Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

ಗೌರೀ ಹಬ್ಬ ಅಂದರೇನೆ “ಮೊರದ ಬಾಗಿನ” ತುಂಬಾ ವಿಶೇಷ – ಗಿರೀಶ್ ಶರ್ಮ

Published

on

ಬಂಧುಗಳೇ..
ಎಲ್ಲರಿಗೂ “ಶ್ರೀ ಸ್ವರ್ಣಗೌರೀ ಮತ್ತು ವರಸಿದ್ಧಿ ವಿನಾಯಕ ಹಬ್ಬದ ಶುಭಾಷಯಗಳು ‌..!
(ಗೌರೀ ಹಬ್ಬದ ವಿಶೇಷ ವಿಚಾರಗಳನ್ನು C.L. ರಾಮ್ ಕುಮಾರ್ ಗುರುಗಳ ತಾರಾದರ್ಶಿನಿ ಅಂಕಣ ಮತ್ತು ವ್ರತಮಂಜೂಷ ಗ್ರಂಥದಿಂದ ಸಂಗ್ರಹ ಮಾಡಲಾಗಿದೆ)

ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಹಬ್ಬ, ಹರಿದಿನ , ಆಚರಣೆಗಳು ತ‌ನ್ನದೇ ಆದ ವಿಶೇಷ ಮಹತ್ವವನ್ನು ಹೊಂದಿವೆ…
ನಮ್ಮ ಹಿರಿಯರು ಏನೇ ಮಾಡಿದ್ದರೂ ಅದಕ್ಕೆ ಒಂದು ನಿಶ್ಚಿತವಾದ ಅರ್ಥವಿದೆ..
ಆದರೆ ನಮಗೆ ತಿಳಿದಿಲ್ಲವಷ್ಟೇ..!

ವಿಶೇಷವಾಗಿ ಸ್ತ್ರೀಯರಿಗೆ ಹಬ್ಬಗಳು ಅಂದರೇನೆ ವಿಶೇಷ..!
ಗೌರೀ ಹಬ್ಬ, ಮಂಗಳಗೌರೀ ಹಬ್ಬ, ಸಂಕ್ರಾಂತಿ ಹಬ್ಬ.. ಇತ್ಯಾದಿ

ಈಗ ಗೌರೀ ಹಬ್ಬ ಅದರ ವಿಚಾರವನ್ನು ಸ್ವಲ್ಪ ವಿಮರ್ಶಿಸೋಣ..

” ಗೌರೀ ಹಬ್ಬ ಅಂದರೇನೆ “ಮೊರದ ಬಾಗಿನ” ತುಂಬಾ ವಿಶೇಷ..!
ತುಂಬಾ ಹಬ್ಬಗಳಲ್ಲಿ, ವ್ರತಗಳಲ್ಲಿ, ಹೂವಿಳ್ಯದಲ್ಲಿ ಮೊರದ ಬಾಗಿನವನ್ನು ದಾನ ಮಾಡುವುದು ನೋಡಿದ್ದೇವೆ..
ಆ ಮೊರದ ಬಾಗಿನದಲ್ಲಿ ಹಲವಾರು ತರಹದ ಪದಾರ್ಥಗಳನ್ನು ಹಾಕಿರುತ್ತಾರೆ..
ಆ ಪದಾರ್ಥದ ವಿಶೇಷ ಏನು, ಅದನ್ನು ದಾನ ಮಾಡುವುದರಿಂದ ಫಲವೇನು..?
ಈ ವಿಚಾರವನ್ನು ತಿಳೊಯೋಣ..

ಬಂಧುಗಳೇ, ಗೌರೀ ಪೂಜೆಯನ್ನು ಮಾಡುವುದರಿಂದ ಸುಮಂಗಲಿತನ ವೃದ್ಧಿಸುತ್ತದೆ, ಭೂಮಿ , ಮನೆ, ವಿಚಾರಗಳಲ್ಲಿ ಅಭಿವೃದ್ಧಿ ಆಗಿ , ಸಕಲ ದೋಷಗಳೂ ನಿವಾರಣೆಯಾಗುತ್ತದೆ..
ಧನ, ಕನಕ, ವಸ್ತು ವಾಹನಾದಿಗಳು ಅಭಿವೃದ್ಧಿ ಆಗುತ್ತವೆ..!
ಗೌರೀ ಪೂಜೆಗೆ ಮುಂಚೆ ಮಾಡುವ “ವರುಣ ಪೂಜೆ” ಮತ್ತು ಗಂಗಾ ಪೂಜೆಯಿಂದ ಋಣಮುಕ್ತರಾಗಿ, ಸುಖ , ಶಾಂತಿ ನೆಮ್ಮದಿಯಿಂದ ಬಾಳುತ್ತಾರೆ..!

