Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಇತರೆ / Others

ಶ್ರೀ ಸನ್ನಿಧಾನ ಚರಿತಂ 3, Sri Sannidhana Charitham 3

Published

on

ಗುರು ಮಹಿಮೆ 31

2009 ರಿಂದ ಜಗದ್ಗುರುಗಳ ನೇರ ಉಸ್ತುವಾರಿಯಲ್ಲಿ ಶ್ರೀ ಪ್ರಸಾದಶರ್ಮರು ವೈದಿಕ ಸಂಪ್ರದಾಯವನ್ನು ಕರತಲಾಮಲಕವನ್ನಾಗಿ ಮಾಡಿಕೊಂಡಿದ್ದಲ್ಲದೆ ವಿದ್ಯಾರ್ಥಿಯಾಗಿ,ವಿದ್ವಾಂಸರಾಗಿ,ಅಧ್ಯಾಪಕರಾಗಿ ಮತ್ತು ಭಕ್ತರಾಗಿ ಪರಿಪೂರ್ಣತೆಯನ್ನು ಸಾಧಿಸಿದರು.ಅವರ ಗುರುಭಕ್ತಿ,ಭಗವದ್ಭಕ್ತಿ,ಅಧ್ಯಯನದಲ್ಲಿನ ತಲ್ಲೀನತೆ,ವಿದ್ವತ್ತು ಮತ್ತು ಹಿರಿಯರ ವಿಷಯದಲ್ಲಿ ಗೌರವ ಇವುಗಳು ಜಗದ್ಗುರುಗಳಿಗೆ ಆನಂದವನ್ನುಂಟುಮಾಡಿದವು.ಆಧ್ಯಾತ್ಮಿಕ ಹಾದಿಯಲ್ಲಿ ಕ್ರಮಿಸಬೇಕಾದ ವಿರಕ್ತಿಯನ್ನು ಬೆಳಸಿಕೊಂಡರು.
ಮೇಲ್ಕಂಡ ವಿಶಿಷ್ಟ ಗುಣಗಳು ಶ್ರೀ ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮರಲ್ಲಿ ಸ್ಥಿರವಾಗಿರುವುದನ್ನ ಸಾಕ್ಷತ್ತಾಗಿ ಮನಗಂಡ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಇವರೇ ತಮಗೆ ಉತ್ತರಾಧಿಕಾರಿಯಾಗಲು ಸಮರ್ಥರು ಎಂದು ತೀರ್ಮಾನಿಸಿ ಜಗನ್ಮಾತೆ ಶಾರದಾಂಬೆಯ ಪ್ರೇರಣೆಯಿಂದ ಜಯನಾಮ ಸಂವತ್ಸರದ ಮಾಘ ಶುದ್ಧ ತದಿಗೆ (23/01/2015)
ಯಂದು ಬ್ರಹ್ಮಚಾರಿ ಶ್ರೀ ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮರಿಗೆ ಸಂನ್ಯಾಸ ದೀಕ್ಷೆ ನೀಡಿ ವಿಧುಶೇಖರಭಾರತೀ ಎಂಬ ಯೋಗಪಟ್ಟವನ್ನು ದಯಪಾಲಿಸಿ ತಾವು ಕೃತಕೃತ್ಯರಾದರು.

ಕಳೆದ ಎರಡೂವರೆ ವರ್ಷದ ತಮ್ಮ ಶಿಷ್ಯವೃತ್ತಿಯಲ್ಲಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನದವರು ಶೃಂಗೇರಿ ಶ್ರೀ ಶಾರದಾಪೀಠಾಧೀಶ್ವರರನ್ನು ಅನನ್ಯ ಶ್ರದ್ಧೆಯಿಂದ ಅನುಸರಿಸಿತ್ತಾ ಗುರುಗಳಿಗೆ ಆನಂದದಾಯಕರಾಗಿದ್ದಾರೆ.ಗುರುಗಳೊಡನೆ ಪ್ರವಾಸಮಾಡಿದಾಗಲೂ ಗುರುಗಳ ಮತ್ತು ಭಕ್ತರ ಅಪೇಕ್ಷೆಯಂತೆ ಅನುಗ್ರಹ ಭಾಷಣಗಳನದನ್ನು ಮಾಡಿ ತಮ್ಮ ವೈದುಷ್ಯ ಮತ್ತು ವಾಕ್ಚಾತುರ್ಯದಿಂದ ಗುರುಗಳನ್ನು ಸಂತೋಷಪಡಿಸಿ,

ಭಕ್ತರನ್ನು ಅನುಗ್ರಹಿಸಿದ್ದಾರೆ.

