Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶ್ರೀ ತೋರಣ ಗಣಪತಿ Sri Torana Ganapati

Published

on

ಕನ್ನಡ1 of 2
To Change Language, Click ← → (arrow) Button

ಶೃಂಗೇರಿಯ ಶ್ರೀ ಮಠದ ಆವರಣದಲ್ಲಿ ಶ್ರೀಆದಿಶಂಕರಾಚಾರ್ಯರ ದೇವಾಲಯದ ಎಡಪಾರ್ಶ್ವದಲ್ಲಿರುವ ತೋರಣಗಣಪತಿಯ ಸನ್ನಿಧಿ ಅತ್ಯಂತ ಮಹತ್ವಪೂರ್ಣವಾದುದು, ಬಾಗಿಲಿನ ಮೇಲ್ಭಾಗದಲ್ಲಿ ತೋರಣಕಟ್ಟುವ ಸ್ಥಳದಲ್ಲಿ ಗಣಪತಿ ಇರುವುದರಿಂದ ಇದನ್ನು “ತೋರಣ ಗಣಪತಿ” ಎಂದು ಕರೆಯುತ್ತಾರೆ. ಶತಮಾನದ ಹಿಂದೆ ಕೆಲವು ಪುಂಡರಿಂದ ಶ್ರೀಮಠಕ್ಕೆ ಭಾರೀ ಅಪಾಯ ಸಂಭವಿಸಲಿದೆಯೆಂದು ತಿಳಿದ ಅಂದಿನ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಅಷ್ಟಮ ನೃಸಿಂಹಭಾರತೀ ಮಹಾಸ್ವಾಮಿಗಳು(ಇವರಿಗೆ ವೃದ್ಧನರಸಿಂಹ ಭಾರತೀ,ಉಗ್ರನರಸಿಂಹ ಭಾರತೀ ಮಹಾಸ್ವಾಮೀಗಳೆಂಬ ನಾಮಗಳಿವೆ. ಕ್ರಿ.ಶ 1817-1878) ತಮ್ಮ ನಿವಾಸ ಸ್ಥಾನವಾದ ಚಂದ್ರಮೌಳೀಶ್ವರ ತೊಟ್ಟಿಯ ಪಕ್ಕದ ಮಂದಿರದಲ್ಲಿ ಧ್ಯಾನಮಗ್ನರಾದರು.ಆಗ ತಮ್ಮ ಸಮೀಪದಲ್ಲಿರುವ ದೇವರನ್ನು ಪ್ರಾರ್ಥಿಸುವಂತೆ ಅವರಿಗೆ ಅಂತಃಪ್ರೇರಣೆ ಉಂಟಾಯಿತು.ತಾವು ಧ್ಯಾನಕ್ಕೆ ಕುಳಿತ ಸಮೀಪದಲ್ಲಿದ್ದ ಬಾಗಿಲಿನ ಮೇಲ್ಭಾಗ(ತೋರಣ)ದಲ್ಲಿದ್ದ ಗಣಪತಿಯ ಆಕೃತಿಯನ್ನು ನೋಡಿ,ವಿಧ್ಯುಕ್ತವಾಗಿ ಪ್ರಾಣಪ್ರತಿಷ್ಠೆ ಮಾಡಿ,ಅಲ್ಲಿದ್ದ ಶಿಷ್ಯರಿಗೆಲ್ಲಾ ಪ್ರಸಾದ ನೀಡಿದರು.ಗುರುಗಳ ಧ್ಯಾನ ಮತ್ತು ಪ್ರಾರ್ಥನೆಯ ಫಲವಾಗಿ ಬಂದೊದಗಿದ ಭಾರೀ ಅಪಾಯವು ತಪ್ಪಿತು.ಅಂದಿನಿಂದ ಈ ಗಣಪತಿಯೂ “ತೋರಣ ಗಣಪತಿ” ಎಂದು ಪ್ರಸಿದ್ಧವಾಯಿತು. ಜಗದ್ಗುರು ಶ್ರೀ ಅಷ್ಟಮ ನೃಸಿಂಹಭಾರತೀ (ಶ್ರೀವೃದ್ಧನರಸಿಂಹ ಭಾರತೀ) ಮಹಾಸ್ವಾಮಿಗಳ ರಜತ ಪಾದುಕೆಗಳು ಇಲ್ಲಿದ್ದು,ಅವುಗಳಿಗೆ ನಿತ್ಯಾರ್ಚನೆ ಸಲ್ಲಿಸಲಾಗುತ್ತದೆ.

ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳು ಪ್ರತಿನಿತ್ಯ ದೂರ್ವಾರ್ಚನೆ ಮಾಡಿ ಪ್ರಾರ್ಥಿಸುತ್ತಿದ್ದರು, ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಬೆಳ್ಳಿಯ ಕವಚ ಸಮರ್ಪಿಸಿದರೆ,ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥಮಹಾಸ್ವಾಮಿಗಳು ನಿತ್ಯಪೂಜೆಗೆ ಸೂಕ್ತ ವ್ಯವಸ್ಥೆ ಮಾಡಿದರು.

ಈಗಿನ ವ್ಯಾಖ್ಯಾನಸಿಂಹಾಸನಾಧಿಶ್ವರರಾಗಿರುವ ಜಗದ್ಗುರು ಶ್ರೀ ಭಾರತೀತೀರ್ಥಮಹಾಸ್ವಾಮಿಗಳು ಶ್ರೀ ತೋರಣಗಣಪತಿಗೆ ಸ್ವರ್ಣಕವಚ ಸಮರ್ಪಿಸುದ್ದಾರೆ.
ಈ ದೇವಾಲಯವು ನೂತನವಾಗಿ ಕಟ್ಟಲ್ಪಟ್ಟಿದ್ದು ಇದರ ಕುಂಭಾಭಿಷೇಕವು ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಅಮೃತಹಸ್ತದಿಂದ,ಮಹಾಸ್ವಾಮಿಗಳ ಪೀಠಾರೋಹಣ ರಜತೋತ್ಸವದ ಸಂವತ್ಸರದಲ್ಲಿ 2014 ರ ಜೂನ್ 08 ರಂದು ನೆರವೇರಿತು.

ಶ್ರೀತೋರಣಗಣಪತಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎಂಬುದು ಭಕ್ತರ ಅಚಲವಾದ ನಂಬಿಕೆ.ಹೊಸದಾಗಿ ಬಂದ ಯಾತ್ರಿಕರು ಈ ಗುಡಿಯ ಬಾಗಿಲು ಯಾವಗ ತೆರೆಯುತ್ತಾರೆ ಎಂದು ಬಹಳ ಕುತೂಹಲ ದಿಂದ ನಿಮ್ಮನ್ನು ಕೇಳಿರಬಹುದು. ಅಲ್ಲವೇ ??

ವಿನಾಯಕ ಚೌತಿಯ ಹೊಸ್ತಿಲಲ್ಲಿರುವಾಗ ಶ್ರೀ ತೋರಣಗಣಪತಿಯ ಸ್ಮರಣೆಗೈಯುತ್ತಾ…

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!