Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಅಕ್ಷರಾಭ್ಯಾಸ Aksharabhyasa

Published

on

ಕನ್ನಡ1 of 2
To Change Language, Click ← → (arrow) Button

 

ಶೃಂಗೇರಿ ಶರನ್ನವರಾತ್ರಿಯ ವಿಶೇಷ 6

ಶ್ರೀಶಾರದೆಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ

ಭಾರತೀಯ ಸಂಸ್ಕೃತಿಯ ಪ್ರಕಾರ ಮಕ್ಕಳಿಗೆ ಅನೇಕ ಶಾಸ್ತ್ರಗಳಿವೆ. ನಾಮಕರಣ, ಅನ್ನಪ್ರಾಶನ, ಅಕ್ಷರಾಭ್ಯಾಸ ಎಂಬುದು ಕೂಡ ಪದ್ಧತಿಯಲ್ಲಿದೆ. ‘ಅಕ್ಷರ’ ಎಂಬ ಶಬ್ದವು ವೃತ್ತಿಯಾದರೋ ‘ನಕ್ಷರತಿ ಇತಿ ಅಕ್ಷರಂ’ ಎಂಬುದಾಗಿ ‘ಯಾವುದಕ್ಕೆ ಅಳಿವಿಲ್ಲವೋ ಅದು ಅಕ್ಷರ’ ಎಂದು ಅರ್ಥವಾಗುತ್ತದೆ.

ವಿದ್ಯಾರಂಭ ಎಂಬುದು ಒಂದು ಸಂಸ್ಕಾರ. ಈ ಸಂಸ್ಕಾರವು ಬಹಳ ಪೂರ್ವದಿಂದಲೂ ಚೂಡಾಕರ್ಮದೊಡನೆಯೇ ಮಾಡುತ್ತಿದ್ದರು. ವಾಲ್ಮೀಕಿ ಮಹರ್ಷಿಗಳು ಲವ-ಕುಶರಿಗೆ ಚೂಡಾಕರ್ಮವಾದ ಮೇಲೆ ವಿದ್ಯಾರಂಭ ಮಾಡಿಸಿದರು.

ಶಾಸ್ತ್ರದ ಪ್ರಕಾರ ಮಕ್ಕಳಿಗೆ ಐದನೇ ವರ್ಷ, ಐದನೇ ತಿಂಗಳ, ಐದನೇ ದಿನ ಅಕ್ಷರಾಭ್ಯಾಸ ಮಾಡಬೇಕು. ಈಗಿನ ಮಕ್ಕಳು ಈ ವೇಳೆಗಾಗಲೇ ಶಾಲೆಗೆ ಹೋಗುತ್ತಿರುತ್ತಾರೆ. ಆದ್ದರಿಂದ ಅವರ ಬೆಳವಣಿಗೆ ಮತ್ತು ಬುದ್ಧಿ ತಿಳಿಸುವ ಇದಕ್ಕೆ ಮುಂಚೆಯೇ ಅಂದರೆ ಮೂರು ವರ್ಷ ತುಂಬಿದ ಮೇಲೆ ಅಕ್ಷರಾಭ್ಯಾಸ ಪ್ರಾರಂಭಿಸುವುದು ಉತ್ತಮ.

ಅಕ್ಷರಾಭ್ಯಾಸವನ್ನು ಪೋಷಕರು ಮಗುವಿನ ಕೈಯನ್ನು ಹಿಡಿದುಕೊಂಡು ತಟ್ಟೆಯ ಮೇಲೆ ಇರುವ ಅಕ್ಕಿಯ ಮೇಲೆ ಗಣೇಶ,ಗುರು,ಶಾರದಾಂಬ,ಕುಲದೇವರ ಹೆಸರುಗಳನ್ನು ಅರ್ಚಕರ ಮಾರ್ಗದರ್ಶನದಲ್ಲಿ ಬರೆಸುತ್ತಾರೆ.

ಸಮಯ ಪ್ರತಿದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯ ತನಕ ಇರುತ್ತದೆ.ವಿಶೇಷ ಸಂದರ್ಭಗಳಲ್ಲಿ ಸಮಯದ ಬದಲಾವಣೆ ಇರುತ್ತದೆ.

ವಿದ್ಯಾಧಿದೇವತೆಯಾದ ಶಾರದೆಯ ಸನ್ನಿಧಿಯಲ್ಲಿ ಶಿಶುಗಳಿಗೆ ಅಕ್ಷರಾಭ್ಯಾ ಮಾಡಿಸುವುದರಿನಂದ ಆ ಮಕ್ಕಳು ವಿದ್ಯಾ ಪಾರಂಗತರಾಗುವುದರಲ್ಲಿ ಸಂಶಯವೇ ಇಲ್ಲ ಎಂಬುದು ಪ್ರಬಲವಾದ ನಂಬಿಕೆ.

ನ ಮಂತ್ರಂ ನ ಯಂತ್ರಂ ನ ವಾ ಸ್ತೋತ್ರರೀತಿಂ ವಿಜಾನೇಂಬ ವಕ್ತುಂ ಚ ಮದ್ದುಃಖರೀತಿಮ್ |
ತ್ವದಂಘ್ರಿಪ್ರಣಮ್ರೋ ನ ಪಾತ್ರಂ ಶುಚಃ ಸ್ಯಾತ್ ಇತಿ ತ್ವಾಂ ಪ್ರಪದ್ಯೇ ತವೈವ ಪ್ರಸಾದಾತ್ ||
(ಅಮ್ಮ! ನಾನು ಮಂತ್ರವನ್ನು ತಿಳಿದಿಲ್ಲ, ಯಂತ್ರವನ್ನು ತಿಳಿದಿಲ್ಲ ಅಥವಾ ನಿನ್ನನ್ನು ಸ್ತೋತ್ರಮಾಡುವ ವಿಧಾನವನ್ನು ತಿಳಿದಿಲ್ಲ ಮತ್ತು ನನ್ನ ದುಃಖವನ್ನು ಅರಿಕೆ ಮಾಡಲು ಅರಿಯೆನು.ನಿನ್ನ ಪಾದದಲ್ಲಿ ನಮಸ್ಕರಿಸಿದವನು ದುಃಖಕ್ಕೆ ಪಾತ್ರನಾಗುವುದಿಲ್ಲ ಎಂದು (ಎಂಬ ನಂಬಿಕೆಯಿಂದ) ನಿನ್ನ ಅನುಗ್ರಹದಿಂದಲೇ ನಿನ್ನನ್ನು ಮೊರೆಹೋಗುವೆನು.)

ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ರಚಿಸಿದ ಸ್ತೋತ್ರದಿಂದ ಶ್ರೀ ಶಾರದಾಂಬೆಗೆ ಶರಣೆನ್ನುತ್ತಾ….

ಕನ್ನಡ1 of 2
To Change Language, Click ← → (arrow) Button

ಕಮೆಂಟ್ ಮಾಡಲು-ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!