Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶಂಕರ ಗುರು ಚರಿತಂ 1 Shankara Guru Charitham 1

Published

on

ಶಂಕರ ಗುರು ಚರಿತಂ 1
Shankara Guru Charitham 1

ಗುರು ಮಹಿಮೆ 20

ಕೇರಳ ರಾಜ್ಯದ ಪ್ರಾಚೀನ ಕಾಲದಿಂದಲೂ ಪ್ರಾಕೃತಿಕ ಸೌಂದರ್ಯಕ್ಕೆ ಮತ್ತು ಭೌತಿಕ ಪ್ರತಿಭೆಗೆ ಹೆಸರಾದ ಪ್ರದೇಶ.ಪೂರ್ಣಾನದಿ ತಟದಲ್ಲಿ ಕಂಗೊಳಿಸುತ್ತಿರುವ ಸುಂದರ ಗ್ರಾಮವೇ ಕಾಲಟಿ.ಆ ಗ್ರಾಮದಲ್ಲಿ ಶಿವಗುರು-ಆರ್ಯಾಂಬಾ ಎಂಬ ದಂಪತಿಗಳಿದ್ದರು.ಅವರದು ಸಂಪ್ರದಾಯಸ್ಥ ನಂಬೂದಿರಿ ಕುಟುಂಬ.ಶ್ರೀಮಂತರಾದರೂ ಸರಳ ಜೀವಿಗಳು.ಸತಿ-ಪತಿಗಳಿಬ್ಬರೂ ವಿದ್ಯಾಸಂಪ‌‌ನ್ನರು,ದೈವಭಕ್ತರಾಗಿದ್ದರು.ಆದರೆ ಅವರಿಗೆ ಮಕ್ಕಳಿಲ್ಲವೆಂಬ ಚಿಂತೆ.ಎಲ್ಲಾ ದೇವರಿಗೂ ಹರಕೆ ಹೊತ್ತದ್ದಾಯಿತು.ಕೊನೆಗೆ ಆಪ್ತೇಷ್ಟರ ಸಲಹೆಯಂತೆ ದಂಪತಿಗಳಿಬ್ಬರೂ ವೃಷಭಾಚಲೇಶ್ವರ ಕ್ಷೇತ್ರಕ್ಕೆ ಹೊದರು.ಅಚಲವಾದ ಭಕ್ತಿ ಮತ್ತು ನಿಷ್ಠೆಯಿಂದ ಹಲವು ದಿನಗಳ ಕಾಲ ಪುತ್ರಸಂತಾನಕ್ಕಾಗಿ ಭಗವಾನ್ ವೃಷಾಚಲನ ಸೇವೆಗೈಯುತ್ತಾ,ಆರ್ತಿಯಿಂದ ಬೇಡಿಕೊಳ್ಳುತ್ತಿದರು.

ಒಂದು ದಿನ ರಾತ್ರಿ ಶಿವನು ಶಿವಗುರುವಿನ ಕನಸಿನಲ್ಲಿ ಕಾಣಿಸಿಕೊಂಡು ನಿಮ್ಮ ನಿಷ್ಠೆ-ಭಕ್ತಿಗೆ ಮೆಚ್ಚಿದ್ದೆನೆ‌.ನಿಮ್ಮ ಕೋರಿಕೆ ಈಡೇರಿಸುತ್ತೆನೆ‌.ಆದರೆ ಒಂದು ಪ್ರಶ್ನೆ .ನಿನಗೆ ಓರ್ವ ವಿದ್ವತ್ ಪೂರ್ಣ,ಸಾತ್ವಿಕ ಮತ್ತು ಸರ್ವಜ್ಞನಾದ ಆದರೆ ಕೇವಲ 16 ವರ್ಷ ಆಯಸ್ಸುಳ್ಳ ಮಗನು ಬೇಕೋ ಅಥವಾ ಅಥವಾ ‌ಅತಿ ಸಾಮಾನ್ಯನಾಗಿ ಧೀರ್ಘಕಾಲ ಬದುಕುವ ಬಾಲಕನು ಬೇಕೋ ಎಂದು ಕೇಳಿದನು.

ಮುಂದುವರಿಯುತ್ತದೆ…
ಇಂದಿನಿಂದ ಪ್ರತಿ ಬುಧವಾರ ಗುರುಮಹಿಮೆ ಅಂಕಣದಲ್ಲಿ ಜಗದ್ಗುರು ಶ್ರೀ ಆದಿಶಂಕರರ ದಿವ್ಯಚರಿತ್ರೆ ಮೂಡಿಬರುತ್ತದೆ…
ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಆದ Jnanada ಕ್ಕೆ ಹೋಗಿ…

Guru Mahime 20

The Indian state of Kerala has been known for its scenic beauty and talent since time immemorial. Kalady is a picturesque hamlet on the banks of the river Poorna. There lived a pious couple, Shivaguru-Aryamba coming from a traditional namboodiri heritage. Even though they were learned, they led simple lives and were staunch devotees. Being childless was their only grieve. After performing many vratas, they sought refuge and worshipped Vrishachaleshwara at Trisshur with utmost devotion and prayed for progeny.
On one blessed night Lord Shiva shows up in Shivaguru’s dream and expressed his satisfaction and asks him a question.
Lord Shiva asked Shivaguru if he wants either a pious son of scholarly stature who has a short life of 16 years, or a very normal son blessed with a long life.
(to be continued..)
Starting from today, the glorious life history of Jagadguru Adi Shankaracharya will be posted under the ‘guru mahima’ title, every wednesday. Visit our Facebook page, ‘Jnanada’ for more content and information.

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!