Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶೃಂಗೇರಿಯ ವಿಟ್ಲಪಿಂಡಿ ವೈಭವ! – 1 | Vitlapindi Vaibhava in Sringeri

Published

on

ಕನ್ನಡ1 of 2
To Change Language, Click ← → (arrow) Button

 

ಕಂಡಿದ್ದೀರಾ ಈ ರೀತಿ ಮೊಸರು ಕುಡಿಕೆ ಒಡೆಯುವುದು ?

ದೇಶಾದ್ಯಂತ ಮಾನವ ಪಿರಮಿಡ್ ರಚಿಸುವ ಮೂಲಕ,ಕೋಲುಗಳಿಂದ ಮೊಸರಿನ ಕುಡಿಕೆಯನ್ನು ಚುಚ್ಚುವ ಮೂಲಕ ಮೊಸರು ಕುಡಿಕೆ ಒಡೆಯುವುದನ್ನು ನೀವು ನೋಡಿರಬಹುದು ಮತ್ತು ಕೇಳಿರಬಹುದು..ಆದರೆ ಈ ರೀತಿಯ ಆಚರಣೆ ನೀವು ನೋಡಲು ಶೃಂಗೇರಿಗೆ ಬರಬೇಕು.

ಶೃಂಗೇರಿಯಲ್ಲಿ ನೆಡೆಯುವ ಪ್ರತಿಯೊಂದು ಸಾಂಪ್ರದಾಯಿಕ ಆಚರಣೆ ವೈಶಿಷ್ಟ್ಯಪೂರ್ಣವಾಗಿರುತ್ತದೆ.ಅದರಲ್ಲಿ ಮೊಸರು ಕುಡಿಕೆ ಒಡೆಯುವುದು ಒಂದು.

ಗೋಕುಲಾಷ್ಟಮೀಯ ಮಾರನೆಯ ದಿನ ಶ್ರೀಕೃಷ್ಣನ ಉತ್ಸವವು ಹೋಗಿಬಂದ ಮೇಲೆ ಜಾರುಗಂಬ(ಜಾರುಗಂಬದ ಬಗ್ಗೆ ಮುಂದಿನ ಸಂಚಿಕೆಯಲ್ಲಿ ನೋಡೋಣ) ಸ್ಪರ್ಧೆಗೂ ಮೊದಲು ನೆಡೆಯುವುದು ಈ ಮೊಸರು ಕುಡಿಕೆ ಒಡೆಯುವುದು.

ಇಲ್ಲಿ ಇಬ್ಬರು ವ್ಯಕ್ತಿಗಳು ಇರುತ್ತಾರೆ.ಒಬ್ಬಾತ ಮರದ ಹಲಗೆಯ ಮೇಲೆ ನಿಂತು ಕೈಯಲ್ಲಿ ಮೊಸರಿನ ಕುಡಿಕೆ ಹುಲ್ಲಿನ ಮಧ್ಯದಲ್ಲಿ ಹಿಡಿದು ಕೊಂಡಿರುತ್ತಾನೆ.ಮತ್ತೊಬ್ಬ ಕೈಯಲ್ಲಿ ದಬ್ಬೆ ಹಿಡಿದು ಕೆಳಗೆ ನಿಂತು ಮೊಸರು ಕುಡಿಕೆಯತ್ತ ರಭಸವಾಗಿ ಬೀಸುತ್ತಿರುತ್ತಾನೆ.ಇವನ ಗುರಿ ಮೊಸರಿನ ಕುಡಿಕೆ ಹಿಡಿದವನ ಗಮನ ತಪ್ಪಿಸಿ ಅದನ್ನು ಒಡೆಯುವುದು, ಅವನು ಅದನ್ನು ರಕ್ಷಿಸುವುದು.ಇದು ಸಮ ಬಲದ ಹೋರಾಟ.ಹಲವು ಬಾರಿ ಪ್ರಯತ್ನ ವಿಫಲವಾದಾಗ ಬೇಸರಿಸಿಕೋಳ್ಳದೆ ಕೆಳಗಿರುವಾತ ದಬ್ಬೆಯಿಂದ ಮೊಸರುಕುಡಿಕೆಗಳನ್ನು ಒಡೆದು ಆಟ ಮುಕ್ತಾಯ ಗೊಳಿಸಿ ಜಾರುಗಂಬ ಸ್ಪರ್ಧೆಗೆ ನಾಂದಿಹಾಡುತ್ತಾನೆ.

ವಿಟ್ಲಪಿಂಡಿ ಮೊಸರು ಕುಡಿಕೆಯ ಒಂದು ನೋಟ

ಪ್ರತಿ ಆಟದಲ್ಲೂ ಜೀವನ ಪಾಠ ಅಡಗಿರುತ್ತದೆ. ಮೊಸರು ಕುಡಿಕೆ ರಕ್ಷಿಸುವಾತ ಕ್ಷಣಕಾಲ ಎಚ್ಚರ ತಪ್ಪಿದ್ದರಿಂದ ಮೊಸರು ಕುಡಿಕೆ ಕಳೆದುಕೊಂಡ,ಇನ್ನೂಬ್ಬ ಹಲವಾರು ಬಾರಿ ವಿಫಲನಾದರೂ ಗುರಿಗೆ ತನ್ನೆಲ್ಲಾ ಶಕ್ತಿ ಕೇಂದ್ರೀಕರಿಸಿದಾಗ ಸಫಲನಾದ.
ಇದು ಸದಾ ಗುರಿಯ ಮೇಲೆ ಎಚ್ಚರಿಕೆಯಿಂದ ಗಮನಯಿಟ್ಟಿರ ಬೇಕು ಎಂದು ಸೂಚಿಸುತ್ತದೆ.
ಹೀಗಿ ಮೊಸರು ಕುಡಿಕೆ ಒಡೆಯುವ ಆಚರಣೆ ದೇಶಾದ್ಯಂತ ವಿಭಿನ್ನವಾಗಿ ಆಚರಿಸಿದರೂ,ಶ್ರೀ ಕೃಷ್ಣ ತನ್ನ ಬಾಲ್ಯದಲ್ಲಿ ಆಡಿದ ಆಟಗಳ ದ್ಯೋತಕವಾಗಿದೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!