯರನ್ನು ಪ್ರೀತಿಸದೆ ದ್ವೇಷಿಸುತ್ತಾರೋ ಅವರು ಈ ವ್ರತವನ್ನು ಮಾಡಕೂಡದು.
ಮಾಡಿದರೆ ಲಕ್ಷ್ಮೀಯ ಅವಕೃಪೆಗೆ ಒಳಗಾಗಬೇಕಾಗುತ್ತದೆ.
೨. ಯಾರು ಅಕ್ಕತಂಗಿಯರಿಗೆ ಜೀವನಪೂರ್ತಿ ನೋವು ಕೊಟ್ಟಿತುತ್ತಾರೋ, ತಾಯಿಯನ್ನು ನೋಯಿಸಿರುತ್ತಾರೋ, ಇವರು ವ್ರತ ಮಾಡಲು ಅನರ್ಹರಾಗಿರುತ್ತಾರೆ.
೩. ಯಾರು ಮಧು ಮಾಂಸ ಭಕ್ಷಣೆ, ಕುಡಿತದ ಚಟ, ಜೂಜಿನ ಚಟ ಇರುತ್ತಾರೋ ಅವರೂ ಕೂಡ ಮಾಡಕೂಡದು.
೪. ಯಾರು ಹಣ ಮದದಿಂದ ಮೆರೆಯುತ್ತಿರುತ್ತಾರೋ, ಬಡ್ಡಿಗೆ ಸಾಲ ಕೊಟ್ಟು ಹಿಂಸಿಸುತ್ತಿರುತ್ತಾರೋ, ಕೆಲಸದವರನ್ನು ಕೀಳಾಗಿ ನೋಡುತ್ತಿರುತ್ತಾರೋ, ಇಂತವರೂ ಸಹ ಅನರ್ಹರಾಗಿರುತ್ತಾರೆ.
೫. ಯಾರು ಒಡವೆಗಳನ್ನು, ಮಾಂಗಲ್ಯವನ್ನೂ ಅಡ ಇಟ್ಟಿರುತ್ತಾರೋ, ಅಥವಾ ಅಡ ಇಡಿಸಿಕೊಟ್ಟಿರುತ್ತಾರೋ ಅಂತವರೂ ಸಹ ವ್ರತ ಮಾಡಲು ಅನರ್ಹರಾಗುತ್ತಾರೆ.
ವಿಶೇಷ ಎಚ್ಚರಿಕೆ: ಎಲ್ಲಿಯವರೆಗೆ ಕಲಶ ಸ್ಥಾಪನೆ ಮಾಡಿದ ಲಕ್ಷ್ಮೀ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಲೋ ಅಲ್ಲಿಯವರೆಗೂ ಬ್ರಹ್ಮಚರ್ಯ ಪಾಲನೆ ಕಡ್ಡಾಯ, ಇಲ್ಲದಿದ್ದರೆ ಮನೆಯಿಂದ ಎದ್ದುಹೋಗುವ ಲಕ್ಷ್ಮೀ ಮತ್ತೆಂದೂ ಬರಲಾರಳು.
ಇದರಲ್ಲಿ ಕೆಲವು ನಿಯಮ , ಸಂಕಲ್ಪ, ವಿಶೇಷ ನೈವೇದ್ಯ ಇದೆ
ಶುಭವಾಗಲಿ..
ಈ ವ್ರತ ಸರಿಯಾಗಿ ತಿಳಿಯದೇ ಮಾಡಿದರೆ , ತುಂಬಾ ತೊಂದರೆಯಾಗುತ್ತದೆ..
ಸಂಗ್ರಹ
ಗಿರೀಶ್ ಶರ್ಮ ತುಮಕೂರು
girish1989sharma@gmail.com
@GIRISH SHARMA@