Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

“ಶ್ರೀ ವೆಂಕಟೇಶ್ವರ” ಅಷ್ಟೋತ್ತರದ ಮಹತ್ವ – ಗಿರೀಶ್ ಶರ್ಮಾ

Published

on

“ಶ್ರಾವಣ ” ಶನಿವಾರ” ವಿಶೇಷ…

“ಶ್ರೀ ವೆಂಕಟೇಶ್ವರ” ಅಷ್ಟೋತ್ತರ” ದ ಮಹತ್ವಗಳು…
(C.L. ರಾಮ್ ಕುಮಾರ್ ಗುರುಗಳು, ದೇವರ ಪ್ರಸಾದಗಳು ಪುಸ್ತಕದ ಲೇಖಕರು ಇವರ ತಾರಾದರ್ಶಿನಿ ಅಂಕಣದ ಸಂಗ್ರಹ)

“ಶ್ರೀ ವೆಂಕಟೇಶ್ವರ ಅಷ್ಟೋತ್ತರ ಪಾರಾಯಣದಿಂದ ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ..
ಶ್ರೀ ವೆಂಕಟೇಶ್ವರರ ಮೂಲಸ್ಥಾನ ” ಭೂ ವೈಕುಂಠ ” ಎನ್ನುವ ಸಪ್ತಗಿರಿಯಲ್ಲಿರುವ “ತಿರುಮಲೆ” ಯಲ್ಲಿ ಇದೆ..
ಇದು ಪರಮ ಪವಿತ್ರ ಕ್ಷೇತ್ರ. ಸ್ವಾಮಿಯನ್ನು ತ್ರಿಕಾಲದಲ್ಲಿ ಬಹಳ ಭಕ್ತಿಯಿಂದ ಆರಾಧಿಸುತ್ತಾರೆ..
ಸ್ವಾಮಿಯನ್ನು ಭಕ್ತರು ಹಲವಾರು ಹೆಸರುಗಳಿಂದ ಕರೆಯುತ್ತಾರೆ..
ಉದಾಹರಣೆಗೆ : ಶ್ರೀ ಶ್ರೀನಿವಾಸ, ವೆಂಕಟರಮಣಸ್ವಾಮಿ, ಶ್ರೀ ವೆಂಕಟೇಶ್ವರ , ಶ್ರೀ ತಿರುವೆಂಕಟಾಚಲ ಸ್ವಾಮಿ, ಸಪ್ತಗಿರಿವಾಸ..ಇತ್ಯಾದಿ ಹೀಗೆ ನಾನಾ ಹೆಸರುಗಳಿಂದ ಸ್ವಾಮಿಯನ್ನು ಭಕ್ತಿಯಿಂದ ಕರೆಯುತ್ತಾರೆ…

೧. ಶ್ರೀ ವೆಂಕಟೇಶ್ವರ ಪೂಜೆಯನ್ನು ಪ್ರತಿದಿವಸ ಬೆಳಗ್ಗೆ 5 ಘಂಟೆಯಿಂದ 6 ಘಂಟೆಯ ಒಳಗೆ ಮನೆಯಲ್ಲಿ ಓದಿ ಪೂಜೆಯನ್ನು ಮಾಡಿದರೆ ಆ ಮನೆಯಲ್ಲಿ ಎಂದೂ ದಾರಿದ್ರ್ಯ ಬರುವುದಿಲ್ಲ..

೨. ಶ್ರೀ ವೆಂಕಟೇಶ್ವರ ಸುಪ್ರಭಾತವನ್ನು ಪ್ರತಿದಿವಸ ಬೆಳಗ್ಗೆ 5 ರಿಂದ 6 ಘಂಟೆಯೊಳಗೆ ಓದಿದರೆ, ಓದುವವರು ಹಾಗೂ ಕೇಳುವವರು ಬಹಳ ಬೇಗ ಸಾಲಧ ಬಾಧೆಯಿಂದ ನಿವಾರಣೆಯಾಗಿ ಶ್ರೀಮಂತರಾಗುತ್ತಾರೆ..!

೩. ಶ್ರೀ ವೆಂಕಟೇಶ್ವರನ ಪೂಜೆ, ಅಷ್ಟೋತ್ತರ, ಸುಪ್ರಭಾತ..ಇತ್ಯಾದಿ
ಪ್ರತಿದಿವ ಓದುವವರು ಹಾಗೂ ಕೇಳುವವರು “ಶುಕ್ರವಾರ”ದ ದಿವಸ ” ಶ್ರೀ ಮಹಾಲಕ್ಷ್ಮಿ” ಪೂಜೆಯನ್ನು ಮಾಡಿ, ಅಷ್ಟೋತ್ತರ, ಸುಪ್ರಭಾತ ಇತ್ಯಾದಿ, ಹೀಗೆ ಲಕ್ಷ್ಮೀವೆಂಕಟೇಶ್ವರ ಇಬ್ಬರನ್ನೂ ಪೂಜಸಿದರೆ , ಬಹಳ ಬೇಗ ಶ್ರೀಲಕ್ಷ್ಮೀವೆಂಕಟೇಶ್ವರರ ಅನುಗ್ರಹವಾಗಿ, ಸರ್ವ ದಾರಿದ್ರ್ಯ ನಿವಾರಣೆಯಾಗಿ ಲಕ್ಷ್ಮೀಕಟಾಕ್ಷವಾಗುತ್ತದೆ..

