Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Connect with us
jnanada

ಶೃಂಗಗಿರಿಯ ವೈಶಿಷ್ಟ್ಯ / significance of Sringeri

ಶೃಂಗೇರಿ ಶರನ್ನವರಾತ್ರಿಯ ವಿಶೇಷ 11 Sharannavaratri in Sringeri 11

Published

on

ಕನ್ನಡ1 of 2
To Change Language, Click ← → (arrow) Button

 

ಶೃಂಗೇರಿ ಶರನ್ನವರಾತ್ರಿಯ ವಿಶೇಷ 11

ಶ್ರೀಮದ್ರಾಜಾಧಿರಾಜಗುರುಭೂಮಂಡಲಾಚಾರರ್ಯವರ್ಯರು

ದಕ್ಷಿಣಾಮ್ನಾಯ ಶ್ರೀ ಪೀಠದ ಜಗದ್ಗುರುಗಳು ಶರನ್ನವರಾತ್ರಿಯನ್ನು ತುಂಬಾ ವೈಭವದಿಂದ ಆಚರಿಸುತ್ತಾ ಬಂದಿದ್ದಾರೆ.ಶೃಂಗೇರಿ ಧರ್ಮಸಂಸ್ಥಾನದ 14 ನೆಯ ವ್ಯಾಖ್ಯಾನಸಿಂಹಾಸನಾಧೀಶ್ವರರಾಗಿದ್ದ ಜಗದ್ಗುರು ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮೂಲ ಪ್ರೇರಕ ಶಕ್ತಿಯಾಗಿದ್ದರು.ವಿಜಯನಗರದ ಸ್ಥಾಪಾನ ದೊರೆಗಳಾದ ಹಕ್ಕ-ಬುಕ್ಕರು ಸಾಮ್ರಾಜ್ಯವನ್ನು, ಸಿಂಹಾಸನ, ಪಲ್ಲಕ್ಕಿ,ರತ್ನಕಿರೀಟ,ಛತ್ರ-ಚಾಮರಾದಿ ಸಮಸ್ತ ರಾಜಲಾಂಛನಗಳನ್ನು ಶೃಂಗೇರಿ ಜಗದ್ಗುರುಗಳ ಪಾದಕಮಲಗಳಲ್ಲಿ ಭಕ್ತಿಯಿಂದ ಸಮರ್ಪಿಸಿ ಗುರುಭಕ್ತಿ ಮೆರೆದರು. ಮೈಸೂರು, ಸಂಡೂರು,ಹೈದ್ರಾಬಾದ್ ನಿಜಮ,ಕೆಳದಿ ನಾಯಕರು ಸೇರಿದಂತೆ ಹಲವಾರು ದೊರೆಗಳು ಆಭರಣಾದಿಗಳನ್ನು ಸಮರ್ಪಣೆ ಮಾಡಿದ್ದಾರೆ.ಈ ಭಕ್ತಿಯ ಕಾಣಿಕೆಗಳನ್ನು ನವರಾತ್ರಿಯ ದರ್ಬಾರ್ ಸಂದರ್ಭದಲ್ಲಿ ಜಗದ್ಗುರು ಮಹಾಸ್ವಾಮಿಗಳು ಧಾರಣೆ ಮಾಡುತ್ತಾರೆ.

“ಕರ್ಣಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ” “ಶ್ರೀಮದ್ರಾಜಾಧಿರಾಜಗುರುಭೂಮಂಡಲಾಚಾರ್ಯ” ಎಂಬ ಬಿರುದುಗಳನ್ನು ಗೌರವ ಪೂರ್ವಕವಾಗಿ ರಾಜಮಹಾರಾಜರು ಜಗದ್ಗುರುಗಳಿಗೆ ಸಲ್ಲಿಸಿದ್ದಾರೆ.

ಗುರುಪರಂಪರೆಗೆ ಪ್ರಣಾಮಸಲ್ಲಿಸುತ್ತಾ…

ಕನ್ನಡ1 of 2
To Change Language, Click ← → (arrow) Button

1 ಅಭಿಪ್ರಾಯ

1 Comment

  1. Rukminidinesh

    October 11, 2017 at 3:09 am

    Thanks very good articles

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *

ಜ್ಞಾನದ ಚಂದಾದಾರರಾಗಿ (Subscribe)

Get JNANADA Latest post Directly

to your Inbox for Free


Like Jnanada Facebook Page

Recent Articles

Popular posts

Archives

Copyright © 2017 Jnanada, All Rights Reserved

Get JNANADA Latest post Directly to your Inbox for Free

 

error: Content is protected !!