Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗೇರಿ ಜಗದ್ಗುರುಗಳ ಚಾತುರ್ಮಾಸ್ಯವ್ರತ – 1 The Caturmāsya Vrata of the Sringeri Jagadgurus -1

Published

on

ಶೃಂಗೇರಿ ಜಗದ್ಗುರುಗಳ ಚಾತುರ್ಮಾಸ್ಯವ್ರತ – 1
The Caturmāsya Vrata of the Sringeri Jagadgurus -1

 

ಗುರು ಮಹಿಮೆ 17

ಕಳೆದೆರಡು ದಿನಗಳಿಂದ ಚಾತುರ್ಮಾಸ್ಯವ್ರತ ಮತ್ತು ವ್ಯಾಸಪೂರ್ಣಿಮೆಯ ಬಗ್ಗೆ ಓದಿರುವಿರಿ.
ಶೃಂಗೇರಿಯಲ್ಲಿ ನೆಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳೂ ವೈಶಿಷ್ಟ್ಯ ಪೂರ್ಣವಾಗಿಯೇ ನೆಡೆಯುತ್ತವೆ.
ಅದರಲ್ಲೂ ವ್ಯಾಸಪೂಜೆ ಮತ್ತು ಚಾತುರ್ಮಾಸ್ಯವ್ರತ ಸಂಕಲ್ಪ ಮಹತ್ವವನ್ನು ಪಡೆದಿವೆ.

ಜಗದ್ಗುರು ಮಹಾಸ್ವಾಮಿಗಳು ಚಾತುರ್ಮಾಸ್ಯವ್ರತದ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೊದಲು ಆಷಾಢಮಾಸದ ಶುಕ್ಲಪಕ್ಷದ ಪ್ರದೋಷದ ದಿನದಂದು, ಪೂರ್ವಸಂಪ್ರದಾಯದಂತೆ ಸಂಜೆಯ ವೇಳೆ ವೇದಘೋಷಗಳೊಂದಿಗೆ ಮಲ್ಲಪ್ಪನ ಬೆಟ್ಟಕ್ಕೆ ತೆರಳಿ ಶ್ರೀಮಲಹಾನಿಕರೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಾರೆ. ವ್ಯಾಸಪೂರ್ಣಿಮೆಯೆಂದು ಬೆಳಿಗ್ಗೆ ಶ್ರೀ ಮಠದ ಆವರಣದಲ್ಲಿರುವ ಎಲ್ಲಾ ದೇವಾಲಯಗಳಿಗೆ ಮತ್ತು ಅಧಿಷ್ಠಾನ ಮಂದಿರಗಳಿಗೆ ಚಿತ್ತೈಸಿ ದರ್ಶನಮಾಡಿದ ನಂತರ ವ್ಯಾಸಪೂಜೆಮಾಡಲು ಆಗಮಿಸುತ್ತಾರೆ.
ಆ ವೇಳೆಗಾಗಲೇ ಸಹಸ್ರಾರು ಭಕ್ತರು ಗುರುಭವನದಲ್ಲಿ ಗುರುಗಳ ಆಗಮನ ಮತ್ತು ಗುರುಗಳು ನೆರವೇರಿಸುವ ಪೂಜೆಯನ್ನು ಕಾಣ್ತುಂಬಿಕೊಳ್ಳಲು ಸಜ್ಜಾಗಿರುತ್ತಾರೆ.

ಬ್ರಹ್ಮವಿದ್ಯಾ ಬೋಧಕರಾದ ಗುರುಗಳ ಆರಾಧನಾ ಸಮಯದಲ್ಲಿ ಮೂವರು ಆಚಾರ್ಯರುಗಳ ಪಂಚಕಗಳಿಗೆ ಪ್ರತ್ಯೇಕವಾಗಿ ಷೋಡಶೋಪಚಾರಪೂಜೆಯನ್ನು ಜಗದ್ಗುರು ಮಹಾಸ್ವಾಮಿಗಳು ಸಲ್ಲಿಸುತ್ತಾರೆ.

ಮುಂದುವರಿಯುವುದು….

English version

Guru Mahime 17

Articles regarding Chaturmasya vrata and vyasapurnima are being posted since the past couple of days. Every religious event that takes place in Sringeri is distinct and special. Of all those, Vyasapooja and Chaturmasya vrata sankalpa are of utmost significance.
As is the custom, The Jagadguru Mahaswamijis accompanied by sonorous vedic chants, visit the temple and have darshan of Sri Malahanikareshwara swamy on the Mallappa hill on the Pradosha day of the shukla paksha of the ashadha maasa. Prior to performing the Vyasapooja, the ubhaya jagadgurus visit all the temples and adhishtaana mandiras in the math premises on the day of guru purnima. By this time, thousands of devotees would have gathered at the guru bhavana to witness the Vyasapooja and the Chaturmasya vrata sankalpa performed by the jagadgurus.
During the aradhana of the purvacharyas who have been the exponents of brahma vidya, jagadguru mahaswamiji performs detailed shodasha upachara poojas to three panchakas consecutively.
(to be continued..)

1 ಅಭಿಪ್ರಾಯ

1 Comment

  1. prashant

    July 8, 2017 at 6:00 pm

    Sadgurubyonamah ….

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!