Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ಶೃಂಗಗಿರಿಯ ಜೀವನ್ಮುಕ್ತ ಜಗದ್ಗುರುಗಳು 11. Jeevanmukta Jagadguru of Sringeri 11

Published

on

ಕನ್ನಡ1 of 2
To Change Language, Click ← → (arrow) Button

ಜಗದ್ಗುರು ಮಹಿಮೆ 37

ಆಧ್ಯಾತ್ಮೀಕ ಸಾಧಕರಾದ
ಆರ್.ಕೃಷ್ಣಸ್ವಾಮಿ ಅಯ್ಯರ್ ರವರು ಶೃಂಗೇರಿಯ ಜಗದ್ಗುರುಗಳಲ್ಲಿ ಪರಮಭಕ್ತಿಯನ್ನು ಹೊಂದಿದ್ದರು.ಮುಂದೆ ಇವರು ತುರಿಯಾಶ್ರಮವನ್ನು ಸ್ವೀಕರಿಸಿ ಶ್ರೀ ಜ್ಞಾನಾನಂದ ಭಾರತೀ ಎಂಬ ಅಭಿಧಾನವನ್ನು ಪಡೆದು ತಪೋಮಗ್ನರಾದರು.ಶೃಂಗೇರಿ ಗುರುಗಳ ಕುರಿತು ಹಲವಾರು ಕೃತಿಗಳನ್ನು ಇಂಗ್ಲೀಷ್ ಮತ್ತು ತಮಿಳಿನಲ್ಲಿ ರಚಿಸಿದ್ದಾರೆ.

1926 ರಲ್ಲಿ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ತಿರುನಲ್ವೇಲಿ ನಗರಕ್ಕೆ ಚಿತ್ತೈಸಿದಾಗ ಗುರುಗಳ ಮೇಲೆ ಶ್ಲೋಕವೊಂದನ್ನು ರಚಿಸಿದ್ದರು. ಹಲವಾರು ಬಾರಿ ಪ್ರಯತ್ನಿಸಿದರು ಆ ಶ್ಲೋಕವನ್ನು ಗುರುಗಳ ಎದುರಿನಲ್ಲಿ ಸ್ತುತಿಸುವ ಇವರ ಬಯಕೆ ಈಡೇರಿರಲಿಲ್ಲ.

1963 ರಲ್ಲಿ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ಸಮಾಧಿಯ ಶಿಲಾಫಲಕದ ಮೇಲೆ ಕೆತ್ತಿಸಲು ಶ್ಲೋಕವೊಂದನ್ನು ಹುಡುಕುತ್ತಿರುವಾಗ ಕೃಷ್ಣಸ್ವಾಮಿಗಳು ರಚಿಸಿದ ಈ ಶ್ಲೋಕ ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಗಮನಕ್ಕೆ ಬಂದಿತು.ನಂತರ ಅದನ್ನು ಸಮಾಧಿಯ ಶಿಲಾಫಲಕದ ಮೇಲೆ ಕೆತ್ತಿಸಿದರು.

ಮುಂದೊಂದು ದಿನ ಈ ಅಧಿಷ್ಠಾನದ ದರ್ಶನಕ್ಕೆ ಆಗಮಿಸಿದ ಶ್ರೀ ಜ್ಞಾನಾನಂದ ಭಾರತಿಗಳು ಚಕಿತಗೊಂಡರು.ಪ್ರತ್ಯಕ್ಷವಾಗಿ ಗುರುಗಳ ಮುಂದೆ ಸ್ತುತಿಸಲಾಗದಿದ್ದರು ಸದಾ ಗುರುಗಳ ಸಮ್ಮುಖದಲ್ಲಿರುವಂತೆ ಅನುಗ್ರಹಿಸಿದ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ಕಾರುಣ್ಯಪೂರ್ಣ ಕೃಪಾಶಿರ್ವಾದಕ್ಕೆ ಭಾವುಕರಾಗಿ ಗುರುಗಳಿಗೆ ಮತ್ತೆ ಮತ್ತೆ ಸಾಷ್ಟಾಂಗವೆರಗಿದರು.

ಜಯತು ಜಯತು ನಿತ್ಯಂ ಚಂದ್ರಮೌಳೀರ್ಮಹೇಶಃ

ಜಯತು ಜಯತು ನಿತ್ಯಂ ಶ್ರೀ ಶಾರದಾಭೀಷ್ಟದಾತ್ರೀ|

ಜಯತು ಜಯತು ನಿತ್ಯಂ ಶಂಕರೋದೇಶಿಕೇಂದ್ರಃ

ಜಯತು ಜಯತು ನಿತ್ಯಂ ಚಂದ್ರಚೂಡೋಗುರುರ್ನಃ||

ಶ್ರೀಕೃಷ್ಣಸ್ವಾಮಿಗಳು(ಜ್ಣಾನಾನಂದ ಭಾರತೀಗಳು)ರಚಿಸಿದ ಈ ಶ್ಲೋಕವನ್ನು ಇಂದಿಗೂ ನಾವು ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ಅಧೀಷ್ಠಾನದಲ್ಲಿ ಕಾಣಬಹುದಾಗಿದೆ.

ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ಆರಾಧನೆಯ ಸಂದರ್ಭದಲ್ಲಿ ಗುರಗಳ ದಿವ್ಯಚರಣಾರವಿಂದಗಳಲ್ಲಿ ಸಾಷ್ಟಾಂಗವೆರಗುತ್ತಾ

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!