Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

ಸನಾತನ ಭಾರತ 3. Sanathana Bharatha 3

Published

on

ಕನ್ನಡ1 of 2
To Change Language, Click ← → (arrow) Button

ಗೌರಿ ಹಬ್ಬ ಬಂದಿತು..

ಸ್ವರ್ಣಗೌರೀ ವ್ರತವು ಭಾದ್ರಪದ ಶುದ್ಧ ತದಿಗೆಯ ದಿನ ಆಚರಿಸಲಾಗುತ್ತದೆ. ಗೌರಿಹಬ್ಬ ಎಂದು ಕರೆಯುವುದು ಜನಜನಿತವಾಗಿದೆ.ಪರಶಿವನ ಮಡದಿ ಪಾರ್ವತಿಯು(ಗೌರಿಯು) ತವರಿಗೆ ಬರುವ ದಿನವೂ ಇದಾಗಿದೆ.ವಿವಾಹದ ನಂತರ ಪತಿಯ ಮನೆ ಬೆಳಗುತ್ತಿರುವ ಮಗಳು ಮನೆಗೆ ಬಂದಾಗ ಇರುವ ಸಂಭ್ರಮವನ್ನು ಇಲ್ಲಿ ಕಾಣಬಹುದು.ಸಹೋದರಿಗೆ ಸಹೋದರನು ಬಾಗಿನ ಕೊಡಬೇಕಾಗುತ್ತದೆ.ಇದನ್ನು ಅರಸಿನ ಕುಂಕುಮ ನೀಡಿ ಬರುವುದು ಎಂದು ಹೇಳಲಾಗುತ್ತದೆ.ಇದರಿಂದ ತವರು ಮನೆಯ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳುತ್ತದೆ.

ಮಾಂಗಲ್ಯ ಗಟ್ಟಿಗೊಳ್ಳಲು, ಅನುರೂಪನಾದ ವರನೊಂದಿಗೆ ವಿವಾಹ ನೆರವೇರಲು ವಿಶೇಷವಾಗಿ ಗೌರಿಯ ಅನುಗ್ರಹ ಬೇಕು. ಹೀಗಾಗಿಯೇ ವಧುವು ಮದುವೆಯ ಮಂಟಪಕ್ಕೆ ತೆರಳುವ ಮುಂಚೆ ಸಂಭ್ರಮದಲ್ಲಿ ಗೌರಿಪೂಜೆ ಮಾಡುವುದನ್ನು ಮದುವೆಮನೆಗಳಲ್ಲಿ ನಾವು ಕಾಣುತ್ತೇವೆ.

ಗೌರಿಯನ್ನು ಕೂರಿಸಿ ಪೂಜೆ ಮಾಡುವ ಪದ್ಧತಿ ಎಲ್ಲರ ಮನೆಯಲ್ಲಿ ಇರುವುದಿಲ್ಲ ಆದ್ಧರಿಂದ ಸುಮಂಗಲಿಯರು ಗೌರಿಯನ್ನು ಸ್ಥಾಪಿಸಿದವರ ಮನೆಗೆ ಹೋಗಿ ಪೂಜೆಸಲ್ಲಿಸಿಬರುತ್ತಾರೆ.ತಾಯಿಯಿಂದ ಮಗಳಿಗೆ,ಅವಳಿಂದ ಅವಳ ಮಗಳಿಗೆ,ಕೆಲವೊಮ್ಮೆ ಮಾತ್ರ ಅತ್ತೆಯಿಂದ ಸೊಸೆಗೆ ವ್ರತಾಚರಣೆಯ ಪರಂಪರೆ ಅನಾದಿಕಾಲದಿಂದಲೂ ಮುಂದುವರಿಯುತ್ತಾ ಬಂದಿರುವುದು ವಿಶೇಷ.
ಸ್ವರ್ಣಗೌರಿ ವ್ರತವು ಕರ್ನಾಟಕದ ದಕ್ಷಿಣದಲ್ಲಿ ಅಂದರೆ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಮಾತೆಯರು ಪತಿಯ ಆಯಸ್ಸು ಮಕ್ಕಳ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತಾರೆ.