ಈ ಪೂಜೆಯ ನಂತರ ಗೌರೀ ಪೂಜೆ ಮಾಡಿ “ಮೊರದ ಬಾಗಿನ” ವನ್ನು ದಾನ ಮಾಡುತ್ತಾರೆ..

” ಮೊರದ ಬಾಗಿನ” ಕೊಡುವುದರಿಂದ ಸ್ವರ್ಣಗೌರೀ ದೇವಿ ತೃಪ್ತರಾಗುತ್ತಾರೆ.., “ಲಕ್ಷ್ಮೀನಾರಾಯಣ” ರ ಪೂರ್ಣ ಅನುಗ್ರಹವಾಗುತ್ತದೆ..

“ಮೊರದ ಬಾಗಿನ” ದಾನ ಮಾಡುವುದರಿಂದ ..
೧. ಕುಜದೋಷ ನಿವಾರಣೆಯಾಗುತ್ತದೆ..
೨. ದಾಂಪತ್ಯದಲ್ಲಿನ ವಿರಸಗಳು ದೂರವಾಗುತ್ತವೆ..
೩. ಸ್ತ್ರೀ ಶಾಪ ನಿವಾರಣೆಯಾಗುತ್ತದೆ..
೪. ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
೫. ಸಂಸಾರವನ್ನು ನೆಮ್ಮದಿಯಿಂದ ಇದ್ದು ಉತ್ತರೋತ್ತರ ಅಭಿವೃದ್ಧಿ ಆಗುತ್ತದೆ.. ಇತ್ಯಾದಿ

“ಮೊರದ ಬಾಗಿಣ” ದಲ್ಲಿ “ನಾರಾಯಣ” ರ ಅಂಶವಿರುತ್ತದೆ..!
ಎಲ್ಲಿ ನಾರಾಯಣ ದೇವರಿರುತ್ತಾರೋ ಅಲ್ಲಿ ಲಕ್ಷ್ಮಿಯ ಸಾನಿಧ್ಯವಿರುತ್ತದೆ..!

ಹಾಗೆಯೇ ಮೊರದ ಬಾಗಿಣದಲ್ಲಿ “ಬಿದಿರಿನ ರೂಪದ ನಾರಾಯಣ” ದೇವರು ಇದ್ದಾಗ ಅದರಲ್ಲಿ “ಮಂಗಳ ದ್ರವ್ಯ” ರೂಪದಲ್ಲಿ “ಶ್ರೀ ಮಹಾಲಕ್ಷ್ಮಿ” ಯೂ ಇರುತ್ತಾರೆ..!!
ಆದ ಕಾರಣವೇ ಮೊರದ ಬಾಗಿಣ “ಲಕ್ಷ್ಮೀನಾರಾಯಣ” ರ ಸಂಕೇತವಾಯಿತು..!

“ಎಲ್ಲಿ ಶ್ರೀ ಹರಿ ನಾರಾಯಣರ ಪೂಜೆ ನಡೆದರೂ ಅಲ್ಲಿ ಶ್ರೀ ಲಕ್ಷ್ಮೀ ಸಾನಿಧ್ಯವಿರುತ್ತದೆ..
ಎಲ್ಲಿ ಲಕ್ಷ್ಮೀ ಪೂಜೆ ನಡೆದರೂ ಅಲ್ಲಿ ಶ್ರೀಹರಿಯು ಇರುತ್ತಾರೆ”..!
ಆದಕಾರಣ
” ಲಕ್ಷ್ಮಿಯನ್ನು ಬಿಟ್ಟು ನಾರಾಯಣರನ್ನು ಅಥವಾ ನಾರಾಯಣರನ್ನು ಬಿಟ್ಟು ಲಕ್ಚ್ಮಿಯನ್ನೂ ಪೂಜಿಸಬಾರದು..!”

ಇಲ್ಲಿ ಬಿದಿರಿನಲ್ಲಿ ನಾರಾಯಣ ರೂಪವಿರುತ್ತದೆ..

