Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಜಗದ್ಗುರು ಮಹಿಮೆ‌ / Jagadguru Mahime

ದಿವ್ಯ ದೃಷ್ಟಿ 2 Divya Drusti 2

Published

on

ಗುರು ಮಹಿಮೆ ‌28

ಹಲವು ವರುಷಗಳಿಂದ ಶೃಂಗೇರಿಗೆ
ನಿರಂತರವಾಗಿ ಭಕ್ತನೊಬ್ಬ ಬರುತ್ತಿದ್ದ.ಕೆಲವು ದಿನಗಳ ಕಾಲ ಇಲ್ಲಿದ್ದು ಶ್ರೀ ಮಲಹಾನಿಕರೇಶ್ವರ,ಶಾರದಾಂಬ,ವಿದ್ಯಾಶಂಕರ,ಹರಾವರಿ ದುರ್ಗಾಂಬ ಸೇರಿದಂತೆ ಶೃಂಗೇರಿ ಪರಿಸರದ ದೇವರ ಮತ್ತು ಶೃಂಗಗಿರಿಯ ಯತಿಶ್ರೇಷ್ಠರ ದರ್ಶನ ಮತ್ತು ಸೇವೆಗಳನ್ನು ಮಾಡುತ್ತಿದ್ದ.ಹೀಗೆ
ಒಮ್ಮೆ ಶೃಂಗೇರಿಗೆ ಬಂದ.ತುಂಬಾ ಧರ್ಮಶ್ರದ್ಧೆಯುಳ್ಳ,ಉತ್ತಮ ಸಂಸ್ಕಾರವತಿಯಾದ ತನ್ನ ಮಗಳಿಗೆ ವರನನ್ನು ಹುಡುಕುತ್ತಿದ್ದಾತನ ತಲೆಯಲ್ಲಿ ಚಿಂತೆಯೊಂದು ಈ ಸಲ ಬರುವಾಗ ತುಂಬಿತ್ತು.ಸಹಜವಾಗಿಯೇ ಎಲ್ಲಾ ತಾಯಿ-ತಂದೆಗಳಿಗಿರುವಂತೆಯೇ ತನ್ನ ಮಗಳಿಗೆ ಸರಿಸಮಾನಾದ, ಧರ್ಮಶ್ರದ್ಧೆಯುಳ್ಳ
ಯೋಗ್ಯವರ ಸಿಗುತ್ತಾನೋ ಇಲ್ಲವೋ ಎಂಬುದು ಆತನ ಚಿಂತೆಯಾಗಿತ್ತು.ಈ ವಿಷಯವನ್ನು ಜಗದ್ಗುರು ಮಹಾಸ್ವಾಮಿಗಳ ಬಳಿ ನಿವೇದಿಸು ಎಂದು ಸ್ನೇಹಿತರೊಬ್ಬರು ಸಲಹೆನೀಡಿದರು.ಇಂತಹ ಲೌಕಿಕ ವಿಷಯಗಳನ್ನು ಅವರ ಬಳಿ ಕೇಳುವುದು ಹೇಗೆ ಎನ್ನುವ ಸಂಕೋಚದಿಂದ ಆತ
ಕೇಳುವುದಿಲ್ಲವೆಂದು ಖಡಾಖಂಡಿತವಾಗಿ ಸ್ನೇಹಿತರಿಗೆ ತಿಳಿಸಿದ.ದೇವರ,ಗುರುಗಳ ಸೇವೆಗಳನ್ನು ಈ ಬಾರಿಯೂ ಕೆಲವು ದಿನಗಳ ಕಾಲ ಮಾಡಿದ.ನಂತರ ಊರಿಗೆ ತೆರಳುವ ಮೊದಲು
ಗುರುಗಳ ದರ್ಶನಗೈದು ಅವರಿಂದ ಮಂತ್ರಾಕ್ಷತೆ ತೆಗೆದುಕೊಳ್ಳುಲು ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಬಳಿಗೆ ಬಂದ.ಆತನನ್ನು ಕರುಣೆಯಿಂದ ನೋಡಿದ ಗುರುಗಳು “ನಿಮ್ಮ ಮಗಳಿಗೆ ಮದುವೆ ಮಾಡಬೇಕೆಂಬ ನಿಮ್ಮ ಪ್ರಯತ್ನಗಳು ಹೇಗಿವೆ?ಒಳ್ಳೆಯ ಸಂಬಂಧ ಸಿಕ್ಕೆದೆಯೇನು?” ಎಂದು ಪ್ರಶ್ನಿಸಿದರು. ಆಶ್ಚರ್ಯ ಪಟ್ಟ ಆತ “ಇಲ್ಲ ಸ್ವಾಮಿ, ಇನ್ನೂ ಸಿಕ್ಕಿಲ್ಲ. ಯೋಗ ಸಂಬಂಧ ಸಿಗುವುದು ಸಮಸ್ಯೆಯಾಗಿಯೇ ಇದೆ” ಎಂದು ಉತ್ತರಿಸಿದ. ಆಗ ಜಗದ್ಗುರು ಮಹಾಸ್ವಾಮಿಗಳು “ನೀವು ದುಃಖಪಡಬೇಕಾಗಿಲ್ಲ.ಅಮ್ಮನವರ ಅನುಗ್ರಹದಿಂದ ಆಕೆಗೆ ಯೋಗ್ಯ ವರನೊಂದಿಗೆ ವಿವಾಹವಾಗುತ್ತದೆ”. ಎಂದರು. ಗುರುಗಳ ದಿವ್ಯದೃಷ್ಟಿಗೆ ಆ ಭಕ್ತ ಆಶ್ಚರ್ಯಚಕಿತನಾದ.ಮುಂದೆ ಅವನು ಯೋಚಿಸಿದ್ದಕ್ಕಿಂತಲೂ ಉತ್ತಮನಾದ ಸನ್ನಡತೆಯ ಹುಡುಗನೊಂದಿಗೆ ಮಗಳ ವಿವಾಹವಾಯಿತು. ಗುರುಗಳ ಅನುಗ್ರಹವನ್ನು ಆತ ಸದಾ ಸ್ಮರಿಸಿ ಮನಸಾ ಗುರುಗಳಿಗೆ ಸದಾ ವಂದಿಸುತ್ತಿದ್ದ.

