Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ಗೌರಿ ದೇವಿ ಮತ್ತು ಗೌರೀ ಅಷ್ಟೋತ್ತರದ ಉಪಯುಕ್ತ ಮಾಹಿತಿ

Published

on

ಗೌರಿ ದೇವಿ ಮತ್ತು ಗೌರೀ ಅಷ್ಟೋತ್ತರದ ಮಾಹಿತಿಗಳು..
(C.L. ರಾಮ್ ಕುಮಾರ್ ಗುರುಗಳ ತಾರಾದರ್ಶಿನಿ ಅಂಕಣದ ಸಂಗ್ರಹ)

ತುಂಬಾ ತುಂಬಾ ವಿಶೇಷವಾದ , ಅಪೂರ್ವವಾದ , ಸ್ತ್ರೀಯರಿಗೆ ಇಷ್ಟವಾದ ಹಬ್ಬ “ಗೌರೀ” ಹಬ್ಬ..!

ಸುಮಂಗಲಿಯರು ಸುಮಂಗಳವನ್ನು ಅಭಿವೃದ್ಧಿ ಮಾಡಿಕೊಳ್ಳಲು, ತನ್ನ ಪತಿಗೆ ಶ್ರೇಯಸ್ಸನ್ನು ಕೋರಲು ಅನೇಕ ವಿಧವಾದ ಪೂಜೆಗಳನ್ನು ಮಾಡುತ್ತಾರೆ..!
ಸಕಲ ವಿಧವಾದ ಶ್ರೇಯಸ್ಸನ್ನು, ಸೌಭಾಗ್ಯವನ್ನು ಸಂಪತ್ತನ್ನೂ, ಶೀಘ್ರವಾಗಿ ಕೊಡುವ ಪೂಜೆಯೇ “ಗೌರೀ” ಪೂಜೆ ಹೆಚ್ಚಾಗಿ ಮಾಡುತ್ತಾರೆ..
ಗೌರೀ ಪೂಜೆಯಲ್ಲಿ ಒಟ್ಟು ೧೬ ತರಹದ ಗೌರಿಯರ ಪೂಜೆ ಇದೆ.. ಇದಕ್ಕೆ “ಷೋಡಶಗೌರಿ” ಪೂಜೆ ಎಂದು ಕರೆಯುತ್ತಾರೆ..!
ಅದರಲ್ಲಿ ಮುಖ್ಯವಾಗಿ ಮಂಗಳಗೌರೀ, ನಿತ್ಯ ಗೌರೀ, ಹರಿದ್ರಾಗೌರೀ..ಇತ್ಯಾದಿ

ಮಂಗಳಗೌರೀ : ಯಾರ ಮನೆಯಲ್ಲಿ “ಸ್ತ್ರೀ ಶಾಪಗಳು, ಸ್ತ್ರೀ ದೇವರ ಶಾಪಗಳು, ಸುಮಂಗಲೀ ಯೋಗ ಕಡಿಮೆ ಇರುವವರು, ಯಾರ ಮನೆಯಲ್ಲಿ ಮಂಗಳ ಕಾರ್ಯಗಳು ನಿಧಾನವಾಗಿ ನಡೆಯುತ್ತಿದ್ದರೆ , ಶುಭ ಕಾರ್ಯಗಳ ಸಮಯದಲ್ಲಿ ಹೆಚ್ಚಾಗಿ ಅಶುಭವಾರ್ತೆ ಬರುತ್ತಿದ್ದರೆ ಅಥವಾ ಅಶುಭ ನಡೆದರೆ, ಮನೆಯಲ್ಲಿ ಶಾಸ್ತ್ರೋಕ್ತವಾದ “ಶ್ರೀ ಮಂಗಳಗೌರೀ” ಪೂಜೆ ಮಾಡಿದರೆ ಸಕಲದೋಷಗಳು ನಿವಾರಣೆಯಾಗುತ್ತದೆ..