“ಯಥಾವೇಣು ಫಲಂ ದೃಷ್ಟಾ
ತುಷ್ಯತೇ ಮಧುಸೂದನ ‌‌..|
ತಥಾ ಮೇಸ್ತು ಶುಭಂ ಸರ್ವಂ
ವೇಣು ಪಾತ್ರಂ ಪ್ರಧಾನತಃ .||”

ಮೊರದ ಬಾಗಿಣಕ್ಕೆ ಸಂಸ್ಕೃತದಲ್ಲಿ “ವೇಣುಪಾತ್ರ” ಎಂದು ಕರೆಯುತ್ತಾರೆ..
***
ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು..

೧. ಅರಿಸಿನ : ಗೌರಿದೇವೀ.

೨. ಕುಂಕುಮ : ಮಹಾಲಕ್ಷ್ಮೀ

೩. ಸಿಂಧೂರ : ಸರಸ್ವತೀ

೪. ಕನ್ನಡಿ : ರೂಪಲಕ್ಷ್ಮೀ.

೫. ಬಾಚಣಿಗೆ : ಶೃಂಗಾರಲಕ್ಷ್ಮೀ.

೬. ಕಾಡಿಗೆ : ಲಜ್ಜಾಲಕ್ಷ್ಮೀ.

೭. ಅಕ್ಕಿ : ಶ್ರೀ ಲಕ್ಷ್ಮೀ.

೮. ತೊಗರಿಬೇಳೆ : ವರಲಕ್ಷ್ಮೀ.

೯. ಉದ್ದಿನಬೇಳೆ : ಸಿದ್ದಲಕ್ಷ್ಮೀ.

೧೦. ತೆಂಗಿನಕಾಯಿ : ಸಂತಾನಲಕ್ಷ್ಮೀ.

೧೧. ವೀಳ್ಯದ ಎಲೆ : ಧನಲಕ್ಷ್ಮೀ.

೧೨. ಅಡಿಕೆ : ಇಷ್ಟಲಕ್ಷ್ಮೀ.

೧೩. ಫಲ(ಹಣ್ಣು) : ಜ್ಞಾನಲಕ್ಷ್ಮೀ.

೧೪. ಬೆಲ್ಲ : ರಸಲಕ್ಷ್ಮೀ.

೧೫. ವಸ್ತ್ರ : ವಸ್ತ್ರಲಕ್ಷ್ಮೀ.

೧೬. ಹೆಸರುಬೇಳೆ : ವಿದ್ಯಾಲಕ್ಷ್ಮೀ.

ಮುತೈದೆ ದೇವತೆಯರು೧೬ ಜನರು. ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..

ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..

ಸೀರೆ ಸೆರಗಿನಲ್ಲಿ ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ..

ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ “ವೇಣುಪಾತ್ರ” ಎಂದು ಕರೆಯುತ್ತಾರೆ..

ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..

ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,

ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ ೧೬ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ..

ಈ ೧೬ ದೇವತೆಗಳು ನಿತ್ಯಸುಮಂಗಲಿಯರು..

ಈ ೧೬ ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು..

ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ..

೧೬ ಅರಿಸಿನ ದಾರ, ೧೬ ಗಂಟುಗಳು, ೧೬ ಬಾಗಿನ, ೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ..

ಮೊರದ ಬಾಗಿಣದಲ್ಲಿ ಯಾವುದಾದರೊಂದು ಪದಾರ್ಥ ನಾವು ಕೊಡದಿದ್ದರೆ ಅದು ನ್ಯೂನವಾಗುವುದರಿಂದ ಆ ಪದಾರ್ಥದ ಫಲ ಬರುವುದಿಲ್ಲ ಮತ್ತು ಪೂಜೆಯ ಫಲ ಪೂರ್ಣವಾಗಿ ದೊರಕುವುದಿಲ್ಲ..!!

ಬರೀ ಕೈಯಲ್ಲಿ ಹಿಡಿದು ಮೊರದ ಬಾಗಿನ ಕೊಡಬಾರದು..!

