Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಸನಾತನ ಭಾರತ / Sanathana Bharatha

ಋಗುಪಾಕರ್ಮ Ṛg Upākarma

Published

on

 1. ಶೃಂಗೇರಿಯಲ್ಲಿ ಋಗುಪಾಕರ್ಮ ಶ್ರಾವಣ ಶುದ್ಧ ಪಂಚಮಿ (ನಾಗರಪಂಚಮಿ) ದಿನವೇ ಏಕೆ?

ಶ್ರಾವಣ್ಯಂ ಶ್ರವಣನಕ್ಷತ್ರೇ ಉಪಾಕರ್ಮ ಕುರ್ಯಾತ್ ಎಂಬಂತೆ ಸಾಮಾನ್ಯವಾಗಿ ಶ್ರಾವಣಮಾಸದ ಶ್ರವಣ ನಕ್ಷತ್ರದಲ್ಲಿ ಉಪಾಕರ್ಮದ ಆಚರಣೆ.ಈ ಬಾರಿ ಶ್ರಾವಣಮಾಸದ ಶ್ರವಣನಕ್ಷತ್ರಯುಕ್ತವಾದ ದಿನ ಚಂದ್ರಗ್ರಹಣವಿರುವುದರಿಂದ ಋಕ್ ಉಪಾಕರ್ಮದ ಆಚರಣೆ ಶ್ರಾವಣ ಪಂಚಮಿ(ನಾಗರಪಂಚಮಿ)ಯ ದಿನದಂದು.

ಆಚರಣೆ ನಾಗರಪಂಚಮಿಯ ದಿನವೇ ಏಕೆ ಎಂಬ ಕೂತೂಹಲದ ಕಾರಣ ತಿಳಿಯುವ .

ಆಶ್ವಲಾಯನ ಗೃಹ್ಯ ಸೂತ್ರದಲ್ಲಿ

(ಅಧ್ಯಾಯ- 3, ಕಂಡಿಕಾ – 5)
ಸೂತ್ರ – 2
ಓಷಧೀನಾಂ ಪ್ರಾದುರ್ಭಾವೇ ಶ್ರವಣೇನ ಶ್ರಾವಣಸ್ಯ !
ಸೂತ್ರ – 3
ಪಂಚಮ್ಯಾಂ ಹಸ್ತೇನ ವಾ!

 • ಲಘ್ವಾಶ್ವಲಾಯನ ಸ್ಮೃತಿಯಲ್ಲಿರುವ ಸೂತ್ರ

ಶ್ರವಣೇ ಸ್ಯಾದುಪಾಕರ್ಮ ಹಸ್ತೇ ವಾ ಶ್ರಾವಣಸ್ಯ ತು!

ಮೇಲಿನ ಎಲ್ಲಾ ಸೂತ್ರಗಳ ತಾತ್ಪರ್ಯ

ಋಗ್ವೇದಿಗಳು ಉಪಾಕರ್ಮವನ್ನು ಸಸ್ಯಗಳು ಚಿಗುರುವ ಶ್ರವಣನಕ್ಷತ್ರಯುಕ್ತವಾದ ಶ್ರಾವಣಮಾಸದಲ್ಲಿ ಅಥವಾ ಹಸ್ತಾನಕ್ಷತ್ರಯುಕ್ತವಾದ ಶ್ರಾವಣಮಾಸದಲ್ಲಿ ಅಥವಾ ಶ್ರಾವಣಮಾಸದ ಪಂಚಮಿಯಲ್ಲಿ ಮಾಡಬೇಕು.ಈ ಬಾರಿ ಶ್ರಾವಣ ಪಂಚಮಿ ಪ್ರಶಸ್ತವಾಗಿರುವುದರಿಂದ ಆದಿನವೇ ಆಚರಣೆ.

ಸಿಂಹ ಸಂಕ್ರಮಣ(ಆಗಸ್ಟ್ 17)ದ ದಿನ ಶ್ರಾವಣ ಮಾಸದಲ್ಲಿ ಶ್ರವಣನಕ್ಷತ್ರ ಬಂದಿದ್ದರಿಂದ ಕಳೆದ ಬಾರಿಯೂ ನಾಗರಪಂಚಮಿಯಂದೆ ಆಚರಣೆ ಎಂದು ಸೂರ್ಯಸಿದ್ಧಾಂತದ ಪಂಚಾಂಗಗಳಾದ ಶೃಂಗೇರಿ ಮತ್ತು ಹಾಲಾಡಿ ಪಂಚಾಂಗಗಳಲ್ಲಿ ಹೇಳಲ್ಪಟ್ಟಿತ್ತು,ಮಲೆನಾಡು ಭಾಗದ ಆಶ್ವಾಲಾಯನರು ಆ ದಿನವೇ ಉಪಾಕರ್ಮ ಆಚರಿಸಿದ್ದನ್ನ ನಾವಿಲ್ಲಿ ಸ್ಮರಿಸಿಬಹುದಾಗಿದೆ.