ಶ್ರೀವಿದ್ಯೋಪಾಸಕಂ ವಂದೇ ನಿರ್ಮಲ ಸ್ಫಟಿಕಾಕೃತಿಂ|
ವೇದ ವೇದಾಂತ ತತ್ತ್ವಜ್ಞಂ ವಿಧುಶೇಖರ ಭಾರತೀಮ್||
(ಶ್ರೀವಿದ್ಯಾ ಉಪಾಸಕರೂ, ಸ್ಫಟಿಕದಂತೆ ನಿರ್ಮಲ ವ್ಯಕ್ತಿತ್ವ ಹೊಂದಿದವರೂ, ವೇದವೇದಾಂತ ತತ್ತ್ವಜ್ಞರೂ ಆದಂತಹ ವಿಧುಶೇಖರ ಭಾರತೀ ಮಹಾಸ್ವಾಮೀಗಳಿಗೆ ವಂದಿಸುತ್ತೇನೆ.)

ನರಸಿಂಹರಾಜಪುರ ಕೃಷ್ಣ ಭಟ್ಟರು ರಚಿಸಿದ ಮೇಲಿನ ಶ್ಲೋಕದೊಂದಿಗೆ
ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನದವರಿಗೆ ಸಾಷ್ಟಾಂಗವೆರಗುತ್ತಾ.

ಜ್ಞಾನದ e-magazine ನಲ್ಲಿ ಬರುವ ವೈಶಿಷ್ಟ್ಯಪೂರ್ಣ ಮಾಹಿತಿ ಪಡೆಯಲು www.jnanada.in ಗೆ ಅಥವಾ fb page ಆದ Jnanada ಗೆ ಭೇಟಿ ನೀಡಿ.

 

English version

Guru Mahime 30

Vardhanti of Jagadguru Śrī Vidhuśekhara Bhāratī Sannidhānam 3
Under the direct tutelage of the Jagadguru Mahāswāmīji, Śrī Prasāda Śarma gained mastery in the subjects in connection with the Vaidika Sampradāya. The Jagadguru Mahāswāmīji was thoroughly impressed at how the young Brahmacāri made an impact on his surroundings as a student, a scholar, a mentor and as a devotee. The young Brahmacāri’s devotion towards the guru, his involvement in his studies, his scholarship and his well-mannered behaviour when it came to treating elders, made the Jagadguru Mahāswāmīji happy. He developed the detachment necessary to progress on the spiritual path. Having realised that the above traits had a strong foundation in the young Brahmacāri, the Jagadguru Mahāswāmīji with the blessings of goddess Śāradāmba, made an announcement that Śrī Kuppā Venkateśwara Prasāda Śarma is the chosen successor. Accordingly, the Jagadguru Mahāswāmīji blessed the young Brahmacāri with sanyāsa dīkshā on māgha shuddha tadige of the Jaya nāma samvatsara and gave him the yogapaṭṭa as Śrī Vidhuśekhara Bhāratī.
In the past year and a half, Jagadguru Śrī Vidhuśekhara Bhāratī Sannidhānam has been meeting up with the expectations of his guru and has been the reason for his happiness. Even during the several Vijaya Yātrās with their Guru, Śrī Sannidhānam has been thoroughly impressing their Guru with their scholarship and blessing the devotees.
Śrī vidyopāsakam vande nirmala sphaṭikākrutim |

Veda vedānta tatvagnyam Vidhuśekhara Bhāratīm  ||

(he who is a worshipper Śrīvidyā, he who bears a character as clear as crystal and a master in VedaVedānta, to (them) Vidhuśekhara Bhāratī, I offer my prayers).
with this Shloka by Śrī Kṛṣṇa Bhaṭ of Narasimharājapura, we offer our salutations at the lotus feet of Jagadguru Śrī Śrī Vidhuśekhara Bhāratī Sannidhānam.

To read the various articles on our e-magazine ‘Jnānadā’, visit our website www.jnanada.in or check out our facebook page.

1 ಅಭಿಪ್ರಾಯ

1 Comment

  1. A. Venkateshan

    July 28, 2017 at 2:19 pm

    Vande guru paramparam

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!