ಆ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣ ಗೌರೀ ದೇವಿಯ ಹಬ್ಬದಲ್ಲಿ ಮಾಡುವ ಹೋರಾ ಪೂಜೆ ಎಂದರೆ ದಾರಕ್ಕೆ ಪೂಜೆಯನ್ನು ಮಾಡುವ ಮುಂಚೆ,
16 ಅರಿಶಿನ ದಾರ,16 ಗಂಟುಗಳು
16 ಬಾಗಿನ
16 ಎಳೆ ಗೆಜ್ಜೆ ವಸ್ತ್ರ
ಪೂಜಿಸಬೇಕೆಂದು ಧರ್ಮಶಾಸ್ತ್ರಗಳು ಹಾಗೂ ವ್ರತರತ್ನಮಾಲಾ‌ ಗ್ರಂಥದಲ್ಲಿ ತಿಳಿಸಿದ್ದಾರೆ..!!!

16 ಗೆಜ್ಜೆ ವಸ್ತ್ರಗಳು : 16 ದೇವತೆಗಳ ಪ್ರೀತ್ಯರ್ಥವಾಗಿ :
” ಶ್ರೀಯೈ, ಲಕ್ಷ್ಮೈ , ವರದಾಯೈ, ವಿಷ್ಣುಪತ್ನೈ, ವಸುಪ್ರದಾ, ಹಿರಣ್ಯರೂಪ, ರಜತಸ್ರಜಾ, ಸ್ವರ್ಣಪ್ರಭಾ, ಸ್ವರ್ಣಪ್ರಾಕಾರ, ಪದ್ಮವಾಸಿನ್ಯೈ, ಪದ್ಮಹಸ್ತಾ, ಪದ್ಮಪ್ರಿಯಾ, ಮುಕ್ತಾಲಂಕಾರಿಣಿ, ಸೂರ್ಯ, ಚಂದ್ರ, ಬಿಲ್ವಪ್ರಿಯಾಯೈ…..
**..

೧೬ ಎಳೆಗಳು : ಈಶ್ವರೈ, ಭುಕ್ತೈ, ಮುಕ್ತೈ, ವಿಭೂತ್ಯೈ, ಋದ್ಧೈ, ಸಮೃದ್ಧ್ಯೈ , ಕೃಷ್ಣೈ, ಪುಷ್ಟೈ, ಧನದಾಯೈ, ಧನೇಶ್ಬರೈ, ಶ್ರದ್ಧಾಯೈ , ಭೋಗಿನ್ಯೈ, ಭೋಗಾದಯೈ, ಧಾತ್ರೈ, ವಿಧಾತ್ರೈ…..
*****

೧೬ ಬಾಗಿಣಗಳು ತಾಯಿಯರು :: ಕಾಳಿ, ತಾರಾ, ಮಹಾವಿದ್ಯಾ, ಷೋಡಶೀ, ಭುವನೇಶ್ವರಿ, ಭೈರವಿ, ಛಿನ್ನಮಸ್ತಾ, ವಿದ್ಯಾ, ಧೂಮಾವತಿ, ಬಗಳಾ, ಸಿದ್ಧವಿದ್ಯಾ, ಮಾತಂಗೀ, ಕಮಲಾ…
****

ಹೀಗೆ ಹದಿನಾರು ದಾನಗಳು ಹದಿನಾರು ದೇವತೆಗಳ ಪ್ರೀತ್ಯರ್ಥವಾಗಿ ಹಾಗೂ ತೃಪ್ತಿಗಾಗಿ ದಾನ ಮಾಡಿದರೆ, ಸಕಲ ದೇವತೆಗಳ ಅನುಗ್ರಹ ದೊರೆಯುತ್ತದೆ..
*******

ದಾನಗಳು ಮತ್ತು ಫಲಗಳು..

೧. ಅರಿಸಿನ ದಾನ : ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..

ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..

ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

೨. ಕುಂಕುಮ ದಾನ : ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..

ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..

ದೃಷ್ಟಿದೋಷ ನಿವಾರಣೆ ಆಗುತ್ತದೆ..

ಕೋಪ, ಹಠ,ಕಮ್ಮಿ ಆಗುತ್ತದೆ..

೩. ಸಿಂಧೂರ ದಾನ ; ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..

ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

೪. ಕನ್ನಡೀ(ರೂಪಲಕ್ಷ್ಮೀ) : ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..

೫. ಬಾಚಣಿಗೆ : ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..

೬. ಕಾಡಿಗೆ : ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..

ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌.

 

ಅಕ್ಕಿ : ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌

ಆರೋಗ್ಯಭಾಗ್ಯವಾಗುತ್ತದೆ..

ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..

೮. ತೊಗರಿಬೇಳೆ : ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ.‌.

ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ..

ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..

ರಕ್ತದೊತ್ತಡ (B.P) normal ಆಗಿ ಆರೋಗ್ಯವಂತರಾಗುತ್ತಾರೆ..

ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..

೯. ಉದ್ದಿನ ಬೇಳೆ : ಪಿತೃಶಾಪ ನಿವಾರಣೆಯಾಗುತ್ತದೆ..

ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..

ಅಪಮೃತ್ಯುಗಳು ನಿವಾರಣೆಯಾಗುತ್ತದೆ..

ಅಗೋಚರ ರೋಗಗಳು ನಿವಾರಣೆಯಾಗುತ್ತದೆ..

ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..

೧೦. ತೆಂಗಿನಕಾಯಿ : ಇಷ್ಟಾರ್ಥಸಿದ್ಧಿಯಾಗುತ್ತದೆ.. ,

ತೆಂಗಿನಕಾಯಿ ಗೆ “ಇಷ್ಟಾರ್ಥ ಪ್ರದಾಯಿನಿ” ಅಂತನೂ ಹೆಸರಿದೆ..

ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..

ಕಾರ್ಯಗಳು ಪೂರ್ಣಫಲ ಕೊಡಬೆಕಾದರೆ “. ತೆಂಗಿನಕಾಯಿ (ಪೂರ್ಣಫಲ). ನೈವೇದ್ಯ” ಮಾಡಲೇಬೇಕು..!
ಸರ್ವಕಾರ್ಯ ವಿಜಯವಾಗುತ್ತದೆ..
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..

೧೧. ವೀಳ್ಯದೆಲೆ : ವೀಳ್ಯದೆಲೆಗೆ ದೇವತೆ “ಧನಲಕ್ಷ್ಮೀ”.!

ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..
ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌

೧೨. ಅಡಿಕೆ : ಅಡಿಕೆಗೆ ಸಂಸ್ಕೃತದಲ್ಲಿ ” ಪೂಗೀಫಲ” ಎಂದು ಹೆಸರು..

ಅಡಿಕೆಗೆ ಅಭಿಮಾನ ದೇವತೆ “ಇಷ್ಟಲಕ್ಷ್ಮೀ”.!

ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ..

ಬರೀ ಅಡಿಕೆಯನ್ನು ತಿಂದರೆ ” ಬ್ರಹ್ಮಹತ್ಯಾ” ದೋಷ ಬರುವುದು.

ಆದ್ದರಿಂದ ಬರೀ ಅಡಿಕೆ ತಿನ್ನಬಾರದು..

೧೩. ಫಲದಾನ : ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ..

ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ.‌.

ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ..

೧೪. ಬೆಲ್ಲ (ರಸಲಕ್ಷ್ಮೀ) : ಬೆಲ್ಲದ ಅಭಿಮಾನ ದೇವತೆ “ರಸಲಕ್ಷ್ಮೀ”..

ಬೆಲ್ಲದಲ್ಲಿ ” ಬ್ರಹ್ಮದೇವರು” , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ..

ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ..

ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ..

ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ..

೧೫. “ವಸ್ತ್ರಲಕ್ಷ್ಮೀ” : ಸುಮಂಗಲಿಯರು ಪ್ರತ್ಯಕ್ಷ “ಸ್ತ್ರೀದೇವತೆ” ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ..

ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಬೇಕು..

ಹೀಗೆ ಮಾಡುವದರಿಂದ “ವಸ್ತ್ರ” ದಾರಿದ್ರ್ಯ ನಿವಾರಣೆಯಾಗುತ್ತದೆ..

ಕುಲದೇವತೆ ತೃಪ್ತಿಯಾಗುತ್ತದೆ..

ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ..

ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ..

೧೬. “ಹೆಸರುಬೇಳೆ” : ವಿದ್ಯಾಲಕ್ಷ್ಮೀ –

ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಸಂತೋಷವಾಗುತ್ತದೆ..

ವಿದ್ಯೆ ಎಂದರೆ “ಸರಸ್ವತೀ”, ಲಕ್ಷ್ಮೀ ಎಂದರೆ ” ಶ್ರೀ ಮಹಾಲಕ್ಷ್ಮೀ” ಎಂದು ಅರ್ಥ..

ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ..

ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ..

ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ..

ದೇವಿಗೆ “ಹೆಸರುಬೇಳೆ” ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ..

ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ.‌

Gastric, ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತದೆ…

ಸಂಗ್ರಹ

ಗಿರೀಶ್ ಶರ್ಮ ತುಮಕೂರು
girish1989sharma@gmail.com
WhatsApp : 9008026083

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!