Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಅವಧೂತ ಮಹಿಮೆ / Avadhūta Mahime

ಅವಧೂತ ಗುರು 6 Avadootha 6

Published

on

ಕನ್ನಡ1 of 2
To Change Language, Click ← → (arrow) Button

ಬೆಂಗಳೂರು ನಿವಾಸಿಗಳಾದ ವಿಜಯಕುಮಾರ್ ಮತ್ತು ಸರ್ವಮಂಗಳ ದಂಪತಿಗಳ ಪುತ್ರಿಯಾಗಿ ಕುಮಾರಿ ರಂಜಿತಾರವರು ಸಖರಾಯಪಟ್ಟಣದ ಅವಧೂತ ಶ್ರೀ ವೆಂಕಟಾಚಲಯ್ಯ ನವರ ಪರಮಭಕ್ತರು. ಆಕೆಗೆ ಅರಸೀಕೆರೆ ಮೂಲದ ಶ್ರೀಮತಿ ಚೂಡಾಮಣಿ ಕೃಷ್ಣಮೂರ್ತಿ ದಂಪತಿಗಳ ಸುಪುತ್ರರಾದ ಶ್ರೀರಾಮ್ ಸಚಿನ್
ಜೊತೆಗೆ ಮದುವೆಯಾಯಿತು‌.ಶ್ರೀಮತಿ ಚೂಡಾಮಣಿ ಕೃಷ್ಣಮೂರ್ತಿಯವರು
ಬೆಲಗೂರಿನ ಅವಧೂತ ಶ್ರೀ ಬಿಂದುಮಾಧವ ಶರ್ಮರ ಶಿಷ್ಯರು.ಶ್ರೀರಾಮ್ ಸಚಿನ್ ತಮ್ಮ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾದ ಅರ್ಧಾಂಗಿಯನ್ನು ತಮ್ಮ ಗುರುಗಳ ದರ್ಶನಕ್ಕೆ ಬೆಲಗೂರಿಗೆ ಕುಟುಂಬ ಸಮೇತರಾಗಿ ಕರೆದುಕೊಂಡು ಬಂದರು.ರಂಜಿತಾ ರವರು ಅವಧೂತ ಗುರುಗಳ ದರ್ಶನ ಮಾಡುವಾಗ ಅವರಿಗೆ ಬಿಂದುಮಾಧವ ಶರ್ಮರಲ್ಲಿ ಶ್ರೀ ವೆಂಕಟಾಚಲಯ್ಯ ನವರ ಚೈತನ್ಯ ಕಂಡಂತಾಯಿತು‌.ಅದೇ ಸಮಯದಲ್ಲಿ ಬಿಂದುಮಾಧವ ಶರ್ಮರು “ನಾನು ಅವನು ಒಂದೇ” ಎಂದು ಹೇಳಿ ಹರಸಿದರು. ಆಕೆಗೆ ಪರಮಾಶ್ಚರ್ಯವಾಗಿ ಗುರುಗಳ ಪಾದಕ್ಕೆ ಮತ್ತೆ ಮತ್ತೆ ನಮಸ್ಕರಿಸಿದರು. ತನಗಾದ ಸಂತೋಷವನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡು ತಮ್ಮ ಕುಟುಂಬದೊಡನೆ ಸ್ವಸ್ಥಾನಕ್ಕೆ ಮರಳಿದರು.

ಸಂತೋಷಮಯ ಜೀವನ ಸಾಗಿತ್ತಾದರು,ಮದುವೆ ಆಗಿ ಕೆಲವರ್ಷಗಳು ಕಳೆದರು ಮಕ್ಕಳಾಗಿಲ್ಲವಲ್ಲ ಎಂಬ ಚಿಂತೆಯೊಂದಿತ್ತು.ಅವದೂತ ಗುರುಗಳಲ್ಲಿ ಈ ವಿಷಯ ಅರಿಕೆಮಾಡಿಕೊಳ್ಳಬೇಕೆಂದು ನಿರ್ಧರಿಸಿ ಬೆಲಗೂರಿಗೆ ಹೋದರು.

ಅವಧೂತರ ದರ್ಶನದ ಸಮಯದಲ್ಲಿ ಗುರುಗಳು ಆಕೆಯನ್ನು ಕಂಡಾಕ್ಷಣ ಆಕೆ ಬೇಡುವ ಮುಂಚೆಯೇ ಆಕೆಗೆ ಸತ್ಸಂತಾನವಾಗುತ್ತದೆ ಚಿಂತಿಸದಿರು ಎಂದು ಆಶಿರ್ವಾದಿಸಿದಾಗ ಆಕೆಗೆ ಮಹದಾಶ್ಚರ್ಯ. ಕೆಲವೇ ತಿಂಗಳಲ್ಲಿ ಆಕೆ ಗರ್ಭವತಿಯಾಗಿ ಮುದ್ದಾದ ಹೆಣ್ಣುಮಗುವಿಗೆ ಜನ್ಮನೀಡಿದರು.

ಅವಧೂತರನ್ನು ಶ್ರೀಮತಿ ರಂಜಿತಾ ಶ್ರೀರಾಮ್ ಸಚಿನ್ ಕುಟುಂಬ ಸದಾ ಸ್ಮರಿಸುತ್ತಾ ಸಂತೋಷದ ಜೀವನವನ್ನು ನೆಡೆಸುತ್ತಿದ್ದಾರೆ.

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!