೪. ಶ್ರೀ ವೆಂಕಟೇಶ್ವರ ಅಷ್ಟೋತ್ತರವನ್ನು ಪೂಜಾ ಕಾಲದಲ್ಲಿ ಓದುತ್ತಾ ಅಥವಾ ಕೇಳುತ್ತಾ “ಸ್ವಾಮಿಗೆ” ತುಳಸೀದಳದ ಹಾರವನ್ನು ಹಾಕಿ ಪೂಜಿಸಿದರೆ ನಿಮಗೆ ಯಾವುದೇ ಕಾರಣಕ್ಕೂ ಧನದಾರಿದ್ರ್ಯ ಬರದೆ ಅಧಿಕವಾದ ಧನಪ್ರಾಪ್ತಿಯಾಗುತ್ತದೆ..

೫. ಶ್ರೀ ವೆಂಕಟೇಶ್ವರ ಸ್ವಾಮಿಗೆ ಅಷ್ಟೋತ್ತರವನ್ನು ಹೇಳುತ್ತಾ ಬಿಲ್ವಪತ್ರೆಯಿಂದ ಪೂಜಿಸಿದರೆ, ಸಕಲ ವಿಧವಾದ ಅಪಮೃತ್ಯು ನಿವಾರಣೆ ಮತ್ತು ಅಷ್ಟದಾರಿದ್ರ್ಯಗಳ ನಿವಾರಣೆಯಾಗುತ್ತದೆ…

೬. ಯಾರು ಶ್ರೀವೆಂಕಟೇಶ್ವರ ಸ್ವಾಮಿಗೆ “ಲಾಡುವನ್ನು” ನೈವೇದ್ಯ ಮಾಡಿ, “ಲಾಡುವನ್ನು” ಬ್ರಾಹ್ಮಣ ದಂಪತಿಗಳಿಗೆ “ಸಂಕಲ್ಪ” ಸಮೇತ ದಾನ ಮಾಡಿ, ಪೂಜೆ ಮಾಡಿದವರ ಮನೆಯವರೆಲ್ಲರೂ ಪ್ರಸಾದ ತಿಂದರೆ , ಸಾಲಗಾರರ ತೊಂದರೆ ಕಡಿಮೆಯಾಗುತ್ತದೆ ಹಾಗೂ ಬರಬೇಕಾದ ಹಣವು ಯಾವುದೇ ತಕರಾರಿಲ್ಲದೆ ಹಣ ಬರುತ್ತದೆ ‌..

೭. “ಶ್ರೀ ವೆಂಕಟೇಶ್ವರ ” ಸ್ವಾಮಿಯ ಅಷ್ಟೋತ್ತರವನ್ನು ಹೇಳುತ್ತಾ ತುಳಸಿದಳದಿಂದ ಅರ್ಚಿಸಿ ನೈವೇದ್ಯಕ್ಕೆ “ಹಾಲು”, ಕಲ್ಲುಸಕ್ಕರೆ, ಅವಲಕ್ಕಿ, ಬೆಲ್ಲ, ಹಣ್ಣು ಇಟ್ಟು ನಿವೇದನೆ ಮಾಡಿ, ಪ್ರಸಾದವನ್ನು ವೃದ್ಧ ಬ್ರಾಹ್ಮಣ ದಂಪತಿಗಳಿಗೆ ಸಂಕಲ್ಪ ಸಮೇತ ದಾನ ಮಾಡಿ ಪ್ರಸಾದವನ್ನು ಹಂಚಿ ತಿಂದರೆ , ಎಷ್ಟೇ ಬಡವರಾದರೂ ಸಹ ಶ್ರೀಮಂತರಾಗಿ ಧನಕನಕ ವಸ್ತು ವಾಹನಗಳು ಅತೀ ಶೀಘ್ರದಲ್ಲಿ ಪ್ರಾಪ್ತಿಯಾಗುತ್ತದೆ..

೮. ಯಾರು ಶ್ರೀ ವೆಂಕಟೇಶ್ವರ ಹಾಗೂ ಶ್ರೀ ಮಹಾಲಕ್ಷ್ಮಿ ಪೂಜೆಯನ್ನು ಶುಕ್ರವಾರ ಮಾಡುವವರು ” ನೈವೇದ್ಯಕ್ಕೆ “ಹಣ್ಣು, ಹಾಲು, ಉಪಯೋಗಿಸಿ..
ಕಾಯಿ ಒಡೆಯುವುದು ಬೇಡ..!
ಸಂಕಲ್ಪಿತ ಕೆಲಸಗಳು ಹಣ್ಣಾಗಲಿ ..

” ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ಪೂರ್ಣ ಅನುಗ್ರಹ ಪ್ರಸಾದ ಸಿದ್ಧಿರಸ್ತು..”

ಶುಭವಾಗಲಿ..

ಸಂಗ್ರಹ
@ಗಿರೀಶ್ ಶರ್ಮ ತುಮಕೂರು@
WhatsApp : 9008026083
girish1989sharma@gmail.com

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!