Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ದಿನಕ್ಕೊಂದು ಸ್ತೋತ್ರ

ಶ್ರೀಸ್ತವ: ( ಭಾವಾರ್ಥ ಸಹಿತ) – ಎಲ್.ಬಿ. ಪೆರ್ನಾಜೆ

Published

on

|| ಶ್ರೀಸ್ತವ: || 
                  
ಐಶ್ವರ್ಯಂ ಯದಶೇಷಪುಂಸಿ ವಿದಿತಂ ಸೌಂದರ್ಯ-ಲಾವಣ್ಯಯೋ
ರೂಪಂ ಯಚ್ಚ ಹಿ ಮಂಗಲಂ ಕಿಮಪಿ ಯಲ್ಲೋಕೇ ಸದಿತ್ಯುಚ್ಯುತೇ |
ತತ್ಸರ್ವಂ ತ್ವದಧೀನಮೇವ ಯದತ: ಶ್ರೀರಿತ್ಯಭೇದೇನ ವಾ
ಯದ್ವಾ ಶ್ರೀಮದಿತೀದೃಶೇನ ವಚಸಾ ದೇವಿ ಪ್ರಥಾಮಶ್ನುತೇ ||೧||
 
ಎಲೇ ದೇವಿಯೇ! ಸಮಸ್ತ ಮಾನವರಲ್ಲಿ ಕಾಣಸಿಗುವ ಐಶ್ವರ್ಯ-ಸೌಂದರ್ಯ-ಲಾವಣ್ಯ ಮೊದಲಾದ ಶುಭ ರೂಪಗಳು ಮತ್ತು ಭುವಿಯಲ್ಲಿ ಯಾವುದನ್ನು “ಸತ್” ಎಂಬುದಾಗಿ ಕರೆಯಲ್ಪಡುತ್ತದೆಯೋ ಅದು ನಿನ್ನಾಧೀನವಾಗಿಯೇ ಇರುವುದಾಗಿದೆ.ಆದುದರಿಂದ ನಿನ್ನಿಂದ ಬೇರೆಯಾಗಲಾರದ ಈ ಸಾರಗಳು “ಶ್ರೀ” ಎಂಬುದಾಗಿಯೊ, “ಶ್ರೀಮತ್” ಎಂಬುದಾಗಿಯೂ ಪ್ರಸಿದ್ಧಿಯನ್ನು ಹೊಂದಿವೆ.
 
ಲೋಕೇ ವನಸ್ಪತಿ-ಬೃಹಸ್ಪತಿ-ತಾರತಮ್ಯಂ
ಯಸ್ಯಾ: ಪ್ರಸಾದ- ಪರಿಣಾಮಮುದಾಹರಂತಿ |
ಸಾ ಭಾರತಿ ಭಗವತೀ ತು ಯದೀಯದಾಸೀ
ತಾಂ ದೇವದೇವ-ಮಹಿಷೀಂ ಶ್ರಿಯಮಾಶ್ರಯಾಮ: ||೨||
 
ಭುವಿಯೊಳಗೆ ವನಸ್ಪತಿ [ಅಜ್ಞಾನಿಯೆನಿಸಿದ ಗಿಡ], ಬೃಹಸ್ಪತಿ [ಎಲ್ಲವನ್ನೂ ತಿಳಿದಿರುವ ಜ್ಞಾನಿ]ಎನ್ನುವ ತಾರತಮ್ಯವು ಯಾವಾತನ ಸಂತಸದ ಪರಿಣಾಮದಿಂದ ಉಂಟಾಗಿರುವುದೋ ಆ ಭಗವತಿಯಾಗಿರುವ ವಿದ್ಯಾಧಿದೇವತೆ ಸರಸ್ವತಿಯು ಯಾವಾತನ ದಾಸಿಯಾಗಿರುವಳೋ, ಅಂತಹಾ ದೇವಾಧಿದೇವತೆಗಳ ಒಡೆಯನಾಗಿರುವ ಮಹಾವಿಷ್ಣುವಿನ ಪಟ್ಟದರಸಿ ಶ್ರೀದೇವಿಯನ್ನು ನಾವು ಶರಣುಹೊಂದುತ್ತೇವೆ.
 
ಯಸ್ಯಾ: ಕಟಾಕ್ಷ-ವೀಕ್ಷಾ-ಕ್ಷಣ ಲಕ್ಷಂ ಲಕ್ಷಿತಾ ಮಹೇಶಾ: ಸ್ಯು: |
ಶ್ರೀರಂಗರಾಜ- ಮಹಿಷೀ ಸಾ ಮಾಮಪಿ ವೀಕ್ಷತಾಂ ಲಕ್ಷ್ಮೀ: ||೩||
 
ಯಾವ ದೇವಿಯ ಒಂದು ಕ್ಷಣದ ಕುಡಿನೋಟಕ್ಕೆ ವಸ್ತುವಾಗುವ ವ್ಯಕ್ತಿಗಳೆಲ್ಲರೂ ತಕ್ಷಣವೇ ಮಹೇಶ್ವರ ಸಮಾನರಾಗುವರೋ, ಅಂತಹಾ ಶ್ರೀರಂಗನಾಥಸ್ವಾಮಿಯ ಒಡತಿಯಾಗಿರುವ ಲಕ್ಷ್ಮಿಯು ತನ್ನ ಕೃಪಾಕಟಾಕ್ಷದಿಂದ ನನ್ನನ್ನೂ ಪರಿಗ್ರಹಿಸಿ ಅನುಗ್ರಹಿಸಲಿ.
– ಎಲ್.ಬಿ.ಪೆರ್ನಾಜೆ, ಪುತ್ತೂರು

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!