ಋಗ್ವೇದಿಗಳಲ್ಲೂ ಕೂಡಾ ಚಾಂದ್ರಮಾನ ಪದ್ಧತಿವರು ಶ್ರಾವಣ ಪಂಚಮಿಯಂದು ಆಚರಿಸುವರು.ಸೌರಮಾನ ಪದ್ಧತಿಯುಳ್ಳ ಆಶ್ವಲಾಯನರು ಕರ್ಕಾಟಕ ಮಾಸ ಇರುವುದರಿಂದ ಈಗ ಆಚರಿಸುವುದಿಲ್ಲ ಅವರು ಸಿಂಹಮಾಸದ ಶ್ರವಣ ನಕ್ಷತ್ರದಲ್ಲಿ ಆಚರಿಸುತ್ತಾರೆ.

ಈ ವರುಷ ಯಜುರ್ವೇದ ಉಪಾಕರ್ಮವು ಭಾದ್ರಪದ ಪೂರ್ಣಿಮೆಯಂದು(Sep 6) ಆಚರಿಸಲಾಗುತ್ತದೆ.ಆದರೆ ಕೆಲವು ಪ್ರಾಂತ್ಯದಲ್ಲಿ ಈ ಬಾರಿ ಬೋಧಾಯನ ಸೂತ್ರದವರು ಕಳೆದ ಆಷಾಢ ಪೂರ್ಣಿಮೆಯ ದಿನ ಆಚರಿಸಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಜ್ಞಾನದ e magazine ನಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿಗಳನ್ನು ಪಡೆಯಲು www.jnanada.in ಅಥವಾ ನಮ್ಮ ಫೇಸ್ ಬುಕ್ ಪೇಜ್ ಜ್ಞಾನದ ಕ್ಕೆ ಭೇಟಿ ಕೊಡಿ…

English version

Why is Ṛg Upākarma observed on the same day as Nāgara Pañcami in Śṛngerī?
Generally, Upākarma is observed on Śravaṇa nakśatra of the Śrāvaṇa māsa (Śrāvaṇyām Śravaṇa nakśatre Upākarmam kuryāt). this year, a lunar eclipse is going to take place on the designated Upākarma day and hence Upākarma will be observed on Śrāvaṇa Pañcami which also is the Nāgara Pañcami. Let us find out why it has to be on the day of the Nāgara Pañcami itself.
In the Āśvalāyana Gṛhya sūtra-
(adhyāya 3, kandikā 5)
Sūtra 2

Ośadheenām praadurbhāve Śravaṇena Śrāvaṇasya |
Sūtra 3

Pañcamyām hastena vā |

In the laghvāśvalāyana smṛti,
Śravaṇe syādupākarma haste vā Śrāvaṇasya tu |

The gist of all the above sutrās being-
Ṛgvedis should perform the Upākarma ritual on one of the following three days. The Śravaṇa nakśatra of shrāvaṇa māsa or the hasthā nakśatra of the Śrāvaṇa māsa or the Pañcami of the Śrāvaṇa māsa. Śrāvaṇa Pañcami being auspicious this year, Ṛg Upākarma will be observed on that day.
Following the Sūrya siddhānta Pañcāngās, namely the Śṛngerī, and the hālādi Pañcāngās, Ṛg Upākarma was observed on the day of the Nāgara Pañcami because the day of the simha sankramaṇa and Śrāvaṇa pourṇamī coincided last year. It is to be noted here that the Āśvalāyana brahmins belonging to the Malenādu region followed the same.
Even the followers of the Cāndramāna system performed the Upākarma rituals on the Śrāvaṇa Pañcami. Āashvalāyana brahmins following the souramāna system observe Ṛg Upākarma on the Śravaṇa nakśatra of simha māsa due to the ongoing karkāṭaka māsa.
The Yajur Upākarma will be observed on the bhādrapada pūrṇimā this year. But the followers of the Bodhāyana Sūtra of some regions performed the Upākarma ritual on the previous Āṣāḍha pūrṇimā.
To read the various articles on our e-magazine ‘Jnānadā’, visit our website www.jnanada.in or check out our facebook page.

5 ಅಭಿಪ್ರಾಯಗಳು

5. ಅಭಿಪ್ರಾಯಗಳು

 1. v raghunatha sharma

  July 27, 2017 at 6:04 pm

  Very very useful information. Thanks

 2. Guru Prasad

  July 28, 2017 at 1:31 am

  Informative dhanayavadagalu

 3. H.S.UMESH

  July 28, 2017 at 3:33 am

  Really good information thank you

 4. Madhu V

  July 28, 2017 at 1:52 pm

  Useful information

 5. K R Ashok

  July 29, 2017 at 5:49 am

  Thank you. Good information

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!