Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಸ್ತಂಭ ಗಣಪತಿ Stambha Ganapati

Published

on

ಕನ್ನಡ1 of 2
To Change Language, Click ← → (arrow) Button


ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ 24 ನೇಯ ಅಧಿಪತಿಗಳಾಗಿದ್ದ ಜಗದ್ಗುರು ಶ್ರೀ ಅಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳು(ಕ್ರಿ.ಶ.1599-1622) ಒಮ್ಮೆ ಮಲಹಾನಿಕರೇಶ್ವರ ಸ್ವಾಮಿಯ ಪೂಜೆಗೆಂದು ಆಗಮಿಸದ್ದಾಗ,ಮೊದಲು ಪೂಜೆ ಸಲ್ಲಿಸಲು ಗಣಪತಿಯ ವಿಗ್ರಹವೇ ಇಲ್ಲದಿರುವುದನ್ನು ಗಮನಿಸಿದರು,ನಂತರ ಜಗದ್ಗುರು ಮಹಾಸ್ವಾಮಿಗಳು ಈ ದೇವಾಲಯದ ಮುಂಭಾಗದಲ್ಲಿದ್ದ ಒಂದು ಕಂಬದ ಮೇಲೆ ಅರಶಿನದ ಕೊಂಬಿನಿಂದ ಗಣಪತಿಯ ಆಕೃತಿಯನ್ನು ಬಿಡಿಸಿ ಅದನ್ನು ಪೂಜಿಸಿದರು. ಅಂದಿನಿಂದ ಆ ಗಣಪತಿಯ ಚಿತ್ರದ ರೇಖೆಗಳು ಉಬ್ಬಿಕೊಂಡು ಮೇಲೆ ಬಂದು ಅದು ಈಗ ಕೆತ್ತನೆಯ ವಿಗ್ರಹದಂತೆ ಗೋಚರವಾಗುತ್ತದೆ. ಈ ವಿಗ್ರಹ ಮೂಡಿಬಂದ ಕಂಬದ ಒಳಭಾಗವು ಟೋಳ್ಳಾದಂತೆಯೂ,ಕಂಬದ ಉಳಿದ ಭಾಗವು ಗಟ್ಟಿಯಾಗಿದ್ದಂತೆಯೂ ಇದೆ. ಈ ಗಣಪತಿಯನ್ನು “ಕಂಬದ ಗಣಪತಿ” ಮತ್ತು “ಸ್ತಂಭ ಹೇರಂಬ” ಎಂದು ಕರೆಯುತ್ತಾರೆ. ಮಹಾಶಿವರಾತ್ರಿ ಸೇರಿದಂತೆ ಹಲವು ವಿಶೇಷ ಸಂದರ್ಭಗಳಲ್ಲಿ
ಮಲಹಾನಿಕರೇಶ್ವರ‌ಸ್ವಾಮಿಯನ್ನು ಪೂಜಿಸಲು ಆಗಮಿಸುವ
ಜಗದ್ಗುರು ಮಹಾಸ್ವಾಮಿಗಳು ಮೊದಲು ಸ್ತಂಭ ಗಣಪತಿಗೆ ಪೂಜೆಸಲ್ಲಿಸುವುದು 5 ಶತಮಾನಗಳಿಂದ ನೆಡೆದು ಬರುತ್ತಿರುವ ಪದ್ಧತಿಯಾಗಿದೆ.

ಕಾರ್ತಿಕ ಮಾಸದ ಪೂರ್ಣಿಮೆಯ ದಿನ ಮಲಹಾನಿಕರೇಶ್ವರ ಬೆಟ್ಟದಲ್ಲಿ ಕೃತ್ತಿಕೋತ್ಸವ ನೆಡೆಯುವ ಮೂಲಕ
ಶೃಂಗೇರಿ ಪರಿಸರದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯುತ್ತದೆ. ಆ ದಿನ ಪ್ರಥಮ ದೀಪೋತ್ಸವ ಸೇವೆ ಸಲ್ಲುವುದು ಈ ಸ್ತಂಭ ಗಣಪತಿಗೆ.

ತಮ್ಮ ಇಷ್ಟಾರ್ಥವನ್ನು ಈಡೇರಿಸುವ
ಸ್ತಂಭ ಗಣಪತಿಗೆ ಭಕ್ತರು
ಹಲವಾರು ಸೇವೆಗಳನ್ನು ಅನನ್ಯ ಭಕ್ತಿ-ಶ್ರದ್ಧೆಯಿಂದ ಸಲ್ಲಿಸುತ್ತಾರೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!