Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗಗಿರಿಯ ಜೀವನ್ಮುಕ್ತ ಜಗದ್ಗುರುಗಳು 10. Jeevanmukta Jagadguru of Sringeri 10

Published

on

ಕನ್ನಡ1 of 2
To Change Language, Click ← → (arrow) Button

ಗುರು ಮಹಿಮೆ 35

ಬ್ರಿಟಿಷ್ ಸರ್ಕಾರದ ಉದ್ಯೋಗದಿಂದ ನಿವೃತ್ತರಾಗಿ,ತಕ್ಕಮಟ್ಟಿಗೆ ಆಚಾರಶೀಲರಾಗಿದ್ದಂತಹ ಶಿಷ್ಯರೊಬ್ಬರು ಶೃಂಗೇರಿಗೆ ಬಂದು ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ದರ್ಶನ ಮಾಡಿ,ತಾವು ಕಟ್ಟುನಿಟ್ಟಾಗಿ ಆಧ್ಯಾತ್ಮಿಕ ಸಾಧನೆ ಮಾಡುವ ಇಂಗಿತ ಹೊಂದಿರುವುದಾಗಿ,ಸಂನ್ಯಾಸ ಸ್ವೀಕರಿಸಲು ಅಪ್ಪಣೆಯನ್ನು ದಯಪಾಲಿಸಬೇಕಂದು ಬೇಡಿಕೊಂಡರು.”ಮಕ್ಕಳಿಗೆಲ್ಲ ಸಾಕಷ್ಟು ವಿದ್ಯಾಭ್ಯಾಸ ಮಾಡಿಸಿದ್ದೇನೆ:ಹೆಣ್ಣು ಮಕ್ಕಳಿಗೆಲ್ಲಾ ವಿವಾಹ ಮಾಡಿದ್ದೇನೆ,ಬೇರೆ ಯಾವ ಜವಾಬ್ದಾರಿಯೂ,ಯೋಚನೆಯೂ ಇಲ್ಲ. ಇನ್ನು ಮುಂದೆ ನಾನು ಆಧ್ಯಾತ್ಮಿಕ ಸಾಧನೆಯಲ್ಲಿ ನಿರತನಾಗಬೇಕೆಂದು ಸಂಕಲ್ಪ ಮಾಡಿದ್ದೇನೆ.ಸನ್ನಿಧಾನವು ಕೃಪೆತೋರಿ ಸಂನ್ಯಾಸಕ್ಕೆ ಅಪ್ಪಣೆಯನ್ನು ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿಕೊಂಡರು.

“ನಿಮಗೆ ಇನ್ನೂ ಪುತ್ರ ವಾಂಛಲ್ಯವಿದೆ.ಅದನ್ನು ಕಳೆದುಕೊಂಡು ಅನಂತರ ಸಂನ್ಯಾಸ ಸ್ವೀಕರ ಮಾಡುವ ಯೋಚನೆಯನ್ನು ಮಾಡಬೇಕು. ಈಗಲೇ ಬೇಡ” ಎಂದರು ಗುರುವರ್ಯರು | ಆತನಿಗೆ ತನ್ನ ಆಂತರ್ಯವನ್ನು ಅರಿತ ಗುರುದೇವರ ಅಂತರ್ದೃಷ್ಟಿಯ ಸೂಕ್ಷ್ಮತೆ ಅರಿವಾಯಿತು. ಸಂನ್ಯಾಸ ತೆಗೆದುಕೊಳ್ಳಲು ಅಪ್ಪಣೆಯನ್ನು ಬೇಡುತ್ತಿದ್ದ ಸಮಯದಲ್ಲೇ ತನ್ನ ಕೊನೆಯ ಮಗನಿಗೆ ಒಳ್ಳೆಯ ಕಡೆ ಸಂಬಂಧವನ್ನು ನೋಡಿ ಮದುವೆ ಮಾಡಿಬಿಡಬೇಕು ಎಂಬ ಆಲೋಚನೆ ಆತನ ಮನಸ್ಸಿನಲ್ಲಿ ಸುಳಿದಾಡುತ್ತಿದ್ದವು.ಜಗದ್ಗುರು ಮಹಾಸ್ವಾಮಿಗಳಿಗೆ ಸಾಷ್ಟಾಂಗವೆರಗಿ ತನ್ನ ಸ್ವಸ್ಥಾನಕ್ಕೆ ಆತ ಹಿಂತಿರುಗಿದರು.

ಜಗದ್ಗುರು ಶ್ರೀಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಚರಿತೆಯಿಂದ ಆಯ್ದಭಾಗಯಿದಾಗಿದೆ

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!