೨. ನಿತ್ಯಗೌರೀ : ಯಾರ ಮನೆಯಲ್ಲಿ ಆದಾಯಕ್ಕಿಂತ ಖರ್ಚು ಜಾಸ್ತಿ ಇದ್ದರೆ,
ಯಾರ ಮನೆಯು ನಿತ್ಯದಾರಿದ್ರ್ಯದಿಂದ ಇದ್ದರೆ,
ಯಾರ ಮನೆಯಲ್ಲಿ ಸಾಲದಭಾದೆ ತುಂಬಾ ಇದ್ದರೆ,
ಯಾರ ಮನೆಯಲ್ಲಿ ಎಷ್ಟು ಸಂಪಾದಿಸಿದರೂ ಶಾಂತಿ ಮತ್ತು ಸಂತೋಷ ಇಲ್ಲದೇ ಇದ್ದರೆ,
ಅನಾರೋಗ್ಯದಿಂದ ನರಳುತ್ತಿದ್ದರೆ…ಇತ್ಯಾದಿ
ಮನೆಯಲ್ಲಿ ಶಾಸ್ತ್ರೋಕ್ತವಾದ “ನಿತ್ಯಗೌರೀ” ಪೂಜೆಯನ್ನು ಮಾಡಿದರೆ ಸಮಸ್ತದೋಷಗಳು ನಿವಾರಣೆಯಾಗುತ್ತದೆ..

೩. ಹರಿದ್ರಾಗೌರೀ : ಯಾರ ಮನೆಯಲ್ಲಿ ಕೋಪ, ಅಶಾಂತಿ ಜಗಳ ನಡೆಯುತ್ತಿದ್ದರೆ,
ಯಾರ ಅಂಗಡಿಗಳಲ್ಲಿ ವ್ಯಾಪಾರ ಜಾಸ್ತಿ ಆಗಿಯೂ ಸಾಲ ಜಾಸ್ತಿ ಇದ್ದರೆ,
ಮನೆಗಳಿಗೆ ಹಾಗೂ ವ್ಯಾಪಾರದ ಅಂಗಡಿಗಳಿಗೆ ದೃಷ್ಟಿ ಆಗಿದ್ದರೆ,
ವ್ಯಾಪಾರ ಮಾಡುವಾಗ ಮೈ ಮುರಿಯುವುದು, , ನಿದ್ದೆ ಬರುವುದು, ಕೋಪಬರುವುದು, ಸರಕು ತಂದರೆ ಬಹಳ ದಿನವಾದರೂ ವ್ಯಾಪಾರವಾಗದೇ ಇರುವುದು,
ಸಾಲಕೊಟ್ಟು ಹಣ ಬರದೇ ಇದ್ದರೆ, ..ಇತ್ಯಾದಿ
“ಹರಿದ್ರಾಗೌರಿ” ಯನ್ನು ಶಾಸ್ತ್ರೋಕ್ತವಾಗಿ ಮನೆಯಲ್ಲಿ ಪೂಜಿಸಿದರೆ ಸಕಲ ದೋಷಗಳೂ ನಿವಾರಣೆಯಾಗುತ್ತದೆ..

****
“ಗೌರೀಹಬ್ಬ” ದ ವಿಶೇಷ ಒಬ್ಬಟ್ಟು..!

” ಯಾರು ದೇವಿ ಪೂಜೆ ಮಾಡಿ ಒಬ್ಬಟ್ಟು ನೀವೇದ್ಯ ಮಾಡಿ, ಪಾರಿಜಾತದ ಹೂವಿನ ಮಾಲೆ ಹಾಕುತ್ತಾರೋ..!
ಅವರಿಗೆ ಕುಜದೋಷ, ಕಾಳಸರ್ಪದೋಷ ನಿವಾರಣೆಯಾಗುತ್ತದೆ..
ನಮ್ಮ ಹಿರಿಯರು ಅದಕ್ಕೆ ಹಬ್ಬಗಳಲ್ಲಿ ಒಬ್ಬಟ್ಟಿಗೆ ತುಂಬಾ
ಕೊಟ್ಟಿದ್ದಿದ್ದು..

