Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಗುರು ಮಹಿಮೆ 36 Guru Mahime 36

Published

on

ಕನ್ನಡ1 of 2
To Change Language, Click ← → (arrow) Button

19 ನೆಯ ಶತಮಾನದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯ ಪ್ರಭಾವದಿಂದಾಗಿ ನಮ್ಮ ಸನಾತನ ಸಂಸ್ಕೃತಿಯ ಬಗ್ಗೆ ಕೀಳರಿಮೆ ಇದ್ದ ಒಬ್ಬರು 33 ನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳ(ಕ್ರಿ.ಶ 1879 – 1912) ಬಳಿ ಬಂದು ಹೀಗೆ ಪ್ರಶ್ನಿಸಿದರು.ಶ್ರಾದ್ಧದ ಪ್ರಯೋಜನವೇನು?ಇದು ಕುರುಡು ನಂಬಿಕೆಯಲ್ಲವೆ?ವಿಧಿಗೆ ಇಲ್ಲಿ ಏನನ್ನೋ ಅರ್ಪಿಸಿದರೆ ಪಿತೃದೇವತೆಗಳು ತೃಪ್ತಿಹೊಂದುವರೆಂಬುದು ಮೌಢ್ಯವಲ್ಲವೆ ? ನಾವು ಇಟ್ಟ ಪಿಂಡಗಳೆಲ್ಲವೂ ನಮ್ಮೆದುರಿಗೆ ಇರುವಾಗ ಪಿತೃಗಳು ಸ್ವೀಕರಿಸಿ ಸಂತೃಪ್ತರಾದರೆಂದು ನಂಬುವುದು ಹೇಗೆ ? ಇದಕ್ಕಿಂತ ಹೆಚ್ಚಿನ ಪೆದ್ದುತನ ಇರಲು ಸಾಧ್ಯವೇ?

ಅದಕ್ಕೆ ಗುರುಗಳು ಮುಗುಳ್ನಕ್ಕು ಉತ್ತರ ನೀಡಿದರು. ಟೇಲಿಗ್ರಾಫೀಕ್ ಮನಿಆರ್ಡರ್ ಗಳನ್ನು ಉದಾಹರಣೆಗೆ ಇಟ್ಟುಕೊಳ್ಳಿ.ಆಡಳಿತದವರು ಅದಕ್ಕೆ ಸಂಬಂಧಿಸಿದ ಏನೋ ವಿಧಿವಿಧಾನಗಳನ್ನು ರೂಪಿಸಿದ್ದಾರೆ.ನೀವು ಅದಕ್ಕನುಗುಣವಾಗಿ ನೆಡೆದುಕೊಂಡಲ್ಲಿ ನೀವು ನೀಡಿದ ಹಣವು ನಿಮ್ಮ ಮುಂದಿನ ಟೇಬಲ್ ಮೇಲೆಯೇ ಇದ್ದರೂ ಅದು ಸಂಬಂಧಪಟ್ಟವರಿಗೆ ಅವರಿದ್ದಲ್ಲಿಯೇ ತಲುಪಿರುತ್ತದೆ. ಹೀಗೆ ಮಾನವೀಯ ತಂತ್ರಗಳೇ ಮನುಷ್ಯರನ್ನು ತೃಪ್ತಿಪಡಿಸಬಲ್ಲದಾದರೆ ದೈವೀ ಶಕ್ತಿಗಳಿಗೆ ಅಸಾಧ್ಯವೇ? ಆದರೆ ಶಾಸ್ತ್ರಕ್ಕನುಗುಣವಾಗಿ ಆಚರಿಸಬೇಕು ಅಷ್ಟೇ ಲೌಕಿಕ ಪ್ರಸಂಗಗಳಲ್ಲಿಯೂ ಅಷ್ಟೇ.ಕ್ರಮಬದ್ಧತೆ ಮುಖ್ಯ.ನೀವು ಸರಿಯಾದ ವಿಧಾನವನ್ನು ಅನುಸರಿಸಿದ್ದರೆ ಸರಿ.ಇಲ್ಲದಿದ್ದರೆ ಅಪೇಕ್ಷಿತ ಪರಿಣಾಮ ಉಂಟಾಗುವುದಿಲ್ಲ. ಅಂತೆಯೇ ನಮ್ಮ ಪೂರ್ವಜರು ಜ್ಞಾನಿಗಳು.ಏನನ್ನು ಮಾಡಿದರೆ ಅವರು ನಿರ್ಗಮಿಸಿದ ಮೇಲೆಯೂ ಅವರು ತೃಪ್ತರಾಗುವರೋ ಆ ವಿಧಾನವನ್ನು ಅವರು ನಮಗೆ ಬೋಧಿಸಿದ್ದಾರೆ.ನೀವು ಅದನ್ನು ಅನುಸರಿಸಿದರೆ ನಿಜಕ್ಕೂ ಅವರು ಸಂತೃಪ್ತರಾಗುತ್ತಾರೆ.
ಗುರುಗಳ ಮಾತುಗಳನ್ನು ಕೇಳಿ ಅವರ ಪಾದಕ್ಕೆರಗಿ ಬದಲಾದ ಮನಸ್ಸಿನಿಂದ ಸಮಾಧಾನ ಹೊಂದಿ ಆ ವ್ಯಕ್ತಿಯು ಹಿಂತಿರುಗಿದರು.

ಜಗದ್ಗುರು ಶ್ರೀ ಸಚ್ಚಿದಾನಂದಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳ ಚರಿತ್ರೆಯಿಂದ ಆಯ್ದ ಭಾಗ. ಪಿತೃಪಕ್ಷದ ಸಂದರ್ಭದಲ್ಲಿ.

ಕನ್ನಡ1 of 2
To Change Language, Click ← → (arrow) Button

1 ಅಭಿಪ್ರಾಯ

1 Comment

  1. vinayaka Shastry

    September 7, 2017 at 5:09 am

    The best example thanks

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!