Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ದಿನಕ್ಕೊಂದು ಸ್ತೋತ್ರ

ಶ್ರೀ ಮಹಾ ಮೃತ್ಯುಂಜಯ ಸ್ತೋತ್ರವನ್ನು ಹೇಗೆ ಮತ್ತು ಏಕೆ ಪಠಿಸಬೇಕು ? – ವಿವರಣೆ ಸಹಿತ – ಎಲ್.ಬಿ.ಪೆರ್ನಾಜೆ

Published

on

ಮಾರ್ಕಂಡೇಯ ಮುನಿಯಿಂದ ರಚಿತವಾದ ಸ್ತೋತ್ರ.

ಮಾರ್ಕಂಡೇಯ ಮುನಿಯ ಕುರಿತು ತಿಳಿಯಲು ಕೆಳಗೆ ಕ್ಲಿಕ್ ಮಾಡಿ

ಅಲ್ಪಾಯುಷಿಯಾಗಿ ಹುಟ್ಟಿದ ಮಾರ್ಕಂಡೇಯ ಚಿರಂಜೀವಿಯಾದ ಕಥೆ

 

ಕಾರ್ತಿಕ ಸೋಮವಾರವಾದ ಇಂದು ಈ ಉಪಯುಕ್ತ ವಿಚಾರವನ್ನು ಹಲವಾರು ಜನರ ಅಪೇಕ್ಷೆಯ ಮೇರೆಗೆ ಮತ್ತೊಮ್ಮೆ ಆಧ್ಯಾತ್ಮಿಕ ಮಾಧ್ಯಮ ಜ್ಞಾನದಲ್ಲಿ ತಿಳಿಯೋಣ

ಮಹಾಮೃತ್ಯುಂಜಯ ಸ್ತೋತ್ರವನ್ನು ಹೇಗೆ ಪಠಿಸಬೇಕು? ಪ್ರಯೋಜನವೇನು?

೧) ಶಿವನ ದೇಗುಲದಲ್ಲಿ ಅಥವ ಶಿವನ ಫೋಟೋ, ಪ್ರತಿಮೆ, ಲಿಂಗದ ಎದರು ಪಠಿಸಬೇಕು.

೨) ಶಿವನನ್ನು ಧ್ಯಾನ ಮಾಡುತ್ತ, ನಮ್ಮ ಹತ್ತಿರದಲ್ಲಿ ದೇವರ ಸಾನಿಧ್ಯವಿದೆ ಎಂದು ಅನುಸಂಧಾನಮಾಡುತ್ತ ಪಠಿಸಬೇಕು.

೩) ಇದರಿಂದ ಅಪಮೃತ್ಯು, ಕಾಲಮೃತ್ಯು, ವ್ಯಾಲಮೃತ್ಯು ಸೇರಿದಂತೆ ಎಲ್ಲಾ ರೀತಿಯ ಮೃತ್ಯು ಭಯ ನಾಶವಾಗುತ್ತದೆ.

೪) ಈ ಸ್ತೋತ್ರವನ್ನು ಪಠಿಸುವವನಿಗೆ ಅಗ್ನಿಯಿಂದಾಗುವ ಬಾಧೆಗಳು ತಾಗುವುದಿಲ್ಲ.

೫) ಕಳ್ಳಕಾಕರ ಭಯ ನಿವಾರಣೆ ಆಗುತ್ತದೆ

೬) ಗಂಭೀರ ರೋಗ ಮತ್ತು ಸಾವಿನ ಭಯಕಾಡುತ್ತಿದ್ದರೆ, ಈ ಸ್ತೋತ್ರವನ್ನು ಪಠಿಸುವುದರಿಂದ ನೆಮ್ಮದಿ ಸಿಗುತ್ತದೆ.