ಗೌರೀ ಹಬ್ಬದಲ್ಲಿ ದೇವಿಗೆ ನೈವೇದ್ಯ ಅಂತ ಮಾಡಿದ್ದು..
ತುಂಬಾ ವಿಶೇಷ ಅಲ್ವಾ.?

**

“ಶ್ರೀ ಗೌರೀ ಅಷ್ಟೋತ್ತರವನ್ನು ಓದಿದರೆ ಫಲ ಏನು..?

೧. ಯಾರ ಮನೆಯಲ್ಲಿ ವಿವಾಹಕ್ಕೆ ಮಕ್ಕಳಿದ್ದು, ಎಷ್ಟೇ ಗಂಡು/ಹೆಣ್ಣು ನೋಡಿದರೂ ಅನುಕೂಲವಾಗದೇ ಇದ್ದರೆ, ಅಂತಹವರ ಮನೆಯಲ್ಲಿ ಪ್ರತಿದಿನ ಗೌರೀಪೂಜೆ ಮಾಡಿ, ” ಗೌರೀ ಅಷ್ಟೋತ್ತರ ಓದಿದರೆ ಬಹಳ ಬೇಗ ಮದುವೆ ಕಾರ್ಯಗಳು ಅನುಕೂಲವಾಗುತ್ತದೆ..

೨. ಯಾರ ಮನೆಯಲ್ಲಿ ಗಂಡ/ಹೆಂಡತಿಗೆ ಗಂಡಾಂತರ ದೋಷವಿದ್ದರೆ, ಅಂತಹವರು ಮನೆಯಲ್ಲಿ ಪ್ರತಿದಿವಸ “ಶ್ರೀಗೌರೀ” ಪೂಜೆ ಮಾಡಿ , ಅಷ್ಟೋತ್ತರ ಪ್ರತಿದಿನ ಓದುತ್ತಾ ಬಂದರೆ, ಸಕಲ ವಿಧವಾದ ಅಪಮೃತ್ಯುಗಳು ನಿವಾರಣೆಯಾಗುತ್ತದೆ..

೩. ದೇಹ ಅಂದವಾಗಿದ್ದು ಮುಖವು ತೇಜೋಹೀನವಾಗಿದ್ದರೆ, ಅಥವಾ ಮುಖ ಲಕ್ಷಣವಿಲ್ಲದಿದ್ದರೆ, “ಶ್ರೀ ಗೌರೀ” ಅಷ್ಟೋತ್ತರ ಪ್ರತಿದಿನ ಓದಿ , ಅರಿಶಿನದ ನೀರಿನಿಂದ ಮುಖವನ್ನು ತೊಳೆದುಕೊಂಡರೆ, ಮುಖವು ಕಾಂತಿಯಿಂದ ಕೂಡಿ, ಗೌರವರ್ಣದಿಂದ ಸುಂದರ ಮುಖವಾಗುವುದು..

೪. ಸಂಗೀತಗಾರರು ಮನೆಯಲ್ಲಿ “ಶ್ರೀಗೌರೀ” ಹಾಗೂ “ಶ್ರೀ ಕಲ್ಯಾಣಿ” ರಾಗದಲ್ಲಿ ಗೌರೀದೇವಿಯನ್ನು ಸ್ತೋತ್ರ ಮಾಡಿದರೆ , ಮನೆಯಲ್ಲಿ “ಮಂಗಳಕಾರ್ಯಗಳು” ಹೆಚ್ಚಾಗಿ ನಡೆಯುತ್ತವೆ..!

ಶುಭವಾಗಲಿ..

ಸಂಗ್ರಹ
ಗಿರೀಶ್ ಶರ್ಮ ತುಮಕೂರು
WhatsApp : 9008026083
girish1989sharma@gmail.com

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!