ಪ್ರತಿ ಮಂಗಳವಾರ ಗುರುಮಹಿಮೆ ಅಂಕಣದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಅನುಗ್ರಹ ಲೀಲಾಮೃತಗಳು ಮೂಡಿಬರುತ್ತದೆ…
ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಆದ Jnānadā ಗೆ ಭೇಟಿ ನೀಡಿ…

English version

Guru Mahime 28

A devotee had frequented visiting Śṛngerī for the past several years. He used to promptly indulge in the seva of mother Śāradāmba, the other deities in the vicinity and of the presiding āchārya, Jagadguru Śrī Śrī Bhāratī Tīrtha Mahāswāmīji. Once during one of his visits to the holy place, his mind was engrossed with the thought of finding a groom for his well-educated, well-qualified god fearing daughter. Just like any other parent, he too wanted to marry off his daughter to a meritorious befitting gentleman. He was a little worried as to where he would find the perfect match for his daughter. One of his friends had even advised him to bring the issue to the Jagadguru Mahāswāmīji’s notice and seek for his help and blessings. Having thought that it was embarrassing to address an issue as mundane and worldly as that in front of a detached, sanyāsi who spends his time dwelling in the contemplation of the ultimate, he agreed to not do so. He did seva as he had come for and decided to return home. He went to have darshan of the Jagadguru one last time before he left Śṛngerī and receive the mantrākśatā. As he stood with folded hands in front of the Jagadguru, Mahāswāmīji with kindness in his eyes asks him, “how are the efforts towards finding a groom for your daughter coming? Have you found a suitable groom yet?”, a completely dumbfounded devotee replies, “no, Mahāswāmīji. Finding a suitable groom has become very tough”, to which Jagadguru Mahāswāmīji says, “you do not have to worry, with the blessings of mother Śāradāmba, you will find a suitable groom for your daughter”. The devotee was filled with awe and devotion after the conversation. Thereafter, he found an extremely eligible groom for his daughter. Remembering the blessings of the Jagadguru Mahāswāmīji, he performed salutations to the benevolent master in his mind.

selected events from the divine life of Jagadguru Bhāratī Tīrtha Mahāswāmīji will be posted on our e-magazine ‘Jnānadā’ on every tuesday.
Visit our facebook page, ‘Jnānadā’ for further information.

3 ಅಭಿಪ್ರಾಯಗಳು

3. ಅಭಿಪ್ರಾಯಗಳು

 1. anuradha goyal

  July 25, 2017 at 8:46 am

  Swamiji is totally Divine.God itself.

 2. ಉದಯ ಭಾಸ್ಕರ

  July 25, 2017 at 5:03 pm

  ಗುರುಗಳ ಪಾದರವಿಂದಗಳಿಗರ ಅನಂತಾನಂತ ಸಿರಸಾನಮಸ್ಕಾರಗಳು.

 3. subramanya

  July 27, 2017 at 10:30 am

  om namo guruvenama..

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!