|| ಶ್ರೀ ಮಹಾ ಮೃತ್ಯುಂಜಯ ಸ್ತೋತ್ರಮ್ ||

ರುದ್ರಂ ಪಶುಪತಿಂ ಸ್ಥಾಣುಂ ನೀಲಕಂಠಂ ಉಮಾಪತಿಂ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ ||೧||

ಭಾವಾರ್ಥ:- ರುದ್ರನನ್ನನು, ಪಶುಪತಿಯನ್ನು, ಸ್ಥಿರರೂಪೀಶಿವನನ್ನು, ನೀಲಕಂಠನನ್ನು, ಉಮಾಪತಿಯನ್ನು, ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ. ಮೃತ್ಯು ನನಗೇನು ಮಾಡಲು ಸಾಧ್ಯ?

ಕಾಲಕಂಠಂ ಕಾಲಮೂರ್ತಿಂ ಕಾಲಾಗ್ನಿಂ ಕಾಲನಾಶನಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ ||೨||

ಭಾವಾರ್ಥ:-ಕಾಲಕಂಠನನ್ನು, ಕಾಲಮೂರ್ತಿಯನ್ನು, ಕಾಲಾಗ್ನಿಯನ್ನು, ಕಾಲನಾಶಕನನ್ನು ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ. ಮೃತ್ಯು ನನಗೇನು ಮಾಡಲು ಸಾಧ್ಯ?

ವಾಮದೇವಂ ಮಹಾದೇವಂ ಲೋಕನಾಥಂ ಜಗದ್ಗುರುಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ ||೩||

ಭಾವಾರ್ಥ:-ವಾಮದೇವನನ್ನು, ಲೋಕನಾಥನನ್ನು, ಜಗದ್ಗುರುವನ್ನು, ದೇವದೇವನಾದ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ. ಮೃತ್ಯು ನನಗೇನು ಮಾಡಲು ಸಾಧ್ಯ?

ದೇವದೇವಂ ಜಗನ್ನಾಥಂ ದೇವೇಶಂ ವೃಷಭಧ್ವಜಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ ||೪||

ಭಾವಾರ್ಥ:- ದೇವದೇವನಾದಜಗನ್ನಾಥನನ್ನುದೇವೇಶನಾದ ಪರಮಶಿವನನ್ನು, ವೃಷಭಧ್ವಜನನ್ನು, ಮಹಾದೇವನನ್ನು ನಾನು ಶಿರಸಾನಮಸ್ಕರಿಸುವೆ. ಮೃತ್ಯು ನನಗೇನು ಮಾಡಲು ಸಾಧ್ಯ?

ಗಂಗಾಧರಂ ಮಹಾದೇವಂ ಶಂಕರಂ ಶೂಲಪಾಣಿನಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ ||೫||

ಭಾವಾರ್ಥ:- ಗಂಗಾಧರನನ್ನು, ಶಂಕರನನ್ನು, ಶೂಲಪಾಣಿಯನ್ನು ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ. ಮೃತ್ಯು ನನಗೇನು ಮಾಡಲು ಸಾಧ್ಯ?

ಭಸ್ಮೋದ್ಧೂಲಿತಸರ್ವಾಂಗಂ ನಾನಾಹರ್ಣಭೂಷಿತಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ ||೬||

ಭಾವಾರ್ಥ:- ವಿಭೂತಿಯ ಕಣದಿಂದ ಸರ್ವಾಂಗವೂ ಲೇಪಿತನಾದವನ, ಮತ್ತು ವಿವಿಧಾಭರಣಗಳನ್ನು ಧರಿಸಿಕೊಂಡಿರುವ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ. ಮೃತ್ಯು ನನಗೇನು ಮಾಡಲು ಸಾಧ್ಯ?

ಆನಂದಂ ಪರಮಾನಂದಂ ಕೈವಲ್ಯಪದಗಾಮಿನಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ ||೭||

ಭಾವಾರ್ಥ:-ಆನಂದ ಸ್ವರೂಪನೂ, ಪರಮಾನಂದಕಾರಕನೂ, ಕೈವಲ್ಯಕ್ಕೆ ಹಾದಿ ತೋರುವವನೂ ಆಗಿರುವ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ. ಮೃತ್ಯು ನನಗೇನು ಮಾಡಲು ಸಾಧ್ಯ?

