Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶೃಂಗೇರಿಯ ವಿಟ್ಲಪಿಂಡಿ ವೈಭವ 2 Vitlapindi utsava in Sringeri – 2

Published

on

ಕನ್ನಡ1 of 2
To Change Language, Click ← → (arrow) Button

ಶೃಂಗಗಿರಿಯವೈಶಿಷ್ಟ್ಯ 5

ಜಾರುಗಂಬ ಸ್ಪರ್ಧೆ

ಗೋಕುಲಾಷ್ಟಮೀಯ ಮರುದಿನ ಜಾನಪದ ಸೊಗಡು ದೇಶಾದ್ಯಂತ ಮೆಳೈಸುತ್ತದೆ.(ಉತ್ತರ ಭಾರತದಲ್ಲಿ ದಹಿ ಹಂಡಿ ಸೇರಿದಂತೆ) ಕೃಷ್ಣಾಷ್ಟಮೀಯ ಸಂಭ್ರಮದ ರೂಪ ಬೇರೆಯಾಗಿ ಕಂಡರು ಸಂಭ್ರಮ ಭಕ್ತಿ ಒಂದೇ ಆಗಿರುತ್ತದೆ.

ಶೃಂಗೇರಿಯ ಶ್ರೀಮಠದ ಆವರಣದ ಶ್ರೀವಿದ್ಯಾಶಂಕರ ದೇವಸ್ಥಾನದ ಮುಂಭಾಗದಲ್ಲಿ ಸುಮಾರು 40-50 ಅಡಿ ಎತ್ತರದ ಜಾರುಗಂಬ ನೆಟ್ಟಿರುತ್ತಾರೆ.ಅಡಿಕೆ ಮರವನ್ನು ನೂಣುಪಾಗಿಸಿ,ಹರಳೆಣ್ಣೆ ಲೇಪಿಸಿ ಜಾರುವಂತೆ ಮಾಡಲಾಗಿರುತ್ತದೆ. ತುತ್ತತುದಿಯಲ್ಲಿ ಶ್ರೀಕೃಷ್ಣನ ಪ್ರಸಾದ ಇಟ್ಟಿರಲಾಗುತ್ತದೆ.ಯಾರು ಗುರಿ ತಲುಪುತ್ತಾರೋ ಅವರು ಗೆದ್ದಂತೆ.

ಮಠದ ಪ್ರವಚನ ಮಂದಿರದಲ್ಲಿ ಸ್ಥಾಪಿತ ಕೃಷ್ಣನ ಉತ್ಸವ ಭಾರತೀಬೀದಿಯಲ್ಲಿ ಸಂಜೆ 4:30 ರಿಂದ 5:00 ಗಂಟೆ ಸುಮಾರಿಗೆ ಹೋಗಿ ಬಂದ ನಂತರ.ಮೊದಲು ಮೊಸರು ಕುಡಿಕೆ ಒಡೆದಮೇಲೆ(ಇದರ ಬಗ್ಗೆ ನಿನ್ನೆಯ ನೋಡಬಹುದು)ಶುರುವಾಗುತ್ತದೆ ಜಾರುಗಂಬ ಹತ್ತುವ ಸ್ಪರ್ಧೆ.

ಜೀವನ ಪಾಠ – ಜಾರುಗಂಬ ಹತ್ತುವಾಗ ಸ್ಪರ್ಧಿಗಳು ಹಲವಾರು ಪ್ರಯತ್ನಗಳಲ್ಲಿ ವಿಫಲರಾಗಿ ಜಾರಿ ಕೆಳಗೆ ಬರುತ್ತಾರೆ.ಇದರ ಮಧ್ಯೆ ಮಳೆಯು ಪರೀಕ್ಷೆ ಯೊಡ್ಡುತ್ತದೆ.ಮಕ್ಕಳ ಪೆಟ್ಲೀನ ಹೊಡೆತ.ಇದು ಜೀವನದಲ್ಲಿ ಯಾಶಸ್ವೀಯಾಗಲು ಜನರು ತಂದೊಡ್ಡುವ ತೊಂದರೆಗಳ ದ್ಯೋತಕ.ಜೀವನದಲ್ಲಿ ಏಳು-ಬೀಳು ಸಹಜ.ಇದನ್ನೇಲ್ಲ ನಿವಾರಿಸಿಕೊಳ್ಳುಲು ಪ್ರಬಲ ಇಚ್ಛಾಶಕ್ತಿ ಅವಶ್ಯಕ ಎಂಬುದು ಸ್ಪರ್ಧಿಗಳ ಉತ್ಸಾಹ ತೋರಿಸುತ್ತದೆ.

ಇವರ ಉತ್ಸಾಹ ನೋಡಿದಾಗ ನಡೆ ಮುಂದೆ ನೆಡೆ ಮುಂದೆ ನುಗ್ಗಿ ನೆಡೆಮುಂದೆ ಎಂಬ ಹಾಡಿನ ಸಾಲು ನೆನಪಾಗುತ್ತದೆ.
ಏಳಿ!ಎದ್ದೇಳಿ!ಗುರಿ ಮುಟ್ಟುವ ತನಕ ನಿಲ್ಲದಿರಿ!! ಎಂಬ ಸ್ವಾಮಿ ವಿವೇಕಾನಂದರ ಮಾತು ಅಳವಡಿಸಿಕೊಂಡಾತ ಕೊನೆಯಲ್ಲಿ ತುತ್ತತುದಿಯನ್ನು ತಲುಪಿ ಶ್ರೀಕೃಷ್ಣನ ಆ ಪ್ರಸಾದವನ್ನು ಸ್ವೀಕರಿದಾಗ ಜನರ ಹರ್ಷೋದ್ಗಾರ ಮುಗಿಲು ಮುಟ್ಟುತ್ತದೆ.

 

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!