“ತದಿಗೆಯ ಗೌರಿ ಹಬ್ಬ ಗೌರಿ ನವಮಿಯಾದದ್ದಾರೂ ಹೇಗೆ ?”

ವ್ರತಕ್ಕೆ ನಿಯಮ ಎಂಬ ಸಮಾನಾರ್ಥಕ ಪದವು ಇದೆ.ಮಹಿಳೆಯರು ಮಾಡುವ ವ್ರತಗಳಲ್ಲಿ ನಿಯಮಗಳಿಗೆ ಪ್ರಾಧಾನ್ಯತೆ.ತಾಯಿಯಿಂದ ಮಗಳಿಗೆ,ಅವಳಿಂದ ಅವಳ ಮಗಳಿಗೆ,ಕೆಲವೊಮ್ಮೆ ಅತ್ತೆಯಿಂದ ಸೊಸೆಗೆ ವ್ರತಾಚರಣೆಯ ಪದ್ಧತಿ ನಿಯಮಗಳು ಮುಂದುವರಿಯಲ್ಪಡುತ್ತದೆ.
ಹಾಗಾದರೆ ಈ ನವಮಿ ಎಲ್ಲಿಂದ ಬಂತು? ನಿಯಮ ಎಂಬ ಶಬ್ದವು ಕಾಲಕ್ರಮೇಣ ನೌಮಿ ಆಗಿ ನವಮಿ ಎಂದು ಆಡು ಭಾಷೆಯಲ್ಲಿ ಮಾತಿನಲ್ಲಿ ಆಗಿರಬಹುದು.(ಶೃಂಗಗಿರಿ ಎಂಬುದು ಶೃಂಗೇರಿ ಆದ ಹಾಗೆ).ಸ್ತ್ರೀಯರು ಮಾಡುವನಾಗರಪಂಚಮಿ, ಕೊಡೆಅಮಾವಾಸ್ಯೆಯ ವ್ರತದಲ್ಲೂ ನವಮಿ ಸೇರಿದೆ. ನಾಗರಪಂಚಮಿ ನವಮಿ,ಕೊಡೆ ಅಮಾವಾಸ್ಯೆ ನವಮಿ ಎಂದು ಹೇಳುವುದನ್ನು ನಾವು ಕಾಣಬಹುದು.ಹಾಗಾಗಿ
ಅಷ್ಟಮಿ ಮರುದಿನದ ನವಮಿಗೂ ಮಾತೆಯರು ಮಾಡುವ ವ್ರತಾಚರಣೆಯ ನವಮಿಗೂ ಸಂಬಂಧವಿಲ್ಲ.

ಹರಾನ್ವಿತಾಮಿಂದುಮುಖೀಂ ಸರ್ವಾಭರಣಭೂಷಿತಾಮ್ !
ವಿಮಲಾಂಗೀಂ ವಿಶಾಲಾಕ್ಷೀಂ ಚಿಂತಯಾಮಿ ಅತೀಂದ್ರಿಯ ಶಿವಾಮ್!!
ತಾತ್ಪರ್ಯ
ಶಿವನೊಡನೆ ಎಲ್ಲಾ ಆಭರಣಗಳಿಂದ ಕಂಗೊಳಿಸುತ್ತಿರುವವಳೂ,ಶುದ್ಧವಾದ ಅವಯವಗಳಿಂದ ಕೂಡಿ ವಿಶಾಲವಾದ ಕಣ್ಣುಗಳಿಂದ ಕಂಗೊಳಿಸುತ್ತಿರುವವಳೂ ಆದ ಶಿವನ ಅರ್ಧಾಂಗಿ ಸತಿದೇವಿಯನ್ನು ಧ್ಯಾನಿಸುತ್ತಾ.

photo courtesy : Google

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!