ಸ್ವರ್ಗಾಪವರ್ಗದಾತಾರಂ ಸೃಷ್ಟಿಸ್ಥಿತ್ಯಂತಕಾರಿಣಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ ||೮||

ಭಾವಾರ್ಥ:- ಸ್ವರ್ಗಸುಖದಾಯಕನೂ, ಸೃಷ್ಟಿ ಸ್ಥಿತಿ ಲಯಕಾರಕನೂ ಆಗಿರುವ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ. ಮೃತ್ಯು ನನಗೇನು ಮಾಡಲು ಸಾಧ್ಯ?

ಪ್ರಲಯಸ್ಥಿತಿಸಂಹಾರಮಾದಿಕರ್ತಾರಮೀಶ್ವರಮ್ |
ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ ||೯||

ಭಾವಾರ್ಥ:-ಪ್ರಲಯ, ಸೃಷ್ಟಿ ನಾಶಗಳಿಗೆ ಕಾರಣನಾಗಿರುವ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ. ಮೃತ್ಯು ನನಗೇನು ಮಾಡಲು ಸಾಧ್ಯ?

ಸತ್ಯಂ ಸತ್ಯಂ ಪುನ: ಸತ್ಯಮುದ್ಧೃತ್ಯ ಭುಜಮುಚ್ಯತೇ |
ವೇದ ಶಾಸ್ತ್ರಾತ್ ಪರಂ ನಾಸ್ತಿ ನ ದೇವ: ಶಂಕರಾತ್ ಪರ: ||೧೦||

ಭಾವಾರ್ಥ:-ವೇದಶಾಸ್ತ್ರಗಳಿಂದ ಉತ್ಕೃಷ್ಠವಾಗಿರುವ ತತ್ವಗಳು ಬೇರಾವುದೂ ಇಲ್ಲ. ಅದೇ ರೀತಿಯಾಗಿ ಶಂಕರನಿಗಿಂತ ಬೇರೆಯಾದ ಉನ್ನತ ದೇವ ಇನ್ನೊಬ್ಬನಿಲ್ಲ.

ಜಾಹೀರಾತು

 

 

ಫಲಶೃತಿ

ಮಾರ್ಕಾಂಡೇಯಕೃತಂ ಸ್ತೋತ್ರಂ ಯ: ಪಠೇಚ್ಛಿವಸನ್ನಿಧೌ |
ತಸ್ಯ ಮೃತ್ಯುಭಯಂ ನಾಸ್ತಿ ಅಗ್ನಿಚೋರಭಯಂ ನ ಹಿ ||೧೧||

ಭಾವಾರ್ಥ:- ಮಾರ್ಕಾಂಡೇಯ ಮಹರ್ಷಿಗಳಿಂದ ರಚಿಸಲ್ಪಟ್ಟ ಈ ಸ್ತೋತ್ರವನ್ನು ಯಾರು ಶಿವ ಸನ್ನಿಧಿಯಲ್ಲಿ ಭಕ್ತಿ ಶ್ರದ್ಧಾ ಪೂರ್ವಕವಾಗಿ ಪಠಿಸುವರೋ ಅಂತವರ ಮೃತ್ಯುಭೀತಿಯು ನಾಶವಾಗುವುದಲ್ಲದೆ ಅಗ್ನಿ ಭಯ, ಚೋರಭಯ ಇತ್ಯಾದಿಯಾದ ನೈಸರ್ಗಿಕ ವಿಕೋಪಗಳಿಂದ ಯಾವ ಭೀತಿಯೂ ಇರುವುದಿಲ್ಲ.

– ಎಲ್. ಬಿ. ಪೆರ್ನಾಜೆ, ಪುತ್ತೂರು

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!